ದೇವರಾಜ್ ಹುಣಸಿಕಟ್ಟಿ
ನೀವು ನಮ್ಮನ್ನ ಹೂಳತಿರಿ
ನಾವು ಮಣ್ಣೊಡನೆ ಬೆರತು
ಮಣ್ಣಾಗಿ ಹೊಸ ಚಿಗುರು
ಪಡೆವ ಸಸಿಯಾಗಿ ನಳನಳಿಸತಿವೋ ಯಪ್ಪಾ…!
ನೀವು ನಮ್ಮನ್ನ ಸುಡತಿರಿ
ನಾವು ಬೂದಿಯಾಗುವ ಮುನ್ನ
ಗಾಳಿಯೊಡನೆ ಬೆರೆತು ಉಸಿರು ಕೊಂದವರಿಗೆ ಉಸಿರನ್ನೇ ದಾನ ನೀಡತಿವೋ ಯಪ್ಪಾ….!
ನೀವು ನಮ್ಮನ್ನ ನಿಕೃಷ್ಠವಾಗಿ ಕಾಣತಿರಿ ಅವಮಾನವನ್ನೇ ತುಸುವೆ
ತುಸು ಬಾಗಿಸಿ ಮಾಗಿಸಿ ಮಳೆ ಗಾಳಿ
ಚಳಿಗೆ ಮಾನದ ಹೊದಿಕೆಯಾಗಿಸಿ ಕೊಳತಿವೋ ಯಪ್ಪಾ…!

ನೀವು ಪುಸ್ತಾಕದಾಗಿಂದ
ತೆಗೆದಿವಿ ಅಂತಾ ಬೀಗ ಬ್ಯಾಡ್ರೋ
ನಾವ್ ಮಸ್ತಕದೊಳಗ್ ಬರ್ತಿಯಾಗಿ
ಕುಂತಿವೋ ಯಪ್ಪಾ…!
ಎಷ್ಟoತ ತೆಗಿತಿರೋ…ಎಲ್ಲೆಲ್ಲೆಂತ
ತೆಗಿತಿರೋ ಯಪ್ಪಾ…
ನಾವ್ ಈ ನೆಲದ ಮಕ್ಳದೀವಿ….!!
ಮಣ್ಣೊಳಗ ಬೆರೆತಿವಿ
ಮರದಾಗ ಹಣ್ಣಾಗಿ ಹುಟ್ಟತಿವಿ….
ಯಾಕಂದ್ರ ನಾವ್
ಈ ನೆಲದ ಅಸ್ತಿತ್ವ ಅದೀವಿ…
ಬರ್ತಿ ಸಾವಿಗಂಜಲಾರದ
ಕಿತ್ತೊಗಿಲಾರದ ಸತ್ವ ಅದೀವಿ….
ಮತ್ತೆ ಮತ್ತೆ ಹೇಳತೀನಿ ನಾವ್ ಈ ನೆಲದ ಮಕ್ಳದೀವಿ….!!






0 Comments