ನಾನು ಅವನಲ್ಲ ಅವಳು ಕಣ್ಣಲ್ಲಿ ತಿಥಿ

lingadevaru b s

ಬಿ ಎಸ್ ಲಿಂಗದೇವರು 

ಕಳೆದ ವರ್ಷ “ನಾನು ಅವನಲ್ಲ ಅವಳು” ರಿಲೀಸ್ ಮಾಡಬೇಕಾದಾಗ ಪಟ್ಟ ಕಷ್ಟಗಳನ್ನು ಪಟ್ಟಿ ಮಾಡಬೇಕು ಅನ್ನೋ ಹೊತ್ತಿಗೆ “ತಿಥಿ ” ಬಂದಿದೆ. ನನಗೆ “ನಾನು ಅವನಲ್ಲ ಅವಳು” ಮತ್ತು “ತಿಥಿ” ಸಿನಿಮಾಕ್ಕೆ ಜನ ಬಂದಿದ್ದು, ಬರ್ತಾ ಇರೋದು ನೋಡಿದರೆ ಈ ರೀತಿಯ ಸಿನಿಮಾಗಳಿಗೆ ಜನ ಇದ್ದಾರೆ ಹಾಗೂ ಅವರನ್ನು ದೂರ ಇಟ್ಟಿದ್ದೇ ನಾವು!! ಅನ್ನಿಸಿತು. 70 -80 ರ ದಶಕದಲ್ಲಿ ಈ ರೀತಿಯ ಸಿನಿಮಾಕ್ಕೆ ಪ್ರೇಕ್ಷಕರ ಮೆಚ್ಚುಗೆ ಮತ್ತು ಬೆಂಬಲ ಇತ್ತು ಅಂತ ಕೇಳಿದ್ದೆ, ನಂತರ ಕಳೆದು ಹೋಗಿತ್ತು!!

ತಿಥಿ ಮತ್ತು ನಾನು ಅವನಲ್ಲ ಅವಳು ಎರಡೂ ಸಿನಿಮಾ SUPER HIT ನನ್ನ ಅಭಿಪ್ರಾಯದಲ್ಲಿ. ತಿಥಿಗೆ ಹೋಲಿಸಿದರೆ ನಾನು ಅವನಲ್ಲ ಅವಳು ಸ್ವಲ್ಪ LOUD ಆಗಿತ್ತು ಅನಿಸುತ್ತದೆ. ನಾನು ಅವನಲ್ಲ ಅವಳು ಚಿತ್ರದಲ್ಲಿ ಕೂಡ NON PROFESSIONAL ACTORS ಗಳನ್ನೇ ನಾನು ಬಳಸಿದ್ದು (80%) ಆದು ತಿಥಿ ಯಲ್ಲಿ 100% NON PROFESSIONAL ACTORS . ಇದು ಕನ್ನಡ ಚಲನಚಿತ್ರರಂಗದ ಬೇರೆ TREND ಹುಟ್ಟಿಗೆ ಕಾರಣವಾಗುತ್ತಾ!! ಕಾಲವೇ ಉತ್ತರnaanu avanalla? ಇವತ್ತು ಚಲನಚಿತ್ರ ಅಂದರೆ ಮನೋರಂಜನೆ ಮತ್ತು ಅದು ಹಾಡು. ಫೈಟ್. ಪಂಚಿಂಗ್ ಸಂಭಾಷಣೆ (ನಾಯಕರಿಗೇ ಸೀಮಿತ ) ಇತ್ಯಾದಿಗಳು ಒಳಗೊಂಡ ಒಂದು CLICHÉD FORMULA. ಅವುಗಳನ್ನು ಬಿಟ್ಟು ತಯಾರಿಸಿದ ಈ ಎರಡೂ ಸಿನಿಮಾಗಳು ವಾಣಿಜ್ಯ ವ್ಯವಸ್ಥೆಯಲ್ಲಿಯೂ ಒಂದು ಕಾಲು ಇಟ್ಟು, ಸೈ ಎನ್ನುವ ಕಾರಣಕ್ಕಾಗಿ ಮುಂದೆ ಕನ್ನಡ ಚಲನಚಿತ್ರರಂಗದ TREND ಬಗ್ಗೆ ನಾನು ಪ್ರಸ್ತಾವ ಮಾಡಿದ್ದು.

ಈ ಎರಡೂ ಸಿನಿಮಾಗಳ ವಸ್ತು/ಕಥೆ- ಭಿನ್ನ ಮತ್ತು ಚಿತ್ರೀಕರಣಕ್ಕೆ ಬಳಸಿದ ತಂತ್ರ ಮತ್ತು ತಂತ್ರಜ್ಞಾನ ಎರಡೂ ಒಂದೇ.. ಅದು ತಾಳ್ಮೆ! ಅನ್ನೋ ತಂತ್ರ, ಮತ್ತು DIGITAL ತಂತ್ರಜ್ಞಾನ. ಆದರೇ ಇಬ್ಬರೂ ಈ ಎರಡನ್ನೂ ಬಳಸಿಕೊಂಡು ಒಂದು ಬೇರೆಯ ನುಡಿಗಟ್ಟನ್ನ ಕಟ್ಟಲು ಪ್ರಯತ್ನಿಸಿದ್ದೇವೆ ಅನ್ನಿಸಿತು. ಈ NON ACTORS ಗಳನ್ನು ಬಳಸುವಾಗ ತಾಳ್ಮೆ ಬಹಳ ಮುಖ್ಯವಾದ ಅಂಶ, ಅದು ನಿರ್ದೇಶಕ ಒಬ್ಬನಲ್ಲಿ ಇದ್ದರೆ ಸಾಲದು, ಅದು ಇಡೀ ತಂಡಕ್ಕೆ ಅನ್ವಯ.

ನಾನು ಅವನಲ್ಲ …ಅವಳು ಚಿತ್ರದ ಬಗ್ಗೆ ಹೇಳೋದಿಕ್ಕಿಂತ ತಿಥಿ ಬಗ್ಗೆ ನನ್ನ ಅನಿಸಿಕೆ .
1. ತಂತ್ರಜ್ಞಾನ ಬಳಸಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಲು ಪ್ರಯತ್ನ ಮಾಡದೇ ಇರುವುದರಿಂದ ಎಲ್ಲಾ ದೃಶ್ಯಗಳು ಸಹಜವಾಗಿರುದು ಮತ್ತು ಪ್ರೇಕ್ಷಕರನ್ನು ಮೋಸ ಮಾಡದೇ ಇರುವುದು . ಮೋಸ ಅಂದರೆ ಈಗಿನ ತಂತ್ರಜ್ಞಾನದಿಂದ ಅನಗತ್ಯವಾದ ನಾಟಕ (Drama- Build up), ಹಿನ್ನೆಲೆ ಸಂಗೀತ, ಮೇಕಪ್ ಬಳಸದಿರುವುದು. ಒಂದು ಭ್ರಮಾಲೋಕಕ್ಕೆ. ಅತಿರೇಕದ ಅನಿರೀಕ್ಷಿತ ಲೋಕಕ್ಕೆ ಕೊಂಡೊಯ್ಯುದಿರುವುದು . ತಿಥಿಯನ್ನು ಇತ್ತೀಚಿನ ಭಾರತೀಯ ಸಿನಿಮಾ ಸಂದರ್ಭದಲ್ಲಿನ ಹಿನ್ನೆಲೆಯಲ್ಲಿ ಹೇಳೋದಾದರೆ ಮರಾಠಿಯ “ಕೋರ್ಟ್” ಸಿನಿಮಾಕ್ಕೆ ಹೋಲಿಕೆ ಮಾಡಬಹುದು, ಅದು ಸಿನಿಮಾ ನಿರ್ದೇಶಕ ಬಳಸಿರುವ ಚಿತ್ರೀಕರಣ ತಂತ್ರಕ್ಕೆ ಅಷ್ಟೇ. ಜಾಗತಿಕ ಮಟ್ಟದಲ್ಲಿ ಈ ರೀತಿಯ ತಂತ್ರ ಬಳಸಿರುವ ಬಹಳ ಸಿನಿಮಾಗಳು ಇವೆ.

2. ಕನ್ನಡ ನಾಡಿನ ಅಪ್ಪಟ ಗ್ರಾಮೀಣ ಪ್ರದೇಶದ ಬದುಕು ಮತ್ತು ದಿನ ನಿತ್ಯದ ಸಂಘರ್ಷವನ್ನೇ ಚಿತ್ರದ ವಸ್ತು ಮಾಡಲಾಗಿದೆ.

3. ಅತಿಯಾದ ಪ್ರಚಾರ ಇಲ್ಲದೇ ಕಡಿಮೆ ಚಿತ್ರಮಂದಿರ ಗಳಲ್ಲಿ ಪ್ರದರ್ಶನ ಆಗ್ತಾ ಇರೋದು ಕೂಡ ನಾವು ಗಮನಿಸಬೇಕು. ಈಗ ಒಂದೊಂದೇ ಚಿತ್ರಮಂದಿರ ಗಳು ಹೆಚ್ಚು ಆಗ್ತಾ ಇದೆ.

ಒಟ್ಟಾರೆ ಈಗ ಕನ್ನಡ ಚಲನಚಿತ್ರರಂಗದ ಪರ್ವ ಕಾಲ.

‍ಲೇಖಕರು Admin

May 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: