ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳೊಟ್ಟಿಗೆ ಏನೂ ಅಲ್ಲದವರಿದ್ದಾರೆ..

ಸಾಗರಿ

ಕೃಷ್ಣ ಶ್ರೀಕಾಂತ ದೇವಾಂಗಮಠ

ಊರಿದ ಪಾದದ ಪ್ರತಿ ಇರಿಸಿ
ಭೋರ್ಗರೆವ ತಾನು ಅಳಿಸಿ
ಲೀನವಾಗಿಸಿಕೊಳ್ಳುತ್ತದೆ
sheಬದುಕಿನ ಪಾಠ ಹೇಳಿಕೊಡುತ್ತಲೇ
ನಾನೊಬ್ಬ ಶಿಷ್ಯ ಗುರು ತೋರುತ್ತಾನೆ
ಒಡಲಲ್ಲಿ ರಹಸ್ಯಗಳ ಹುದುಗಿಸಿಟ್ಟುಕೊಂಡು

ತಟದಲ್ಲಿ ಪುಟ್ಟ ಪಾದಗಳು ಗೂಡು ಕಟ್ಟುತ್ತವೆ
ತೆರೆ ಆಟಕ್ಕೆ ತೆರೆ ಎಳೆಯುತ್ತದೆ
ಹಠಕ್ಕೆ ಬಿದ್ದವರು ಅದೇ ಮರಳಲ್ಲಿ ಮತ್ತೆ ಮನೆ ಕಟ್ಟಿನಿಲ್ಲಿಸುತ್ತಾರೆ
ಬದುಕಿನ ಸ್ಥಿರತೆ ಪ್ರಶ್ನಿಸಿ  ಅಲೆ ಚಿಪ್ಪುಗಳ ದಡಕ್ಕೆಸೆಯುತ್ತದೆ

ಮಳೆಗರೆದ ಮೋಡ ಮಾಯವಾದಾಗ
ಆವಿಯಾಗುತ್ತಾಳೆ ಕಡುಕಪ್ಪುಗಟ್ಟುತ್ತಾಳೆ
ತೇಲಿ ಸಾಗಿ ಇನ್ನೇಲ್ಲೋ ಇಬ್ಬನಿಯಾಗಿ
ಮೂಲದವರಿಗೆಲ್ಲ ಸುದ್ದಿ ಕೊಡು ಕೊಳ್ಳುಗಳ ಮಾತಿಗೆ ಬಂದು ಸೇರುತ್ತಾರೆ
ಅಹಂ ನ ಗೋರಿ ಕಟ್ಟಿಕೊಂಡ ಮನುಷ್ಯನಿಗೆ
ಸಂಗ ಜೀವನದ ರುಚಿ ಹಚ್ಚಿ ಪ್ರೀತಿ ಹಬ್ಬಿಸುತ್ತಾಳೆ

ಅವಳೊಟ್ಟಿಗೆ ಬಹಳ ಸಂಖ್ಯೆಯ ಅನೇಕ
ಥರದ ಶೇರು ಕಶೇರು ಏನೂ ಅಲ್ಲದವರಿದ್ದಾರೆ ಎಲ್ಲರಿಗೂ ಒಡಲಲ್ಲೊಂದು ಬಸಿರು ನಿರ್ಮಿಸಿಟ್ಟು ಸದಾ ಪ್ರಸವ ಬೇನೆಗೆ ಸಾಕ್ಷಿಯಾಗುತ್ತಾಳೆ
ಪ್ರತಿ ಹೆರಿಗೆಯು ಅವಳಿಗೆ ಚೊಚ್ಚಲು
ಮೌನವಹಿಸುತ್ತಾಳೆ ಮತ್ತೆ ದ್ವನಿ ಅಡಗಿದ ಪಿಸುಮಾತಾಗುತ್ತಾಳೆ

‍ಲೇಖಕರು Admin

30 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading