ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಸೋಷಿಯಲ್ ಮೀಡಿಯಾ ಜಮಾನ..

ಸರೋಜ ಪ್ರಶಾಂತಸ್ವಾಮಿ

ನಮ್ಮ ಇಪ್ಪತ್ತೋಂದನೇ ಶತಮಾನ,

ಸೋಷಿಯಲ್ ಮೀಡಿಯಾದೇ ಜಮಾನ.

ಎಲ್ಲರೂ ಕೈನಲ್ಲು ಐಫೋನು, ಸ್ಕ್ರೀನ್ ಟಚ್ಚು,

ಸುತ್ತಮುತ್ತಲಿನವರಿಗೆ ಇವರು ನೋ ಟಚ್ಚು.

ಮುಂಜಾನೆ ಸುಪ್ರಭಾತ ವಾಟ್ಸಪಿನಲಿ ಶುರು,

ಹಗಲೆಲ್ಲ ತಡಕಾಡುತಿರು ಗೂಗಲ್ ಗುರು.

ಯುಟೂಬಿನಲಿ ನೋಡಿ ತರತರದ ಅಡುಗೆ,

ಆನ್ಲೈನ್ ಶಾಪಿಂಗ್ನಲಿ ಕೊಳ್ಳು ಬಣ್ಣದ ಉಡುಗೆ.

ಕೂತರು,ನಿಂತರು ಕ್ಲಿಕ್ಕಿಸಿ ಛಾಯಾಚಿತ್ರ,

ಅಪ್ಲೋಡಿಸಿ ಫೇಸ್ಬುಕ್ಗೆ ಆಗುವೆವು ಹತ್ರ.

ಟ್ವಿಟರ್ನಲಿ ಹಾರುವವು ಸುದ್ದಿಯ ರೆಕ್ಕೆ,

ಅದಕ್ಕೊಂದಿಷ್ಟು ಜೋಡಿಸಿ ಟಿಪ್ಪಣಿ ಟೀಕೆ.

ಮಕ್ಕಳು ಬ್ಯುಸಿ ಇನ್ ಗೂಗಲ್ಲು ಯುಟ್ಯೂಬ್,

ಒಂದು ಬರಹ ಆಟಕ್ಕೆ ಇವರದು ಇನ್ಕ್ವಿಲಾಬ್.

ಇರಲಾರೆವು ನಾವು ಬಿಟ್ಟು ಈ ನೆಂಟರನ್ನು,

ಇವರೊಂದಿಗೆ ನಾವು ೩೪×ಸೆವೆನ್ನು….

‍ಲೇಖಕರು Avadhi

8 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading