ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಮತ್ತೆ ಮಗುವಾಗಿದ್ದಾರೆ! 

 

 

 

 

 

 

 

ಸದಾಶಿವ್ ಸೊರಟೂರು

ಅಡಿಯಿಟ್ಟಲೆಲ್ಲಾ
ಹೆಜ್ಜೆಗಳ ಜೊತೆಗೆ
ಹಗಲುಗಳು
ಧಪಧಪನೇ ಬಿದ್ದಿವೆ;
ರಾತ್ರಿಗಳು ಸದಾ ಬೆನ್ನ ಹಿಂದೆ
ನಿಂತು ತಳ್ಳಿವೆ!

ಬಿದ್ದು ಹೋದ ಹಗಲುಗಳ‌
ಜಾಗದಲ್ಲಿ
ಪಡೆದುಕೊಂಡಿದ್ದಾನೆ,
ಹೆಗಲ ಮೇಲಿಂದ ಇಳಿ ಬಿದ್ದ

ಎಳಸು ಕಾಲುಗಳು
ಎದ್ದು ನಿಂತು ಓಡುವಷ್ಟು
ತಯಾರಿ ನಡೆಸಿದ್ದಾನೆ;
ಪಡೆದಿದ್ದನ್ನು ಬೊಗಸೆಯಲ್ಲಿಟ್ಟುಕೊಂಡು!

ಕಳಚಿ ಹೋದ ಹಗಲು
ದೋಚಿಕೊಂಡು ಹೋದ ರಾತ್ರಿ
ಉಳಿಸಿ ಹೋಗಿವೆ;
ಹೆಗಲ ಮೇಲಿನ ಎಳಸುಕಾಲಿನಷ್ಟೇ
ಮೃದು!

ನೆಲಕ್ಕೆ ಬೆನ್ನು ಹೊಂದಿಸಿ
ಗಾಳಿಯೊಂದಿಗೆ ಮಾತು,
ಅವುಗಳ ಎತ್ತಿಕೊಂಡು
ತೊಡೆಯ ಮೇಲೆ ಹರಡಿಕೊಂಡು ನೋಡಿದೆ,
ಕಣ್ಣುಗಳಲ್ಲಿ ಮಳೆ ಸುರಿದಿತ್ತು!
ನನ್ನ ಕೈಕಾಲು ಗಟ್ಟಿ,
ಅಪ್ಪನದು!?
ಹೆಗಲ ಮೇಲೆ ಕೂತು
ಎದೆಗೆ ಬಡಿಯುತ್ತಿಲೇ
ಸಾಗಿದ್ದು ನೆನಪಾಪಯ್ತು!

‍ಲೇಖಕರು avadhi

23 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading