ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು..

ಮಾಲಾ ಮ ಅಕ್ಕಿಶೆಟ್ಟಿ

ಬಿರುಸಾದ ರಜ್ಜು ದಪ್ಪ, ಉದ್ದ
ಬಿಡಿಸಲಾರದ ಬಂಧ ಸುತ್ತಿಕೊಂಡರೆ
ಬಿಗಿತದ ಸೆಳೆತಕ್ಕೆ ತಲ್ಲಣಿಸುವ ಮನ
ಕಾಲ ಸ್ತಬ್ಧವಾದ ಭ್ರಮೆಯ ಉದಯ
ಅನಪೇಕ್ಷಿತ, ಬೇಡಾದ, ಸತ್ವಹೀನ
ಭಂಡ, ಕೆರಳಿಸುವ, ಕೆಣಕುವ ಈ ಪ್ರಶ್ನೆಗಳು
ಪ್ರತಿಯೊಂದಕ್ಕೂ ಉತ್ತರ ಬೇಕೆಂದಿಲ್ಲ
ಕೊಡಬೇಕೆಂದಿಲ್ಲ, ನಿರೀಕ್ಷೆ ಸುಳ್ಳು

ಈ ಜೀವ, ಜಗತ್ತು, ಹುಟ್ಟು, ಸಾವು,
ದೈವ, ಕರ್ಮ, ಶಿಕ್ಷೆ, ಮುಕ್ತಿಯ
ಪ್ರಶ್ನೆಗಳಿದ್ದರೂ ಹಲವು, ಹಲವರಲ್ಲಿ
ಉತ್ತರಿಸಲು ಕೆಲವರೂ ಇಲ್ಲ
ಪ್ರಶ್ನೆ ಪ್ರಶ್ನೆಗಳಾಗೇ ಬೆಟ್ಟಗಳಾಗಿ
ಉತ್ತರದ ಉತ್ಖನದಲ್ಲಿ ಸತತ
ಗುದ್ದಲಿ ಪಿಕಾಸು ಹಿಡಿದು
ಬಟ್ಟಲ ಕಣ್ಣು ವಿಸ್ತರಿಸಿ ಅಗಲ

ಶತಶತಮಾನಗಳ ರಹಸ್ಯ
ಹುದುಗಿಸಿಕೊಂಡ ಜೀವ ಜಗತ್ತೆಂಬ ವಿಶ್ವ
ಪಾರಮಾರ್ಥಿಕ ದೇವರ ಸ್ವರೂಪ, ರೂಪ,
ಆತ್ಮ, ಪರಮಾತ್ಮ, ಜೀವಾತ್ಮ ಗಳು
ಆತನ ನಿರ್ಮಾಣದೆಡೆಗೆ ಎತ್ತಿದ
ಕ್ಲಿಷ್ಟ ಪ್ರಶ್ನೆ ಪ್ರಶ್ನೆಗಳಿಗೆ
ಉತ್ತರಿಸಿಲ್ಲ ದೇವರು
ದೇವರಂತಾ ಮನುಷ್ಯರೂ ಇಲ್ಲ
ಜೀವನ ಸಂಘರ್ಷ ಯುದ್ಧವಾಗಿ
ಹಬ್ಬುತ್ತಲೇ ಹೋಗುತ್ತೆ ಬೇಲಿ

ಕ್ಷಣಿಕ ಮನುಷ್ಯ ಪ್ರಶ್ನೆಗಳಿಗೆ
ಅದೇ ಕ್ಷಣಿಕ ಮನುಷ್ಯ ಉತ್ತರಿಸಬೇಕೆಂದಿಲ್ಲ
ತೀರ್ಥವಾಗಿ ಪಾಲಿಗೆ ಬಂದ
ಜ್ಞಾನದ ಬಿಸಿ ಹಂಡೆಯಿಂದ
ತಾವೇ ತಮ್ಮ ತಮ್ಮ ಉತ್ತರ
ಪಡೆಯಬೇಕು ಕರ್ಮದ ಹಾಗೆ
ತಿಳಿನೀರ ಆತ್ಮಕ್ಕೆ ತಿಳಿಯದ್ದು
ರೂಕ್ಷ ಮನಸ್ಸಿಗೆ ಅಸಾಧ್ಯ

‍ಲೇಖಕರು Admin

June 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. prathibha nandakumar

    ಬಿಗುವಾಗದ ಕಾವ್ಯ ಬಂಧ. ಚೆನ್ನಾಗಿದೆ.

    ಪ್ರತಿಕ್ರಿಯೆ
  2. prathibha nandakumar

    ಬಿಗುವಾದ ಕಾವ್ಯ ಬಂಧ. ಚೆನ್ನಾಗಿದೆ.

    ಪ್ರತಿಕ್ರಿಯೆ
    • Mala Akkishetti

      Mam ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: