ಲೇಖಕಿ ಅನುಪಮಾ ಪ್ರಸಾದ್ ಅವರ ‘ಪಕ್ಕಿ ಹಳ್ಳದ ಹಾದಿಗುಂಟ’ ಕಾದಂಬರಿಗೆ ೨೦೨೦ರ ಡಾ. ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಕತೆಗಳ ಮೂಲಕ ಪ್ರಸಿದ್ಧರಾಗಿರುವ ಅನುಪಮಾ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಪಲ್ಲವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಲೇಖಕರಾದ ಓ. ಎಲ್. ನಾಗಭೂಷಣ ಸ್ವಾಮಿ, ದೇವು ಪತ್ತಾರ್ ಮತ್ತು ನರೇಂದ್ರ ರೈ ದೇರ್ಲ ಅವರು ನಿರ್ಣಾಯಕರಾಗಿದ್ದರು. ಪ್ರಶಸ್ತಿಯು 15,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಅಭಿನಂದನೆಗಳು