ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಳುವ ನೋವು

ಎನ್. ಶೈಲಜಾ ಹಾಸನ

ನೋವೊಂದು ಮೂಲೆಯಲಿ
ಬಿಕ್ಕಿ ಬಿಕ್ಕಿ ಅಳುತ್ತಿದೆ
ಅದೆಷ್ಟು ಹೊತ್ತು ಅತ್ತೀತು

ಅಳಲಿ ಲಕ್ಷ್ಯ ತೋರದೆ
ಮುಸುಕಿಕ್ಕಿ ಮಲಗಿದೆ,
ನಟ್ಟಿರುಳಲಿ ಪಕ್ಕನೆ
ಎಚ್ಚರ ನೋಡಿದರೆ

ಮೂಲೆಯಲಿ ಬಿಕ್ಕುವ
ಮೆಲ್ಲ ಮೆಲ್ಲನೆ ಸದ್ದು
ನೆಮ್ಮದಿಯ ನಿದ್ದೆ
ಕಣ್ಣಿಗತ್ತದೆ, ತಲ್ಲಣದಿ
ಮನಸ್ಸು ಮಣಭಾರ

ಎದ್ದು ನೋವನೆತ್ತಿ
ಬೆನ್ನ ಸವರಿ ಎದೆಗಾನಿಸಿ
ಕನಿಕರಿಸಿ ಅಪ್ಪಿಕೊಂಡು

ತಿಜೋರಿಯಲ್ಲಿರಿಸಿದ
ಖುಷಿ, ಪ್ರೀತಿ, ಸಹನೆ
ಒಲುಮೆಯ ಒಂದೊಂದು
ತುತ್ತು ತಿನಿಸಿ, ಕಾಳಜಿಯ
ಮಧುವನುಣಿಸಿ
ಮೂಲೆಯಲಿ ಮೆತ್ತನೆ ಹಾಸಿ
ಇಂದು ಮಲಗು
ಕೊರಗದೆ

ನಾಳೆ ಹೊರಟುಬಿಡು
ಪದೇ ಪದೇ ತುತ್ತು
ತಿನಿಸಲಾರೆ
ಎದೆಗಪ್ಪಿಕೊಳ್ಳಲಾರೆ
ಅದೆಷ್ಟು ನೋವ
ಎದೆಗಪ್ಪುವುದು
ಸಂತೈಸುವುದು

‍ಲೇಖಕರು Avadhi

18 December, 2020

1 Comment

  1. T S SHRAVANA KUMARI

    ಒಳ್ಳೆಯ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading