ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು..

ಸ್ವಗತ

ಸೋ ನಳಿನಾ ಪ್ರಸಾದ್

“ಹೀಗ್ಯಾಕೆ  ಸುಮ್ಮನಿದ್ದುಬಿಟ್ಟಿದ್ದೀಯ?
ಮಾತಾಡು,

ಸದ್ದುಬರುವಂತೆ ಪಾದ ಒತ್ತಿ ನಡೆದಾಡು,

ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು,

ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ,

ಆಗಾಗ ಕನ್ನಡಿ ನೋಡಿಕೊಂಡು ಮುಖವಿದೆಯಾ ಅಂತ ಖಾತ್ರಿ ಮಾಡಿಕೊ..

ನಗುವು ನಿನ್ನದು, ನಡಿಗೆ ನಿನ್ನದು;
ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು.

ಇಲ್ಲಿ ಹಠವಿದೆ, ತ್ಯಾಗವಿದೆ,
ಧ್ಯಾನವಿದೆ, ಪರಿಪೂರ್ಣ ಅರ್ಪಣೆಯಿದೆ.

ನೀ ದೇವಿಯಲ್ಲ;
ಬರಿ ಶಕ್ತಿಯಲ್ಲ..
ಮಾನವತೆಯ ಪರಿಪಾಕ.

ನಿನ್ನ ಆತ್ಮಸ್ಥೈರ್ಯ ಸಾಂಕ್ರಾಮಿಕವಾಗಬೇಕು
ಮಿಥ್ಯವನ್ನು ಭಗ್ನಗೊಳಿಸಲು;
ಸತ್ಯವನ್ನು ನಗ್ನಗೊಳಿಸಲು..

ಮೂಕಳಾದರೆ ಲೋಕವೂ ನೂಕಿಬಿಟ್ಟೀತು………..

ಶಬ್ದವಾಗು

 

‍ಲೇಖಕರು avadhi

29 March, 2020

8 Comments

  1. Ahalya

    ಹೌದಲ್ಲೇ, ಲೋಟಸ್.

  2. Shyamala Madhav

    ಸಂತೋಷ ನಳಿನಾ, ನೀವು ಅವಧಿಯಂಗಳದಲ್ಲಿ ಶಬ್ದಿಸಿದ್ದು ನನ್ನ ಸಂತೋಷ.

  3. Vimala G.P

    ಸ್ವಗತವು ಶಬ್ದವಾಗಿ ನಮ್ಮ ಮನ ಮುಟ್ಟಿದೆ. ಕವನವು ಸುಂದರವಾಗಿದೆ. ಅಭಿನಂದನೆಗಳು ನಳಿನ ರವರೇ.

  4. K N Srivalli

    ಶಬ್ದವಾಗು ಅತಿ ಸುಂದರ.

  5. Jayalaxmi Patil

    ಹೌದು ಶಬ್ದವಾಗಬೇಕು, ಸದ್ದಡಗಬೇಕು

  6. Susheela S. Devadiga

    ಬಹಳ ಚೆನ್ನಾಗಿದೆ ನಳಿನಾ, ಶಬ್ದವಾಗು……

  7. Sarojini Padasalgi

    ತುಂಬ ಸುಂದರ ಸ್ವಗತ ನಳಿನಾ ಅವರೇ.ಆದರೆ ಈ ಸ್ವಗತ ಸ್ವಗತವಾಗಿಯೇ ಉಳಿದದ್ದೇ ದೊಡ್ಡ ವಿಡಂಬನೆ.ಶಬ್ದವಾಗಿಯೂ ನಿಶ್ಯಬ್ದದ ಅಪ್ಪುಗೆಯಲ್ಲಿ ಒದ್ದಾಡೋದು ತಪ್ಪಿಲ್ಲ.ನಡಿಗೆ, ಉಸಿರಾಟ, ನಗು, ಅಳು ಎಲ್ಲವೂ ಸ್ವಂತದ್ದೇ ಮೇಲೊಂದು ಮೊಹರಿನ ಒತ್ತುವಿಕೆಗೆ ಕಾಯುವಿಕೆ ಬೇಕಿದೆ ಎಂಬ ಗೊಂದಲ ತಪ್ಪಿಲ್ಲ.ಅಬಲೆಯಲ್ಲ ಸಬಲೆ ಎಂದು ಸಾರಿ ಹೇಳುತ್ತ ನಿರ್ಬಲದ ಸುಳಿಯಲ್ಲಿ ಸಿಲುಕಿ ನರಳೋದು ತಪ್ಪಿಲ್ಲ.ನೂಕುವಿಕೆಯಿಂದ ಸಿಡಿದೆದ್ದು ನಿಂತರೂ ಗೋಡೆಯಾಸರೆ ಹಿಡಿಯೋದು ಬಿಟ್ಟಿಲ್ಲ.ಯಾಕೆ ಹೀಗೆ ಎಂಬುದೇ ಒಡೆಯಲಾಗದ ಒಗಟು.ಕ್ಷಣ ಕ್ಷಣಕೂ ಮನದಿ ರಿಂಗಣ
    ” ಹೆಣ್ಣಾಗಿ ಬಂದಿರುವಿ ಇಲ್ಲಿಗೆ
    ಜೋಕೆ ಜೋಕೆ ಬಲು ಜೋಕೆ”
    ಆ ಗುಂಗು ಹೋಗಿ ರಂಗು ತುಂಬಿ ಸ್ವಗತಕ್ಕೊಂದು ಬಾಹ್ಯದ ಹರಿವು ಸಿಕ್ಕೀತೇ ಎಂದು ಕಾದು ನೋಡಬೇಕಿದೆ.ನಳಿನಾ ನಿಮ್ಮ ಸುಂದರ ಕವನ ಎಷ್ಟೊಂದು ಮಾತು ಹೇಳಿಸಿತು ನೋಡಿ.ಅಭಿನಂದನೆಗಳು ಸುಂದರ ಕವನಕ್ಕೆ.ಮತ್ತೆ ಕಾಯುವೆ ನಿಮ್ಮ ಕವನಗಳಿಗೆ.
    ಸರೋಜಿನಿ ಪಡಸಲಗಿ

  8. Malati Bhat

    ಕವಿತೆ ತುಂಬಾ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading