'ಅಮೃತಯಾನ'…ಇನ್ನಷ್ಟೇ ಶುರುಮಾಡಬೇಕಿದೆ..

ಚರಿತಾ 
ಮೊನ್ನೆ (ಭಾನುವಾರ), ಚಿತ್ರಕಲಾ ಪರಿಷತ್ನಲ್ಲಿ, ನಮ್ಮೆಲ್ಲರನ್ನೂ ಆರ್ದ್ರಗೊಳಿಸಿದ, ಹೃದಯಸ್ಪರ್ಶಿ ಕಾರ್ಯಕ್ರಮವೊಂದು ನಡೀತು.
ತನ್ನ ಚಿತ್ರ ಮತ್ತು ಬರಹಗಳ ಮೂಲಕ ನಮ್ಮೆಲ್ಲರನ್ನೂ ಆವಾಹಿಸಿಕೊಂಡಿರುವ ಅಮೃತಾಳ ಬರಹದ ಐದು ಸಂಪುಟಗಳ, ‘ಅಮೃತಯಾನ’ದ ಬಿಡುಗಡೆ ಕಾರ್ಯಕ್ರಮ(ಅಭಿರುಚಿ ಪ್ರಕಾಶನ). ಆಕೆಯ ಒಡನಾಟ ನನಗೆ ಸಿಕ್ಕದಿದ್ದರೂ, ಹೀಗೆ ಕೇಳಿ, ಓದಿ ಪರಿಚಯವಾದ ಹುಡುಗಿ…ಆಕೆ ಮತ್ತಷ್ಟು ಕಾಲ ಇರಬೇಕಿತ್ತೆಂಬ ಸಂಕಟ ಉಳಿಸಿಹೋದವಳು..
ಮೊದಲ ಸಂಪುಟದ ಹೆಸರು ‘ಒಂಟಿ ಮನೆಯ ಪುಟಾಣಿ’. ಕೇಳಿದಕೂಡಲೆ ನೆನಪಾಗಿದ್ದು, ಲಾರ ಇಂಗೆಲ್ಸ್ ವೈಲ್ಡರಳ ‘ಹುಲ್ಲುಗಾವಲಿನಲ್ಲಿ ಪುಟ್ಟ ಮನೆ’ ಸರಣಿ. ಓ.ಎಲ್.ಎನ್. ಸರ್ ಕೂಡ ಇದನ್ನು ಪ್ರಸ್ತಾಪಿಸುತ್ತ, ತನ್ನದೇ ಕಥೆಯನ್ನು ತನ್ನದಲ್ಲವೆಂಬಂತೆ, ಸ್ವಾನುಕಂಪವಿಲ್ಲದೆ, ಯಾರನ್ನೂ ದೂಷಿಸದೆ, ಆದರೆ ತನ್ನೊಡನೆ ಸರಿಯಾಗಿ ನಡೆದುಕೊಳ್ಳದ ಲೋಕವೊಂದು ನಮ್ಮ ಗಮನಕ್ಕೆ ನಿಲುಕುವಂತೆ ಬರೆದಿದ್ದಾಳೆ, ಅಪರೂಪದ ಬರಹ ಇದು ಎಂದರು.
‘ಅಮೃತಯಾನ’…ಇನ್ನಷ್ಟೇ ಶುರುಮಾಡಬೇಕಿದೆ.
ನೆನಪು ಅಮೃತ.

‍ಲೇಖಕರು avadhi

November 23, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: