ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಸಹಾಯಕ ರಾತ್ರಿಗಳಲ್ಲಿ ದಿಟ್ಟಿಸಲೂ ಆಗದ ವಿರಹವಿರುತ್ತದೆ ಅಲ್ಲಿ…’ – ಭವ್ಯ ಬರೆಯುತ್ತಾರೆ

ಕೆಂಪುಹಾಸಿನ ಜನರ ಕುರಿತು

ಹೆಚ್ ಸಿ ಭವ್ಯ

ಹೂವುಗಳಡಿಯಲ್ಲಿ ಅಗೋಚರ ಕೆಂಡಗಳಿದ್ದವು
ಹೊಳೆಯುವ ಮುಂಗಾಲುಗಳ ತೋರುತ್ತಾ
ನಡೆದ ಅವರ ಪಾದಗಳಲ್ಲಿ ಬಣ್ಣಗಟ್ಟಿದ ಬೊಬ್ಬೆಗಳು
ಆ ಬನಾವಟಿ ಚೆಹರೆಗಳಲ್ಲಿ ಅಪಾಪದ ಭ್ರಮೆ
ಗೊತ್ತಿಲ್ಲ, ನಿಮಗೆ
ಎದೆಯೊಳಗಿನ ಚೀರುಗಳು
ಸುಮ್ಮನಾದರೂ ನಗುತ್ತಿರುತ್ತವೆ
ನೀವು ಮೋಸ ಹೋಗುತ್ತೀರಿ..
 
ಹೊಟ್ಟೆಗಿಳಿಯುವ ಮೊದಲೇ
ಅರಗಿಹೋಗುವ ರುಚಿ
ಗುಡಿಸಲುಗಳಲ್ಲಿ ಮಾತ್ರವಲ್ಲ
ಚರಿತ್ರೆಯಾಗಿದೆ ಮಹಲುಗಳಲ್ಲೂ
ಅಪರಿಚಿತ ಮಗ್ಗುಲುಗಳು ಸೂಳೆಗೇರಿಗಳಲ್ಲಷ್ಟೇ ಅಲ್ಲ,
ಉಳಿದುಬಿಟ್ಟಿವೆ ಖಾಸಗೀ ಕೋಣೆಗಳಲ್ಲಿ

ಚಂದ್ರಲೋಕದ ಬಗ್ಗೆ ಭರಪೂರ
ಕನಸು ಹೊತ್ತವರೇ
ಅಸಹಾಯಕ ರಾತ್ರಿಗಳಲ್ಲಿ
ಕನಿಷ್ಠ ದಿಟ್ಟಿಸಲೂ ಆಗದ ವಿರಹವಿರುತ್ತದೆ ಅಲ್ಲಿ
ಹಠಬಿದ್ದು ಆಕಾಶ ಸೇರಿದ ಚುಕ್ಕಿ
ಹಠಾತ್ತನೇ ಕಳೆಯುತ್ತದೆ.
ಗೊತ್ತಿಲ್ಲ, ನಿಮಗೆ
ನೆಲದ ಬೇರುಗಳ ಕಣ್ತಾಕುಗಳೇ
ಕಳಚುವುದು ಆಕಾಶದ ಹೂವುಗಳನ್ನು
 
ನಿಮಗೆ ಗೊತ್ತಿಲ್ಲ
ಅನ್ನ ತೀರಿಸದ ಹಸಿವಿನ ಬಗ್ಗೆ
ಬಂಗಾರದ ದೇವರ ಮೆತ್ತಿಕೊಂಡ
ನಿಶ್ಯಕ್ತ ಪ್ರಾರ್ಥನೆಗಳ ಬಗ್ಗೆ
ಕೆಂಪುಹಾಸಿನ ಮೇಲೆ ಕೈಬೀಸುವ
ಅವರ ಮಾಟದ ಝಲಕಿನ ವಿವರಣೆಗಳು
ಚಪ್ಪಾಳೆಯ ಸದ್ದಿನಲ್ಲಿ ವಿಲೀನ
 

‍ಲೇಖಕರು G

3 February, 2014

8 Comments

  1. nagarajhettur

    ನಿಮಗೆ ಗೊತ್ತಿಲ್ಲ
    ಅನ್ನ ತೀರಿಸದ ಹಸಿವಿನ ಬಗ್ಗೆ
    ಬಂಗಾರದ ದೇವರ ಮೆತ್ತಿಕೊಂಡ
    ನಿಶ್ಯಕ್ತ ಪ್ರಾರ್ಥನೆಗಳ ಬಗ್ಗೆ
    ಕೆಂಪುಹಾಸಿನ ಮೇಲೆ ಕೈಬೀಸುವ
    ಅವರ ಮಾಟದ ಝಲಕಿನ ವಿವರಣೆಗಳು
    ಚಪ್ಪಾಳೆಯ ಸದ್ದಿನಲ್ಲಿ ವಿಲೀನ
    ಭವ್ಯ ಅವರೇ ಪದ್ಯ ಚೆನ್ನಾಗಿದೆ…..
    ಈ ಸಾಲುಗಳು ಇಷ್ಟವಾದವು

  2. gururaj katriguppe

    good poem, made me waiting for your more poems

  3. ಪದ್ಮನಾಭ ಭಟ್‌, ಶೇವ್ಕಾರ

    ತುಂಬಾ ಒಳ್ಳೆಯ ಪದ್ಯ. . ಇಷ್ಟವಾಯ್ತು. . .

  4. mmshaik

    chndada kavite..

  5. RR

    I always wanted to be the part of red carpet.. may be i am… may be iam not.. but your words made me…….
    Good Lines

  6. marideva hugar

    ಈ ಕವಿತೆ ತುಂಬಾ ಇಷ್ಟವಾಯಿತು.

  7. ಮಹದೇವ ಹಡಪದ

    ಭವ್ಯಕ್ಕ ಭಾಳ ಚಂದ ಪದ್ಯ ಬರದೀರಿ…

  8. MOULYA M

    ಕವಿತೆ ತಟ್ಟಿತಾ..? ಆವರಿಸಿಕೊ೦ಡಿತಾ..? ಅಥವಾ ಕವಿದಿದ್ದ ಎಲ್ಲದರಿ೦ದ ಒ೦ದೇ ಏಟಿಗೆ ಹೊರಗೆಡವಿಬಿಟ್ಟಿತಾ..? ಏನೊ೦ದೂ ತಿಳಿಯುತ್ತಿಲ್ಲಾ. speechless ಎನ್ನುವುದೂ ಕೂಡ ಪೇಲವವೆನುಸುತ್ತಿದೆ ಭವ್ಯಾ ಜೀ. each and every line is quitely penitrating into me. thanku.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading