unique supri
ಈತ ಅಭಿಮನ್ಯು
ಹೊರಬರುವ ದಾರಿ
ತಿಳಿಯದಿದ್ದರೂ
ವ್ಯೂಹದೊಳಗೆ
ನಿತ್ಯ ನಿತ್ಯವೂ
ನುಗ್ಗುವ
ವ್ಯೂಹವೂ ತರಹೇವಾರು
ಪಾದಯಾತ್ರೆಯಲಿ
ಶುರುವಾಗಿ
ಜೇಮ್ಸ್ ಕೆಮರಾನ್
ಭಾಷಣದವರೆಗೆ
ಕ್ಯಾನ್ಸರ್ ಉಂಟು ಮಾಡಿ
ನಿವಾರಿಸುವ ಶುಂಠಿ
ಕಡಲ್ಗಾಲುವೆಯ ಈಜಿ
ದಡಸೇರುವ ಕುಂಟಿ
ಶತ್ರುಗಳು ಒಬ್ಬಿಬ್ಬರಲ್ಲ
ಐನು ಟೈಮಿಗೆ
ಕೈಕೊಡುವ ಉಪ್ಪಿಟ್ಟು
ಇಸ್ತ್ರಿಗೆ ಲೋಹ
ಕಾಯುವಾಗ
ಕತ್ತರಿಸಿ ಬೀಳುವ ಕರೆಂಟು
ತುರ್ತು ಕರೆ ಬಂದಾಗಲೇ
ಮಾಯವಾಗುವ ಒಂಟಿ ಸಾಕ್ಸು
ಗೇಟಿನೆದುರು ಡಬಲ್
ಪಾರ್ಕಿಂಗು
ತಂಪು ಬಸ್ಸಲ್ಲಿ ಬಿಸಿಯೇರಿಸುವ
ಮಾನಿನಿಯರು
ಜಗವನ್ನೇ ಗೆಲ್ಲ ಹೊರಡುವ
ವೀರನಿಗೆ
ಕಾಲವೇ ದೊಡ್ಡ ಶತ್ರು
ಇಷ್ಟಕ್ಕೆಲ್ಲ ದಣಿಯುವವನಲ್ಲ
ನಮ್ಮ ಅಭಿಮನ್ಯು
ಸಂಜೆ ಎಂಟಾದರೂ
ಡಿಯೋಡರೆಂಟಿಗೆ ಕೆಲಸವಿಲ್ಲ
ಟಾಯ್ಲೆಟಿಗೆ ನಾಲ್ಕಾರು
ಸಲ ಕಾಲಿಟ್ಟರೂ
ಉತ್ಸಾಹಕ್ಕೆ ಕೊರತೆಯಿಲ್ಲ
ಕರ್ಣ, ದುಶ್ಯಾಸನಾದಿಗಳು
ನೂರು ದಿಕ್ಕಿನಿಂದ
ನುಗ್ಗಿದರೂ ನಿಗ್ರಹಿಸಬಲ್ಲ
ಧೀರ
ಹೋರಾಟದಿ ದೂರ
ಹೋದ ತಂದೆಯ
ನೆನಪಲ್ಲಿ ಎದೆಯು
ಭಾರ
ಕಡೆಗೂ ಹತನಾಗುವನು
ಅಭಿಮನ್ಯು
ಕಂಡ ಕಂಡಲ್ಲಿ ವ್ಯೂಹವ ಭೇದಿಸಿ
ಮರುದಿನದ
ಮರುಜನ್ಮಕೆ ಅಣಿಯಾಗಿ
ದಿನದ ಶವವನ್ನು
ಹಾಸಿಗೆಯಲಿ ಹೂಳುತ್ತ…






Houdallave prati dinavu ondu hosa vyuha iddante . Kavana idannu chennagi saaruttade.