ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ನೆನಪಾಗುತ್ತಾಳೆ….

ಕುಸುಮ ಪಟೇಲ್ 

ಯಾಕೋ ಏನೋ

ಈಗೀಗ ಹೀಗೆ ಅಮ್ಮ

ಬಹಳೇ ಬಹಳೇ ನೆನಪಾಗುತ್ತಾಳೆ

ಅವಳಿಗೆ ಅವಳಮ್ಮನ

ನೆನಪಿನ ಹಾಗೆ..

 

ನೆನಪಾಗುತ್ತಾಳೆ

ಅವಳ ಅವಳಮ್ಮನ

ಎಲ್ಲಾ ಅಮ್ಮಂದಿರ

ತಲೆಯಾರು ತಲೆಮಾರು

ಸಂತತಿಯ ಸೇತುವೆಯ

ಲಾವಣಿಯ ಹಾಗೆ..

 

ನೆನಪಾಗುತ್ತಾಳೆ

ಆಯಕಟ್ಟಿನ ಆಯಂದಪ್ಪದ

ಹರಿತ ನಡಿಗೆಯ

ಬದುಕ ಬಿಡೆಯ ನಡುವೆ

ತಣ್ಣನೆಯ ಲಾಲಿಯ ಹಾಗೆ…

 

ನೆನಪಾಗುತ್ತಾಳೆ

ಹಸಿ ಉಸಿರು ಬಸಿರಲ್ಲಿ ಬಿಸಿಯಾದ

ಅವಳ ನೆನಪು

ಹಸಿರಾಗಿ ಇರುವವರೆಗೂ …

 

ನೆನಪಾಗುತ್ತಾಳೆ

ಮಣ್ಣಲ್ಲಿ ಮಣ್ಣಾಗುವ ದಿನ

ಹತ್ತಿರ ಸರಿ ಸರಿದು ಹರಿದಂತೆಲ್ಲಾ

ಬಹಳೇ ಬಹಳೇ …ನೆನಪಾಗುತ್ತಾಳೆ

 

ನೆನಪಾಗುತ್ತಾಳೆ

ವಸುಂಧರೆಗೆ ಮರುಳಾಗಿ

ಕರಗಿ ನಾ

ಮಣ್ಣಲ್ಲಿ ಮಣ್ಣಾಗುವವರೆಗೂ …ನೆನಪಾಗುತ್ತಾಳೆ

 

 

ನೆನಪಾಗುತ್ತಾಳೆ

ನೂಲು ಸೀರೆಯ ಹುಸಿ ಮುನಿಸಿನ

ಮಣ್ಣಲ್ಲಿ ಮಣ್ಣಾಗಿ

ತಣ್ಣಗಿರುವ ಅಮ್ಮ

ನೆನಪಾಗುತ್ತಾಳೆ …ಅವಳಿಗೆ

ಅವಳಮ್ಮನ ನೆನಪಿನ ಹಾಗೆ………

‍ಲೇಖಕರು avadhi

14 June, 2018

11 Comments

  1. Kusumapatel

    Thank you AVADHI.

  2. Lalitha Siddabasavaiah

    ಚೆನ್ನಾಗಿದೆ ಕವನ

  3. Lalitha Siddabasavaiah

    ಕವನ ಚೆನ್ನಾಗಿದೆ

  4. Kusumapatel

    ಲಲಿತ ಅವರೆ ಧನ್ಯವಾದಗಳು.

  5. Kusumapatel

    ಧನ್ಯವಾದಗಳು .

  6. nutana doshetty

    Kusumapatel

    ಕವನ ಚೆನ್ನಾಗಿದೆ

  7. Kusumapatel

    Thank you Nutana

  8. S a chinnapur

    ಅಮ್ಮ ನಿಜವಾಗಿಯೂ ನೆನಪಾದಳು. ಚೆನ್ನಾಗಿದೆ ಕವನ.

  9. Kusumapatel

    Thank you Sir

  10. ಬಸವರಾಜ.ಬೂದಿಹಾಳ.ಗೋವಾ.

    ಅಮ್ಮನ ನೆನಪುಗಳಿಗೆ ಬಣ್ಣಗಳಿಂದ ತೀಡಿ, ಶೃಂಗಾರಗೊಳಿಸಿ ವೈವಿಧ್ಯ ಭಾವಗಳನ್ನು ಪ್ರಕಟಿಸಿದ್ದಿರಿ. ವಂದನೆಗಳು.

  11. Kusumapatel

    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading