ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರೇನಹಳ್ಳಿ ಧರ್ಮೇಂದ್ರ ಕುಮಾರ್‌ ಜೊತೆ ‘ಫಟಾ ಫಟ್’‌

ಆರೇನಳ್ಳಿ ಶಿವಶಂಕರ ಧರ್ಮೇಂದ್ರ ಕುಮಾರ್‌ ಈಗ ‘ಸೋಶಿಯಲ್ ಮೀಡಿಯಾ ಡಾರ್ಲಿಂಗ್’.

ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಮಿಂಚಿದವರು ಇದ್ದಾರೆ. ಆದರೆ ಧರ್ಮೇಂದ್ರ ಕುಮಾರ್ ಸೋಶಿಯಲ್ ಮೀಡಿಯಾದ ಮುಖ್ಯ ಸ್ಥಾನ ಆಕ್ರಮಿಸಿದ್ದರಲ್ಲಿ ವಿಶೇಷವಿದೆ.

ಏಕೆಂದರೆ ಇವರು ಆಯ್ಕೆ ಮಾಡಿಕೊಂಡದ್ದು ಚರಿತ್ರೆಯನ್ನು.

ಚರಿತ್ರೆ ಎಂದರೆ ಸಾಕು ರಾಜಮಹಾರಾಜರು ಎದ್ದ ಬಿದ್ದ, ಅಂಕಿ ಅಂಶಗಳ ಕಥೆ ಎಂದು ಮಾರು ದೂರವೇ ನಿಲ್ಲುವ ಕಾಲದಲ್ಲಿ ಧರ್ಮೇಂದ್ರ ಕುಮಾರ್ ಅತಿ ಪ್ರೀತಿಯಿಂದ ಮೈಸೂರಿನ ಚರಿತ್ರೆಯನ್ನು ನಮ್ಮ ಮನೆಯ ಕಥೇನೋ ಎನ್ನುವಂತೆ ಬಿಚ್ಚಿಡುತ್ತಿದ್ದಾರೆ.

ಹೀಗಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಚರಿತ್ರೆಯ ಧರ್ಮೇಂದ್ರ ಕುಮಾರ್ ಎಂದೇ ಹೆಸರಾಗಿದ್ದಾರೆ.

ಇವರೊಂದಿಗೆ ಅವಧಿ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.

೧) ಚರಿತ್ರೆ ತಿಳಿಸುವ ಆಸಕ್ತಿ ಹೇಗೆ ಹುಟ್ಟಿಕೊಂಡಿತು ?

 ನಾವು ಬಾಲ್ಯದಲ್ಲಿ ಇದ್ದಾಗ ಪ್ರತಿ ರಸ್ತೆಯಲ್ಲೂ ಅರಮನೆಯಲ್ಲಿ ಕೆಲಸ ಮಾಡುವವರು ಇದ್ದರು. ಅಲ್ಲಿಂದ ತುಂಬ ಕಥೆಗಳು ಬರ್ತಾಯಿದ್ವು ಅವುಗಳನ್ನ ಈಗ ವಿಡಿಯೋ ಮಾಡಿ ಜನರಿಗೆ ತಲುಪಿಸುತ್ತಾ ಇದ್ದೇನೆ.

೨) ಮೈಸೂರಿನ ಕಥೆಗಳು ಎಷ್ಟು ತೃಪ್ತಿ ನೀಡಿದೆ ?

 ಅತ್ಯಂತ ತೃಪ್ತಿ ನೀಡಿದೆ. ಇನ್ನೂ ಜನರಿಗೆ ಹೆಚ್ಚೆಚ್ಚು ಕೊಡಬೇಕು ಅನ್ನೋ ಜವಾಬ್ಧಾರಿ ಹೆಚ್ಚಿದೆ.

೩) ರಾಜ ಮಹಾರಾಜರು ನಿಮ್ಮ ಕನಸಿನಲ್ಲಿ ಬಂದು ತಮ್ಮ ಚರಿತ್ರೆಗಳನ್ನ ನಿಮಗೆ ತಿಳಿಸುತ್ತಾರಾ ?

 ನನಗೆ ಅತ್ಯಂತ ಇಷ್ಟದ ಮಹಾರಾಜ ನಾಲ್ವಡಿ ಪ್ರಭುಗಳು. ಕೆಲವೊಮ್ಮೆ ಕನಸಿನಲ್ಲಿ ಬರುತ್ತಾರೆ.

೪) ಕಥೆ ಹೇಳುವುದನ್ನು ಯಾರಿಂದ ಕಲಿತಿರಿ ?

 ಅಮ್ಮನಿಂದ.

೫) ಹಿಂದಿನ ಜನ್ಮದಲ್ಲೇನಾದರು ಮೈಸೂರು ಆಸ್ಥಾನದಲ್ಲಿ ಕಥಾಭಟರಾಗಿದ್ದಿರೇ ?

 ಇರಬಹುದು. ಒಬ್ಬ ಹಿರಿಯ ಜ್ಯೋತಿಷಿ ನೀನು ಕಳೆದ ಜನ್ಮದಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜರ ಆಸ್ಥಾನದಲ್ಲಿ ಇದ್ದೆ ಎಂದು ಹೇಳಿದ್ದರು.

‍ಲೇಖಕರು Avadhi

4 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading