ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುಳ -ಬೆಳಕಿನ ಸೊಲ್ಲು – ೨

-ಲಡಾಯಿ ಬಸು

ಬೆಳಕಿದ್ದಾಗ ಲೋಕ
ನನ್ನನ್ನಷ್ಟೇಯಲ್ಲ
ನನ್ನ ನೆರಳನ್ನೂ
ಗುರುತಿಸಿತು
ಕತ್ತಲಾಯಿತು ನೋಡಿ
ಲೋಕದ ಕಣ್ಣಿಗೆ
ನನ್ನ ನೆರಳಲ್ಲ
ನಾನೂ ಕಾಣದಾದೆನು

ಹಗಲಿನಲಿ ದಾಟಲಾಗದ
ಗಡಿಗಳನು
ಇರುಳು ದಾಟಿದೆ
ಏನು ಮಾಡಲಿ
ಪ್ರೀತಿ ಇರುವುದು
ಬದನಾಮ ರಸ್ತೆಯಲ್ಲೇ ..!


ಬೆಳಕಿನ ದಾಸನಾದರೆ
ಕತ್ತಲು ಕಳೆಯುತ್ತದೆಂದರು ;
ಸರ್ವತಾ ನನ್ನಿಂದಾಗದು
ಎಂದು ಹೇಳಿ ಕಳಿಸಿದೆ ….!

ಬೆಳಕು
ಅಹಂಕಾರದ ಪಟ್ಟಕ್ಕೆರಿತು ;
ಕತ್ತಲಾಗಲು
ಬೇರೇನು ಬೇಕಿತ್ತು …?

ಲೋಕದ ಹಾಗೆ
ಹಗಲಿರಳು
ಬೆಳಕಿನದೇ ದ್ಯಾನವಾಗಿ
ಬೆಳಕಿನ ಬೆನ್ನಟ್ಟಿ ಹೊರಟೆ
ದಾರಿ ಮದ್ಯ ಒಂದು ಸಲ
ಹಿಂತಿರುಗಿ ನೋಡಿದೆ
ಕತ್ತಲು ಬೆನ್ನ ಹಿಂದಿತ್ತು
ಆಗಷ್ಟೇ
ನಂಬಿಕೆಗೆ ಅರ್ಹವಾದುದು
ಮುಂದಿರುವುದಲ್ಲ
ಬೆನ್ನ ಹಿಂದೆ ಬರುವುದು
ಎಂದಿತು ವಿವೇಕ …
ಲೋಕವೇ ಏನಾದರೂ
ಅಂದುಕೋ
ವಿವೇಕವನ್ನು ಮೀರಲಾರೆ …!

ಹೀಗೂ ಅಂದರಂತೆ
ಹಿಂದಿನವರು ; ಬೆಳಕು
ಇಲ್ಲದಿರುವುದೇ ಕತ್ತಲೆಯ ಹೆಸರು
ನಾನೂ ಹುಡುಕುತ್ತಿದ್ದೇನೆ
ಬೆಳಕಿನಲ್ಲಿ ಕತ್ತಲನ್ನು
ಕಾಣಲೊಲ್ಲದು …!

ಇರುಳಾಯಿತು  ;
ಹೊರಗಿದ್ದ ಬೆಳಕು
ಒಳಮನೆಗೆ ಬಂದಿತು
ಬೀದಿ ಬಾಗಿಲು
ಮುಚ್ಚಿ ಬಿಟ್ಟವು
ಬೆಳಕೂ ಬಂಧಿಯಾಯಿತು …!


ಕತ್ತಲಾಯಿತು ;
ಇರುಳು ಬೆಳಕಿಗೆ
ಮರುಹುಟ್ಟು ಕೊಟ್ಟಿತು

ಈ ಇರುಳಿನಲಿ
ನಿನ್ನ ಕಣ್ಣು
ಬೆಳಕಿನಂತೆ ಎಂದು
ಹೇಳಲಾರೆ ;
ನಾನೆಷ್ಟೇ
ಸ್ವಾಭಿಮಾನಿ ಎಂದರೂ
ಹರಿದ ಬಟ್ಟೆ
ಬೆಳಕಿನಲ್ಲಿ ದುಗುಡಗೊಳ್ಳುವದನ್ನು
ನನಗಿನ್ನೂ ಮರೆಯಲಾಗಿಲ್ಲ
೧೦
ಬೆಳಕಿನ ಮಹಿಮೆ
ಹೆಚ್ಚೇನಿಲ್ಲ ;
ಇರುಳು ಕನಸ
ಕಂಡವರನ್ನ
ಫೂಟಪಾತನಲ್ಲಿ ನಿಲ್ಲಿಸಿತು

 

‍ಲೇಖಕರು avadhi

28 September, 2011

3 Comments

  1. Vithal Dalawai

    Aaladalli jaggane belagi hosa holahu moodisuttave ee hanigalu. Thanx sir

  2. D.RAVIVARMA

    kavana tumba arthagarbitavagide, ee kattalu belakinatadalle ee jeeva omme yarigu tiliyadante jari hogadantu dita.d,ravi varma hospet

  3. Tejaswini Hegde

    ಕತ್ತಲಾಯಿತು ;
    ಇರುಳು ಬೆಳಕಿಗೆ
    ಮರುಹುಟ್ಟು ಕೊಟ್ಟಿತು

    Double liked…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading