ಪರಿಮಳ ಜಿ ಕಮತರ್
ಹೋಗತ್ತ ಎಂದರೆ
ಹೋಗೇ ಬಿಡುವುದೆ?
ಬಾರದೂರಿನ ದಾರಿಗೆ
ಅಗಣಿತ ನಕ್ಷತ್ರಗಳ ಅರಮನೆಗೆ
ನೋಡದಿರು ಎಂದರೆ
ತಿರುಗಿ ತಿರುಗಿ ಕಾಡುವುದೆ
ನನಗೂ ತಿಳಿಯ (ಸ)ದೆ
ಸುಳಿವೂ ನೀಡದೆ
ಅಲ್ಲಾ,
ಇರುವುದಾದರೂ ಎಲ್ಲಿ ನೀ?
ಕರೆದರು ತಿರುಗದ
ನುಡಿದರು ಮಿಡಿಯದ
ನೀ ಕಲ್ಲಂತೂ ಅಲ್ಲ
ಕಂಬನಿಗೂ ಕರಗದ
ಹಂಬಲಿಸಿದರು ಅರಿಯದ
ನೀ ಬಂಡೆಯೂ ಅಲ್ಲ
ಕೋಟಿ ಜೀವರಾಶಿಗಳ
ಕಕ್ಕುಲಾತಿ ಇದೆ ನಿನಗೆ
ನನಗದು ಗೊತ್ತು
ಹುಡುಕಿದರು ಸಿಗದ
ನೀ ದೇವರಂತೂ ಅಲ್ಲ
ಕಾಯ್ದರು ಬರದ
ಚೈತನ್ಯದ
ಉಸಿರೆ
ಅಣುಕ್ಷಣವೂ ಜೊತೆಗಿದ್ದು
ಹೇಳಕೇಳದೆ
ಹೊರಟುಹೋಗುವ
ನೆನಪೆ
ಹೇಳು,
ನೀ ಇರುವುದಾರು ಎಲ್ಲಿ?





0 Comments