ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು..

ಅವಳು ಹಾಡು – ೩
ಚೈತ್ರಾ ಶಿವಯೋಗಿಮಠ
ಏನೋ ಹಾಡಿಕೊಂಡು
ತನ್ನಷ್ಟಕ್ಕೆ ಸುಮ್ಮನಾಗುವಳು
ಎಂದು ತಿಳಿದಿದ್ದೆಯಲ್ಲವೆ?
ಹಾಡು ಇಂಪೆಂದೂ ಅಂದಹಾಗಿತ್ತು!
ಮೌನ, ಮೆಲುಗಾನದ
ಹಿಂದಿನ ಅರ್ಥ ಆಳವಾಗಿತ್ತು
ನಿನಗೆ ತಿಳಿದದ್ದು ಮಾತ್ರ
ಬಹಳ ಕಡಿಮೆ!
ಇನ್ನೂ ಎಷ್ಟು ದಿನ ಹೀಗೆ
ಕೂಡಿಹಾಕುವಳೊ ಎಂದು
ಸಣ್ಣಗೆ ಗೊಳಿಡಲು
ಶುರುವಿಟ್ಟೆಯಲ್ಲವೆ?
ಸ್ವಲ್ಪ ನೆನಪಿಸಿಕೊ ನಿನ್ನ ಕ್ರೌರ್ಯವ
ನಿನ್ನ ಆಸೆಬುರುಕತನ, ಲಂಪಟತನ!
ಅಮ್ಮಾ..ಅದು ಬೇಕು ಇದು ಬೇಕು
ಎಂದು ಗೋಗರೆದು ಪಡೆದು
ನಂತರ ನನ್ನ ಯಾವ ಅನುಮತಿಯೂ
ಪಡೆಯದೆ ದೋಚಲು ಹತ್ತಿದೆ!

ನಿರ್ಧಾಕ್ಷಿಣ್ಯವಾಗಿ ನನ್ನ ಬಂಧಿ
ಮಾಡಿದೆ. ನನ್ನ ಸ್ವರ, ಹಾಡನ್ನ
ಕಸಿದೆ. ಬಣ್ಣ-ಬೆಡಗುಗಳನ್ನ ಕೆಡಿಸಿದೆ
ತಾಯಿಯೆಂಬ ಕಾರುಣ್ಯವೂ ಇಲ್ಲದೆ
ನನ್ನ ಉಸಿರುಗಟ್ಟಿಸ ತೊಡಗಿದೆ.
ಸಾಕಲ್ಲವೆ ಇಷ್ಟು ನನ್ನ
ಸಂಯಮದ ಕಟ್ಟೆ ಒಡೆಯಲು?
ಈಗ ನನ್ನ ಸರದಿ, ತಿನ್ನಲು
ಅನ್ನ ಸಿಗದಂತೆ ಮನೆಯಲ್ಲಿ ಬಂಧಿಸಿದೆ
ಉಸಿರಾಡುವ ಗಾಳಿಯಲ್ಲಿ ವಿಷಾನಿಲ ಬೆರೆಸಿದೆ!
ನನ್ನ ಹಗೆಯನ್ನ ಹೀಗೆ ಬಗೆಯುತ್ತಿದ್ದೇನೆ!
ನನ್ನ ಮುಂದಿನ ನಡೆಯನ್ನ
ಊಹಿಸುತ್ತ, ತಲೆಕೆಡಿಸಿಕೊಂಡೇ ನಿತ್ರಾಣವಾಗುವೆ ನೀನು!!
ಕಾದು ನೋಡು!

‍ಲೇಖಕರು avadhi

10 May, 2020

3 Comments

  1. Nagraj Harapanahalli.karwar

    ಧ್ವನಿಪೂರ್ಣಕವಿತೆ…ಮದರ್ಸ್ ಡೇ ಗೆ ನೀಡಿದ ಕವಿತೆ
    ‌ಭೂಮಿ ತಾಯಿ ಮತ್ತು ಆಕೆಯ ಮಕ್ಕಳ ಸಂಬಂಧ ಮತ್ತು ವಾಸ್ತವದ ದುರಂತ ಹೇಳುವ ಧ್ವನಿಯ‌ ಕವಿತೆ.

    • ಚೈತ್ರಾ ಶಿವಯೋಗಿಮಠ

      ಧನ್ಯವಾದಗಳು ಸರ್

  2. T S SHRAVANA KUMARI

    ನಿಸರ್ಗವೇ ನಿಷ್ಠುರವಾದರೆ ಗತಿಯೇನು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading