ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶ್ಫಾಕ್ ಪೀರಜಾದೆ ಗಜಲ್

ಬೇಲಿಯೇ ಹೊಲಕೆ ಕೊಳ್ಳಿ ಇಟ್ಟಿದೆ ಏನು ಮಾಡಲಿ

ಅಶ್ಫಾಕ್ ಪೀರಜಾದೆ

ಈ ವ್ಯವಸ್ಥೆ ನನ್ನ ಕಣ್ಣು ಕಟ್ಟಿದೆ ಏನು ಮಾಡಲಿ
ಆ ಆವಸ್ಥೆ ನನ್ನ ನಾಲಿಗೆ ಸುಟ್ಟಿದೆ ಏನು ಮಾಡಲಿ

ಲೆಕ್ಕಣಿಕೆಗೆ ಕ್ರಾಂತಿಯ ಭಾಷೆ ಕಲಿಸಬೇಕಾದ ತುರ್ತು
ನೆತ್ತರು ಶಾಯಿಯಾಗಿ ಹೆಪ್ಪುಗಟ್ಟಿದೆ ಏನು ಮಾಡಲಿ

ಶಾಂತಿಯ ತೋಟದಲಿ ಸಾವಿನಾ ಆರ್ಭಟ ನೋಡು
ಆಕ್ರಂದನ ಮುಗಿಲು ಮುಟ್ಟಿದೆ ಏನು ಮಾಡಲಿ

ದೇಶ ಸುಡುವಾಗ ಪಿಟೀಲು ನುಡಿಸಿದ ರೋಮ್ ದೊರೆ
ಬಡಪ್ರಜೆಗಳ ಕಣ್ಣೀರು ಶಾಪ ತಟ್ಟಿದೆ ಏನು ಮಾಡಲಿ

ಸಾವಿನ ಸಂತೆಯಲಿ ಸೌದಾಗರರದೆ ಅಧಿಪತ್ಯ
ಮಿಥ್ಯ ಮಾನವೀಯತೆ ಮೆಟ್ಟಿದೆ ಏನು ಮಾಡಲಿ

ಅನ್ನ ಹಾಕುವ ಪ್ರಭುಗೆ ಋಣಿಯಾಗಿರಬೇಕು `ಪೀರ್‌ʻ
ಬೇಲಿಯೇ ಹೊಲಕೆ ಕೊಳ್ಳಿ ಇಟ್ಟಿದೆ ಏನು ಮಾಡಲಿ.

‍ಲೇಖಕರು Avadhi

8 October, 2021

2 Comments

  1. Ashfaq Peerzade

    ಗಜಲ್ ಪ್ರಕಟಿಸಿದ “ಅವಧಿ” ಬಳಗಕ್ಕೆ ತುಂಬ ಹೃದಯದ ಧನ್ಯವಾದಗಳು.

  2. ಅಶ್ಫಾಕ್ ಪೀರಜಾದೆ

    ಗಜಲ್ ಪ್ರಕಟಿಸಿ ಪ್ರೀತಿ ತೋರಿದ ಅವಧಿ ಬಳಗಕ್ಕೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading