ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಪ್ರತೀ ಹೆಣ್ಣೂ.. ಪಾಂಚಾಲಿ

ಇಲ್ಲಿ ಪ್ರತೀ ಹೆಣ್ಣೂ.. ಪಾಂಚಾಲಿ

Anand Rugvedi

ಆನಂದ ಋಗ್ವೇದಿ 

ಹೆಸರೆತ್ತಿದರೇ ಹೇವರಿಸಿ ಹುಬ್ಬೇರಿಸಬಹುದು ಸನಾತನಿಗಳು!
ಮುಜುಗರದಿ ಮೌನವಾಗುಳಿಯಬಹುದು ಮುಗುದೆಯರು. . .

ಆದರೂ
ಇದು ಸತ್ಯ!

ಎಳವೆಯಲ್ಲಿ ಕಿಶೋರಿಯ ಕಣ್ಣಗಲವೇ ಮುಗಿಲು
ದಿಗಿಲಿಲ್ಲದ ದಿನಮಾನಗಳಿಗೆ ಅವನೇ ದಿನಮಣಿ
ದಿವ್ಯ ಹಿಡಿದ ಆ ತನ್ನ ತಾಯಿಯ ಒಡನಾಡಿ, ಬದುಕೆಂಬ ಬಾನಂಗಳದ ಬಾನಾಡಿ – ಪರುಷ!

draupadi3ಕಿಶೋರಿಗೆ ಕನಸ ಮನಸ ತುಂಬೆಲ್ಲಾ
ಅವನೇ; ಆಪ್ತ ಬಂಧು. ಸರೀಕ ಹುಡುಗರಂತಲ್ಲದ  ಆ
ಗಡಸು ದನಿಯಲ್ಲೂ ಮಾರ್ದವತೆ!
ಗಂಡಸೆಂದರೆ ಹೀಗಿರಬೇಕೆಂಬ ಆದರ್ಶ – ಪ್ರಥಮ ಪುರುಷ : ಯುಧಿಷ್ಠಿರ!

ಹೊಸ ಹರೆಯದ ಬೆರಗು ಆ ಸಹಯಾನಿ; ಕಣ್ಣಲ್ಲೆ ಕಚಗುಳಿ ಇಕ್ಕಿ ಕಿಚ್ಚೆಬ್ಬಿಸುವ, ಕಳವಳ ಗುರುತಿಸಿ ನೋಟದಲ್ಲೇ ನೇವರಿಸುವ – ಥೇಟ್ ಅಮ್ಮನಂತಹ ಹುಡುಗ!

ತನ್ನಿತರೆ ಸಖಿಯರಿಗೂ ಸ್ಪಂದಿಸುವ ಆ ಮೋಹಕ ಪಾವಕ ಸುಳಿದೆಡೆಗೆಲ್ಲಾ ಕಣ್ಣು ಹೊರಳಿ, ಕಸಿವಿಸಿಗೊಳ್ಳುವ ಕರುಳು ಅರ್ಥವಾಗದ ಬೇಗೆ ಮೂಡಿಸುವವ –  ಪಾರ್ಥ!!

ತನ್ನ ಸು-ಭದ್ರೆಯ ಹುಡುಕಿ ಹೊರಟು ಹೋದವನ ಬೆನ್ನಿಗೆ ಒಂದು ನಿಡು ಸುಯ್ಲು
ನೆತ್ತಿಯ ಮೇಲೆ ಜೀರಿಗೆ ಅರಳು ಸುರಿದವನಿಗೆ ಕೊಟ್ಟು ಕೊರಳು ಹೊರಳಿ ನೋಡದ ಆ ದಾರಿಯಲಿ ಜೊತೆಯಾದವ ಬಲ ಭದ್ರ

ತನ್ನರಸಿಯ ಮನದಿಂಗಿತ ಅರಿವ ಸೂಕ್ಷ್ಮತೆ ಆ ಅಜಾನುಬಾಹುವಿಗೆ!
ಆಶಿಸಿದ ಸೌಗಂಧಿಕಾ ಪುಷ್ಪಕ್ಕಾಗಿ ನೂರಾರು ಯೋಜನ ಕ್ರಮಿಸಿ ತುರುಬಿಗಿಡುವ, ತೊಡರುವ ಕೀಚಕರ ನಿವಾರಿಸುವ ನೇಹಿಗ-
ಭೀಮ ಕಾಯ!

ಮಧುರ ಮಾತು ಕೃತಿ, ತುರುಗಳ ಎಲ್ಲಾ
ರಹಸ್ಯ ಬಲ್ಲ ತರುಲತೆಯಂತಹ ಸಖ: ಸಹ ಉದ್ಯೋಗಿ
ಮನದರಸನ ಕಿರಿಯ ಅನುಜನಂತಹ ಬಂಧು
ಹೇಳದೆಯೇ ಕೇಳುವ, ಕೇಳದೆಯೇ ಕೊಡುವ
ನಿಟ್ಟುಸಿರ ಘಳಿಗೆಗಳಿಗೆ ನೆರಳು – ನಕುಲ.

pandavasಮಗನಲ್ಲ – ಇವ ಮಗನ ವಯಸ್ಸಿನ ಬೆರಳು! ನಡು ವಯಸ್ಸಿನ  ತುಡಿತ ತಳಮಳ ಬದುಕ ಹೊಕ್ಕು ಮನಸು ಮರುಗದಂತೆ ಹದವರಿತ ಹೆಜ್ಜೆ. ನಡೆಗೆ ಮುಡಿ ಹಾಸಿದಂತೆ ನಡವಳಿಕೆ
ಬೇಸರ ಬವಳಿ ಬಂದಳಿಕೆಗಳಿಗೆ ಸದಾ ಕೈವರೆವ ಸಹಚರ – ಸಹದೇವ

ಇವಳ ಅಂತರಂಗದ ಅಂಗಳದಲ್ಲಿ ಇಂತಹವೇ ನೂರಾರು ಹೆಜ್ಜೆ
ಗೆಜ್ಜೆ ಸಪ್ಪಳವಿಲ್ಲದ ಗುಜು ಗುಜು ಗರಜಿಲ್ಲದ ಪರಿವೇಷ!

ಯಾವ ಜಮದಗ್ನಿಯ ಕೋಪ ಕಟ್ಟಳೆಗಳು
ಪರಶುರಾಮರ ಕೊಡಲಿ ಪೆಟ್ಟುಗಳೂ ತಟೆಗಟ್ಟವು ಅಂತರಂಗದೊಳಗೆ
‘ಅವಳ ಪುರುಷರ’ ಪ್ರವೇಶ!!

‍ಲೇಖಕರು Admin

15 May, 2016

4 Comments

  1. Anonymous

    Nice one…..

  2. Anonymous

    ಆಹಾ

  3. dsr

    Good!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading