ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತಾ ಹುಟ್ಟಾತಿಲ್ಲಾ…

ಅಜೀತ ಪಾತ್ರೋಟ

ಎದಿ ಒಳಗ ಹೊರಗ
ಒಣಗಿದಾಂಗ ಆಗೇತಿ
ಬಿರು ಬಿರು ಬಿಸಲಿನ್ಯಾಗ
ಒಣಾ ಹಬಿ ಮಾರಿ ಸುಟ್ಟತಿ
ಗೆಳೆಯಾ ಕವಿತಾ ಬರಿ ಅಂದ್ರ ಹ್ಯಾಂಗ ಬರಿಲಿ

ಕೆರಿ ದಂಡಿಗರ ಕುತ
ಕವಿತಾ ಬರಿ ಅಂದ್ರ ಹ್ಯಾಂಗ ಬರಿಲಿ
ಕೆರಿ ಒಳಗ ನೀರಿಲ್ಲಾ ಮೀನಿಲ್ಲಾ ಹಸರಿಲ್ಲಾ
ಮತ್ತ ಸುತ್ತ ಒಣಾ ಹುಲ್ಲ
ಜಾಲಿ ಮುಳ್ಳಕಂಟಿ ದನದ ಎಲು
ಕತಿ ಎನರ ಬರಿತಿನ
ಆದ್ರ ಈ ಕವಿತಾ ಬರಿ ಅಂದ್ರ ಹ್ಯಾಂಗ ಬರಿಲಿ

ನಿಂಗ ಗೊತೈತಿಲ್ಲೊ
ಅದಕ ಅಜ್ಜಾ ಮೊದಲ ಹೇಳ್ಯಾನ
ಯಾರಿಗಿ ಬೇಕ ನಿನ್ನ ಕವಿತಾ
ಇದ್ದ್ರ ಒಂದ ರೊಟ್ಟಿತಾ ಮ್ಯಾಗ ಒಂದಿಟ ಬೆಣ್ಣತಾ ತಣ್ಣಗ
ಯಾರಿಗಿ ಬೇಕ ನಿನ್ನ ಕವಿತಾ ಅಂದಾನ

ಹೊಗ್ಲಿ ಕವಿತಾ ಹುಟ್ಟ ಅಂದ್ರ
ಹ್ಯಾಂಗ ಹುಟ್ಟಬೇಕ ಗೆಳೆಯಾ
ನಮ್ದಾ ನಮಗ ಬಿಸಲಾಗ ರಗಡ ಆಗೇತಿ
ಬರಿ ಅಂದ್ರ ಹ್ಯಾಂಗ ಬರಿಲಿ
ಕವಿತಾ ಹುಟ್ಟಾತಿಲ್ಲಾ

‍ಲೇಖಕರು Admin

26 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading