
ಕೈದಾಳ್ ಕೃಷ್ಣಮೂರ್ತಿ
ಎಂತಹ ಗಹನವಾದ ವಸ್ತುವಾದರೂ
ಎಕ್ಸ್ಪೈರಿಯಾದ ಮೇಲೆ ತಿಪ್ಪೆ ಸೇರಲೇಬೇಕು
ಕೊಳೆತರಷ್ಟೇ ಗೊಬ್ಬರ
ಎಷ್ಟೇ ಗಹನವಾದ ಜೀವವಾದರೂ
ತೀರಿಹೋದ ಮೇಲೆ ಹೆಣವಾಗಬೇಕು
ಕೊನೆಗೆ ಮಣ್ಣೋ? ಗಾಳಿಯೋ?

ಕೆಲವರು ಮಣ್ಣಲ್ಲಿ ಮಣ್ಣಾಗಿ
ಒಂದು ದಿನ ಮರವಾಗಿ
ಹೂವ್ವಾಗಿ ಹಣ್ಣಾಗಿ ಆಹಾ
ಮತ್ತೆ ಕೆಲವರು ಬೆಂಕಿಯಾಗಿ
ಬೂದಿಯಾಗಿ ಗಾಳಿ ಸೇರಿ
ಕೊನೆಗೊಂದು ದಿನ ನಿಮ್ಮ ಕಣ್ಣ ಸೇರಿದರೆ !
ಇತಿಹಾಸ ಸೇರಿದವರ ಕತೆಯೋ ಇಷ್ಟೇ
ಮಣ್ಣಾದ ಬೆಂಕಿಯಾದ
ಒಳಗಾದ ಹೊರಗಾದ ಕತೆಯಂತೆ






0 Comments