ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಹೊಸಮನಿ ಕವಿತೆ- ಬೇಟೆಯಲೂ…

ಅಶೋಕ ಹೊಸಮನಿ

ಬಾಚಿಕೊ
ಕಪ್ಪು ನದಿಯನ್ನು
ಬೆಂಬಿಡದೆ ಬೆನ್ನಟ್ಟಿ
ಕತ್ತುಪಟ್ಟಿ ಹರಿಯುವಾಗಲೂ

ಮುರಿದು ತಾ ಹೆಗಲುಗಳನ್ನು
ಕತ್ತರಿಸಿ ತಾ ಪಾದಗಳನ್ನು
ತುತ್ತುಗಳ ತುತ್ತೀರಿ ಊದುವಾಗಲೂ
ಬತ್ತಿದ ಕಡು ನೇತ್ರಗಳ ದಾಳದಲೂ

ಬಾಚಿಕೊಳ್ಳು
ನೆರಳುಗಳನ್ನು
ನೆರಳ ಅಂಗೈಗಳನ್ನು

ಬಾಚಿಕೊ
ಕಪ್ಪು ಕಡಲನ್ನು
ಹಣೆಯ ಸಾಣೆಯಲಿ
ನರ್ತಿಸುವಾಗಲೂ

ಬಾಚಿಕೊ
ಕಪ್ಪು ಬೆಟ್ಟವನ್ನು
ಪುಳಕವನ್ನು
ಪ್ರೇಮವನ್ನು
ಬೀದಿ ಬೀದಿಗಳ ಬೇಟೆಯಲೂ

‍ಲೇಖಕರು Admin

17 April, 2022

1 Comment

  1. ಜಯಶ್ರೀನಿವಾಸ ರಾವ್

    ಅಭಿನಂದನೆಗಳು, ಅಶೋಕ್ … ಕವಿತೆ ಚೆನ್ನಾಗಿದೆ … : )

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading