ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗಿಟ್ಟ ಅಲ್ಪವಿರಾಮ ತೆರವುಗೊಳಿಸು ಸಾಕು..

ಕಡ ತೀರಿಸಬೇಕಿದೆ

ಗೀರ್ವಾಣಿ

ನೀನೇನು ಲೆಕ್ಕ ಕೊಡುವುದು ಬೇಕಿರಲಿಲ್ಲ ನನಗೆ
ಒಗ್ಗರಣೆ ಸೌಟಿನಲ್ಲಿ ಸಿಡಿದ ಸಾಸಿವೆಯದೂ ಲೆಕ್ಕವಿದೆ ನನಗೆ
ನನ್ನ ಖಾತೆಯಲ್ಲಿ ನೀ ಜಮಾ ಮಾಡಿದ್ದು ಜೀವಮಾನಕ್ಕಾಗುವಷ್ಟು
ಆದರೂ ನಾನು ಕಡ ತೆಗೆದುಕೊಂಡೆ !

pickle jarಅಮ್ಮನಂತೆ ಪುಡಿಗಾಸು ಇಡಬೇಕಿಲ್ಲ ಸಕ್ಕರೆ ಡಬ್ಬಿಯಲ್ಲಿ
ಬೊಗಸೆ ತುಂಬ ಬೇಕಿತ್ತು ಸಕ್ಕರೆಯಂಥ ಪ್ರೀತಿ
ಮೊಗೆದು ಕೊಡಬಹುದಿತ್ತು ನೀನು
ಖಾತೆ ತುಂಬಿಸು ಎಂದೂ ಕೇಳುವುದಿಲ್ಲ.
ಲೆಕ್ಕ ಕೊಡು ಎನ್ನುವುದೂ ಇಲ್ಲ
ಈಗಿಟ್ಟ ಅಲ್ಪವಿರಾಮ ತೆರವುಗೊಳಿಸು ಸಾಕು

ನಿನ್ನ ಖಾತೆ ಚಾಲ್ತಿಯಲ್ಲಿಡಬೇಕೆಂದರೆ
ನಾ ಪಡೆದ ಕಡ ತೀರಿಸಬೇಕು
ಹಂಚಿಕೊಂಡ ಪ್ರೀತಿಯ ಮರೆತುಬಿಡಬೇಕು
ಬೇರೆಲ್ಲೋ ಹಬ್ಬಿರುವ ನನ್ ಬಳ್ಳಿಯ
ಕುಡಿ ತಿರುಗಿಸಬೇಕು

ನೀನೇನೋ ಲೆಕ್ಕ ಕೊಟ್ಟೆ ಆದರೆ
ನಿನ್ನ ಲೆಕ್ಕ ಯಾಕೋ ತಾಳೆಯಾಗುತ್ತಿಲ್ಲ
ತಪ್ಪಿದ್ದೆಲ್ಲಿ ಗೊತ್ತಿಲ್ಲ.
ನಡುವೆ ಎಲ್ಲೋ ಸಿಕ್ಕಿಕೊಂಡ ಭಾವ
ನಂಜಿಕೊಳ್ಳುವಷ್ಟು ನಂಜಿಕೊಂಡ ಮೇಲೆ
ಉಪ್ಪಿನಕಾಯ ಹಂಗೇಕೆ ಹೇಳು?

‍ಲೇಖಕರು Admin

9 June, 2016

3 Comments

  1. Anonymous

    true poetry…kaadadhe bidadhu…

  2. sandeep eshanya

    taanage beleyuva hambalada saalugalive i saaluglige….tumba hidisitu

  3. ಆದಿವಾಲ ಗಂಗಮ್ಮ

    ‘ಬೊಗಸೆ ತುಂಬಾ ಬೇಕಿತ್ತು ಸಕ್ಕರೆಯಂತ ಪ್ರೀತಿ,” ನಂಚಿಕೊಂಡ ಮೇಲೆ ಉಪ್ಪಿನಕಾಯಿ ಹಂಗೇಕೆ ಹೇಳು’- ಸರಳ ಸುಂದರ ಸಾಲು ಆದರೆ ಅರ್ಥಗರ್ಭಿತ ಬಹು ವಿಸ್ತಾರ. ಸೂಪರ್ ಗೀರ್ವಾಣಿಯವರೆ ತುಂಬಾ ಚೆನ್ನಾಗಿದೆ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading