ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನ ಕಣ್ಣಿಗೆ ರೆಪ್ಪೆಯಾಗಬೇಕೆಂದು ಕೈ ಮುಗಿದು ಬೇಡಿದ್ದೇನೆ ಖುದಾಗೆ…

ಗಜಲ್

ರೇಣುಕಾ ಎ ಕಠಾರಿ

ಡೋಲಿಯಲಾದರು ಒಂದಾಗಬೇಕೆಂದು ಅರ್ಜಿ ಹಾಕಿದ್ದೇನೆ ಖದಾಗೆ
ಅವನ ಕಣ್ಣಿಗೆ ರೆಪ್ಪೆಯಾಗಬೇಕೆಂದು ಕೈ ಮುಗಿದು ಬೇಡಿದ್ದೇನೆ ಖುದಾಗೆ
 
ಜಗದೊಳಗೆ ಇನ್ಸಾನ್ ಇಲ್ಲವೆಂದು ಮಲಗಿದ್ದ ಸೈತಾನಗಳು ಎಚ್ಚೆತ್ತು ಕುಣಿಯುತ್ತಿವೆ
ಇಬ್ಬರು ಒಂದಾಗುವ ಜನ್ನತ್ ನೀಡೆಂದು ನೆಲಕ್ಕೆ ಹಣೆ ಹಚ್ಚಿ ಕೇಳಿದ್ದೇನೆ ಖುದಾಗೆ

ಗುಂಗಿನಲಿ ಹಾಕಿಸಿಕೊಂಡ ಅವನೆಸರ ಹಚ್ಚೆ ನನ್ನೆಸರ ಕೂಗಿ ಕೂಗಿ ಕರೆಯುತಿದೆ
ಹುಚ್ಚಿಯಾಗಿ ಪ್ರೀತಿಗೆ ಅವನೇ ಬೇಕೆಂದು ಬಿಟ್ಟು ಬಿಡದೆ ಕಾಡಿದ್ದೇನೆ ಖುದಾಗೆ
 
ಮನಸೊಳಗೆ ಭಾವಗಳ ಬಿಗಿ ಹಿಡಿದು ಬುತ್ತಿ ಕಟ್ಟಿದ್ದೇನೆ ಅವನ ಕೇಳಲು
ಗುಬ್ಬಿ ಗೂಡು ಕಟ್ಟುವಂತೆ ಒಂದೊಂದೆ ಆಸೆಗಳ ಕಟ್ಟಿ ಹೇಳಿದ್ದೇನೆ ಖುದಾಗೆ
 
ಅವನ ಪ್ರೀತಿಯಿಂದಲೇ ತುಂಬಿದ ಗಲ್ಲದೊಳಗಿನ ನಗುವೆಂದೂ ಮಾಸದಿರಲಿ
ನೋವಿನ ಬೇವು ಬಿಟ್ಟು ಬೆಲ್ಲವ ಕೊಡೆಂದು ಬೇಡಿದ್ದೇನೆ ಖುದಾಗೆ
 

‍ಲೇಖಕರು G

6 November, 2014

7 Comments

  1. ಪ್ರಕಾಶ ಬಿ ಜಾಲಹಳ್ಳಿ

    ಗಜಲ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  2. nagaraj kamble

    ಚೆನ್ನಾಗಿದೆ.. ಇಬ್ಬರೂ ಒಂದಾಗುವ ಜನ್ನತ್ ನೀಡೆಂದು ನೆಲಕ್ಕೆ ಹಣೆ ಹಚ್ಚಿ ಕೇಳಿದ್ದೇನೆ ಖುದಾಗೆ.. ಗಜಲ್ ಚೆನ್ನಾಗಿ ಮೂಡಿ ಬಂದಿದೆ..

  3. Chand

    Really chendaagaite…

  4. ishwar Bidarannavar

    Hi akka Tumba chennagide Ghajal……. istu dina avadhiyalli …. nimma avadhigaagi kaadiddu santhoshavaagide.

  5. prakash dore

    tunba channagidi ghaial….

  6. mmshaik

    very very nice..renuka keep it up..

  7. Arunkumar Habbu

    Very cute poem and romantic too. Your prayer will be heard. It is a nice Gazal. Thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading