ಕರುಣಿಸೋ ರಂಗಾ…
ಮನ್ಜು ಹೆಗಡೆ
ನಾನು ಅರಚುತಲಿದ್ದೆ, ಮಾನ ಹೋಗುತಲಿದ್ದ ಕಾಲವದು
ಅವನಿಹನು ದೇವರಾಗಿ ಅನ್ನೋ ಭರವಸೆಯ ನಡುವೆಯೂ.
ಕಾರಣವದು- ನೀ ಎನ್ನ ಮಾನಿನಿಯಲ್ಲವೇ?
ಪತಿ ಮಹರಾಯ ತೊಡೆ ತಟ್ಟಿ ಮರುಗಿರಲು..
ಹಳೆಯ ನೆನಪನು ಕೆದಕಿ ನಾನು ಕಾಣಲು ಚಿತ್ರ
ಮುಗುಳುನಗು ನಕ್ಕಿತಂದು, ಇವನ ಅಟ್ಟಹಾಸವು ಇಂದಿಲ್ಲಿ ಹೆಡೆಯು
ಛಲದಂಕನು ಚತುರನ ಜೊತೆಗೂಡಿ ಪಗಡೆಯಾಡೆ
ನಾನಿಂದು ನಿಂತಿಹೆನು ಸೆರಗ ಬೇಡಿ..
ಐವರಿರುವರು, ಬಲವಿದ್ದೂ ಕೈಕಟ್ಟಿ ಕುಂತಿಹರು
ಪ್ರೀತಿ-ಮೋಜಿಗೂ ಸೇತುವೆ ಪಣವೇತಕೆ?
ಸತ್ಯ-ಧರ್ಮದ ಮುಂದೆ ಬಿಲ್ಲು ಬಾಣಗಳು ಕಸವು
ಸತಿಯ ಶೀಲವ ಉಳಿಸಲಾಗದವನು ನಿಜ ಪತಿಯೇ?
ತಾಯಿ ಅವಳು! ಅಲ್ಲಿ ಅತ್ತೆ ಮತ್ಸರವಿಲ್ಲ
ಅವಳೇ ಹೆತ್ತ ಅವನು ಹಿರಿಯನಲ್ಲವೇ?
ಕಣ್ಹೊರಳಿ ಕೆಳುತಲಿತ್ತು- ನಿನ್ನಿಂದಾದೀತಾ?
ಉತ್ತರವನ್ನೀಯಲು ಅವನು ಮಿತ್ರನಲಿ ಬಂಧಿ.
ಯಾರ ಬೇಡಲಿ ನಾನು, ಏನ ಪ್ರಾರ್ಥಿಸಿಯೇನು?
ಅವನೆಲ್ಲಿದ್ದನೋ ಬಂದಿಲ್ಲಿ ನಗುತ ನಿಂತಿಹನು
ಕೈಯ ಜೋಡಿಸಿ, ಕಣ್ಣ ಹನಿಗಳು ಉದುರಿ ಭಕ್ತಿಯಲಿ
ಬದುಕಿಸಿದೆಯೋ ಎನ್ನ ತಂದೆ! ಧನ್ಯಳಾದೇನೋ ಶ್ರೀ ಹರಿಯೇ…







very nice wonderful .. keep going …
very nice
chennagide…..