
ಏನದು ಅಸಂಬದ್ಧ ಪ್ರಶ್ನೆ?
-ಶಿವಕುಮಾರ್ ಮಾವಲಿ
ನನ್ನ ಗೆಳೆಯನೊಬ್ಬ ಎರಡು ವರ್ಷದ ಹಿಂದೆ ಆತನ ಗೆಳೆಯನಿಂದ ಬಂದ ಒಂದು ವಿಚಿತ್ರ ಈ ಮೇಲ್ ನ ಬಗ್ಗೆ ನನ್ನ ಬಳಿ ಹೇಳಿಕೊಂಡದ್ದನ್ನು ನಾನು ನಿಮಗೆ ಹೇಳಲು ಒಂದು ವರ್ಷವೇ ಬೇಕಾಯಿತು ನೋಡಿ .
ಆತ ಹೀಗೆ ಹೇಳಿಕೊಂಡಿದ್ದ ;
‘ ಸುಮಾರು ಹತ್ತನ್ನೆರೆಡು ವರ್ಷ ಆಯ್ತು ಮಾರಾಯ ಅವನು ನಾನು ಭೇಟಿಯೇ ಆಗಿಲ್ಲ . ನಮ್ಮ ನಡುವೆ ಅಷ್ಟೊಂದು ಗಾಢವಾದ ಸ್ನೇಹವೂ ಇಲ್ಲ .ನಾವಿಬ್ಬರೂ ಸಂಪರ್ಕದಲ್ಲೂ ಇಲ್ಲ . ಆದರೂ ಇದ್ದಕ್ಕಿದಂತೆ ಅವನು ಇಂತಹ ನಾನ್ಸೆನ್ಸ್
ಈ ಮೇಲ್ ಕಳಿಸಿದ. ಅದೂ ಒಂದೇ ಸಾಲು . ಮತ್ತೆ ಆ ನಂತರ ಒಂದೂ ಮೇಲ್ ಕಳಿಸಿಲ್ಲ . ನನ್ನ ಉತ್ತರ ನಿರೀಕ್ಷಿಸಿದ್ದಾನೋ ಇಲ್ಲವೋ ತಿಳಿಯುತ್ತಿಲ್ಲ . ಆದರೆ …’
ತಡೆದು ನಿಲ್ಲಿಸಿ ಕೇಳಿದ್ದೆ ,
‘ಅದಿರಲಿ , ಏನದು ಒಂದು ಸಾಲಿನ ಪ್ರಶ್ನೆ ?’
ಆತ ತನ್ನ ಮೊಬೈಲ್ ನಲ್ಲಿ ಈ ಮೇಲ್ ಓಪನ್ ಮಾಡಿ ತೋರಿಸಿದ್ದ :
” ನೀನು ಈಗಲೂ ಹಸ್ತ ಮೈಥುನ ಮಾಡಿಕೊಳ್ಳುತ್ತೀಯ ? “
ಇದೊಂದೇ ಸಾಲು ಅದರಲ್ಲಿದ್ದದ್ದು .

‘ It’s a nonsensical and weird question . Forget about it . Don’t give him a damn ” ಎಂದು ಪಟಪಟ ಇಂಗ್ಲೀಷ್ ನಲ್ಲಿ ಹೇಳಿ ಆ ಚರ್ಚೆಗೆ ಕೊನೆ ಹಾಡಿಬಿಟ್ಟಿದ್ದೆ.
ಆದರೆ ಈ ಪ್ರಶ್ನೆ ತನ್ನಲ್ಲಿ ಏನಾದರೂ ಹುದುಗಿಸಿಟ್ಟುಕೊಂಡಿದೆಯಾ ಎಂದು ಅಂದಿನಿಂದಲೂ ಚಿಂತಿತನಾಗಿದ್ದೇನೆ . ಜಗತ್ತಿನಲ್ಲಿ ಮತ್ಯಾರಾದರೂ ಇಂತಹ ಮೇಲ್ ಕಳಿಸಿರಬಹುದೆ ? ನಾನು ಯಾರಿಗಾದರೂ ಇದನ್ನು ಕಳಿಸಬೇಕೆ ? ನನಗೂ ಯಾರಾದರೂ ಇದನ್ನು ಕಳಿಸಿಬಿಟ್ಟರೆ ? ಎಂದು ಯೋಚಿಸುತ್ತಲೇ ಜಗದಲ್ಲಿರುವ ಮುಜುಗರ ತರಿಸುವ ಮತ್ತು ಪ್ರಾಮಾಣಿಕ ಪ್ರಶ್ನೆಗಳ ಬಗ್ಗೆ ನೆನೆದು ಈ ಎಪಿಸೋಡನ್ನು ಮರೆಯಲೆತ್ನಿಸುತ್ತಿದ್ದೇನೆ .






0 Comments