ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ

ಪ್ರಮೋದ ಜೋಶಿ

ಅಪ್ಪ ಮಲಗಿದ್ದಾನೆ
ಮಲಗಲಿ ಬಿಡಿ ಪಾಪ
ದಣಿದ ದೇಹದ ಆಯಾಸ
ಕೊಂಚವಾದರೂ ನೀಗಲಿ

ದುಡಿದು ದುಡಿದು ಸುಸ್ತಾದರೂ
ತೋರ್ಪಡದೇ ದಿನ ದೂಡಿದ
ನಮ್ಮ ಆಸೆ ನೀಗಿಸಲು
ನಮ್ಮ ಬಾಳು ಬೆಳಗಲು

ನೋವ ನುಂಗಿ ನಗುತ್ತಿದ್ದರೂ
ಗದರಿಸುತ್ತಲೇ ಬೆಳಸಿದಾ
ತನ್ನ ಹಿಡಿತದಲೇ ಇಟ್ಟುಕೊಂಡ
ಅತ್ತ ಇತ್ತ ನುಗ್ಗದಂತೆ

ಹೆದರಿಕೆ ಇತ್ತು ತುಸು ಕೋಪವೂ
ಅಪ್ಪನ ಈ ರೀತಿಗೆ
ಬೈಯುತ್ತಲಿದ್ದೆವು ಅಮ್ಮನ ಮುಂದೆ
ಅಪ್ಪನ ಈ ನಡೆತೆಗೆ

ಯಾವದನೂ ಹಚ್ಚಿಕೊಳ್ಳಲಿಲ್ಲಾ
ತನ್ನ ಹಾದಿಯಲ್ಲಿ ತಾನಿದ್ದ
ಬಯಸಿದ್ದೆಲ್ಲಾ ನೀಡುತ್ತ
ತಾನು ಮಾತ್ರ ಹಾಗೇ ಇದ್ದ

ತನಗೆ ದೊರಕದು ನಮಗೆ ದೊರಕಲಿ
ಎಂದು ದೇವರಲಿ ಬೇಡುತ್ತಿದ್ದ
ಇದೊಂದೇ ಬೇಡಿಕೆ ಅಪ್ಪನದು
ಮಕ್ಕಳ ಏಳಿಗೆಗೆ ತ್ಯಾಗವದು

ಅರಿತೆವು ಈಗ ಆತ ಕಳೆದ ದಿನಚರಿ
ನಾವು ಹೂವಾಗಲು ಆತ ಮುಳ್ಳಾದ
ನಮಗಾಗಿ ಆತ ದುಡಿದ
ಮುಪ್ಪಾದ

ಈಗ ಯಾಕೋ ಶಾಂತವಾಗಿ ಮಲಗಿದ್ದಾನೆ
ಎಬ್ಬಿಸುವ ಮನಸಿಲ್ಲಾ
ಆತನ ದಣಿವು ದುಃಖ ನಾ ಹೊರುವೆ
ಆತನ ಮುಖದಲಿ ನಗುವ ತರುವೆ

ನನ್ನ ಮಾತಿಗೆ ಮನದ ಸಮ್ಮತಿ
ಇನ್ನಾದರು ವಿರಮಿಸಲಿ ನಮ್ಮ ಜೊತೆ
ಅಪ್ಪನ ಶ್ರಮದ ಫಲವೇ
ಇಂದಿನ ನಮ್ಮ ಜೀವನವು

ಎಬ್ಬಿಸೋಣ ಈಗ ಹೊತ್ತಾಯಿತಲ್ಲಾ
ಇಷ್ಟೋಂದು ತಡ ಆಗೆ ಇಲ್ಲಾ
ಮೈದಡವಿದೆ ಚಲನೆಯೇ ಇಲ್ಲಾ
ಬಿಟ್ಟು ಹೋಗಿದ್ದಾ ಎಲ್ಲಾ

ನಮಗಾಗಿ ದುಡಿದಾ ನಮಗಾಗಿ ಮಡಿದಾ
ನಮ್ಮನ್ನೋಂದೇ ನೋಡಿದಾ
ತನ್ನ ತನವನೇ ಮರೆತು ಬಾಳಿ
ನಮ್ಮನ್ನೇ ಬಿಟ್ಟು ಹೋದ

‍ಲೇಖಕರು Avadhi

22 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading