ಅಪರಿಚಿತೆ…
ಕೆ ಎಂ ವಸುಂಧರ
ಹೇಗೆ ಪರಿಚಯಿಸಿಕೊಳ್ಳಲಿ
ಹೆಸರಿಲ್ಲದ ನನ್ನನ್ನು..?
ನಾ ಯಾರೆಂದು ನನಗೆಯೇ
ನಾ ಅರಿಯದಿರುವಾಗ…
ಕಂಗಾಲಾಗುವೆ ಹೆಸರೇನೆಂದು
ಯಾರಾದರು ಕೇಳಿಬಿಟ್ಟರೆ…
ಹೆಸರಿಟ್ಟವರಾರೋ.. ಕರೆದು
ರೂಢಿ ಮಾಡಿದವರಾರೋ..
ಈ ಉಸಿರಾಡುತ್ತಿರುವ ದೇಹಕ್ಕೆ
ಅದು ನಾನೆಂದು ಹೇಗೆ ಗೊತ್ತು..?

ನಾನೇನು ಹಸಿರೇ, ನೀರಿನೊರತೆಯೇ,
ಉಸಿರೇ, ಮಳೆಯ ಮೋಡವೇ..?
ಆ ಭುವಿ ಬೆಳಗುವ ಸೂರ್ಯನೂ
ಮೋಡದಲ್ಲಿ ಮರೆಯಾಗುವಾಗ…
ತಪ್ಪದೇ ತಂಪು ಚಂದಿರನೂ
ಒಮ್ಮೊಮ್ಮೆ ನಾಪತ್ತೆಯಾಗುವಾಗ…
ಹೆಸರು ಹೇಳಿಕೊಳ್ಳುವುದಾದರೂ
ಹೇಗೆ ನಾನು..? ಕಡೆಗೆ, ಕಡಿದು ಕಟ್ಟೆ
ಹಾಕಿರುವುದಾದರೂ ಏನನ್ನು ನಾನು..?!






ಚೆಂದಿದೆ ಕವಿತೆ ವಸುಂಧರಾ -ಸ್ಮಿತಾ
ಚಂದ ಕವಿತೆ… ಹಲವಾರು ನೈಸರ್ಗಿಕ ಪವಾಡಗಳು ಸದ್ದಿಲ್ಲದೇ ತಾವೇ ನಡೆಯುತ್ತಿರುತ್ತವೆ. ನಾವೇ ಸಣ್ಣಪುಟ್ಟದ್ದನ್ನೂ ಹೇಳಿಕೊಳ್ಳುವುದು.