ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದ್ರಲ್ಲಿ ಈ 'pink' movie ಕೂಡ ಒಂದು..

shruti-malavaade

ಶ್ರುತಿ ಮಡವಾಳೆ  

ನಾನು moviesಗಳನ್ನ ನೋಡೊದೇ ಕಮ್ಮಿ. ಅದ್ರಲ್ಲೂ ಚಿತ್ರಮಂದಿರಕ್ಕೆ ಹೋಗಿ ನೋಡೊದು ಇನ್ನೂ ವಿರಳ.

ನೋಡಿದ್ರೂನೂ ಅಲ್ಲೇ theatre ಅಲ್ಲಿ ನೋಡಿ ಅಲ್ಲೇ ಹೊಗಳಿ ಅಲ್ಲೇ ಬಿಟ್ಟು ಬರೋದು ಅದ್ನ.ಮನೆವರೆಗೂ ಆ ಕಥೆ,ಚಿಂತನೆ,ಆಲೋಚನೆಗಳನ್ನ ಹೊತ್ತು ತಂದಿದ್ದು ಕೆಲವೊಂದಷ್ಟನ್ನೆ…

ಅದ್ರಲ್ಲಿ ಈ “pink” movie ಕೂಡ ಒಂದು.

ಇನ್ನೂವರೆಗೂ ಯಾವ movieಯ ಬಗ್ಗೆ review ಬರ್ದಿಲ್ಲಾ ನಾನು.ಇದೇ ಮೊದಲು..

pink5ಒಂದು ಅದ್ಭುತವಾದ ಚಿತ್ರ, ಚಿಂತನೆಗೆ ಒಳಪಡಿಸುವ ಚಿತ್ರ, ಎಲ್ಲ sensitive matterಗಳನ್ನ ಚೆನ್ನಾಗಿ cover ಮಾಡಿದ್ದಾರೆ.

NO MEANS NO- ಇದ್ರಲ್ಲೇ ಎಲ್ಲ ಅರ್ಥ ಅಡಗಿದೆ. ಎಲ್ಲರೂ ನೋಡಲೇ ಬೇಕಾದಂತಹ ಚಿತ್ರ.ನಮ್ಮ ದಿನನಿತ್ಯದ ಜೀವನದಲ್ಲಿ bus, bus stop ಅಥವಾ public place ಅಲ್ಲಿ ಯಾರಾದ್ರೂ ಗಂಡಸ್ಸು ಕೆಟ್ಟದಾಗಿ ನೋಡಿದಾಗ ಇಲ್ಲಾ ಅಲ್ಲಿ ಇಲ್ಲಿ ಮುಟ್ಟಿದಾಗ ಎಷ್ಟು ಹೊಲಸು feel ಆಗತ್ತೆ ಅಂತ ಅನುಭವಿಸಿದ ಬಹಳಷ್ಟು ಹೆಣ್ಮಕ್ಳಿಗೆ ಗೊತ್ತು ಅದು.

ದಿನದ ಸಮಯವೇ ಇರಲಿ ಅಥವಾ ಕತ್ತಲಾಗಕ್ಕೆ ಬಂದಾಗ್ಲಾದ್ರೂ, ಜನಜಂಗುಳಿ ಇಲ್ಲದ ರೋಡಲ್ಲಿ ಒಬ್ಬಳೇ ನಡೆಯುವ ಪ್ರಸಂಗ ಬಂದಾಗ ನಮ್ಮ ನಡಿಗೆಯ ವೇಗ ಜಾಸ್ತಿ ಆಗತಾ ಹೋಗತ್ತೆ, ಅದ್ರಲ್ಲಿ ಯಾವದಾದ್ರೂ ವಾಹನ ನಮ್ಮ ಹತ್ತಿರ ನಿಧಾನವಾಗಿ ಹೋದರೆ ಎದೆಬಡಿತವೂ ಜಾಸ್ತಿ ಆಗತ್ತೆ…

ladki ko har ek kadam phoonk phoonk ke chalana padata hai ಅಂತ ಅದ್ಯಾಕ ಹೇಳ್ತಾರೊ.ಯಾಕೆ ಈ ಮಾತಿನ ಅನಿವಾರ್ಯತೆ ಬಂದಿದೆ. ಎಷ್ಟು ಅಂತ ಭಯದಲ್ಲಿರ್ಬೇಕು, ಅನುಭವಿಸ್ಬೇಕು.

ಹೇಳಕ್ಕೆ ಹೋದರೆ ಇನ್ನೂ ಸಾಕಷ್ಟು ವಿಷಯಗಳಿವೆ. ನನ್ನ ದೃಷ್ಟಿಯಲ್ಲಿ, ಒಂದು ಹೆಣ್ಣಿನ ದೃಷ್ಟಿಯಲ್ಲಿ ನಿಜವಾದ ಗಂಡಸು ಅಂದ್ರೆ ಹೆಣ್ಣಿಗೆ ನೀನು “safe” ಆಗಿದಿಯಾ ಅಂತ feel ಕೊಡೊರು, public place ಆಗಲಿ ಇಲ್ಲಾ ಬೇರೆ ಕಡೆ ಆಗಲಿ ಅವರ ಪ್ರಬುದ್ಧವಾದ ವರ್ತನೆ ಹಾಗೂ ಹೆಣ್ಣಿಗೆ ಗೌರವ ಕೊಡುವವರು.

‍ಲೇಖಕರು Admin

26 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading