ಆರ್ ಎನ್ ದರ್ಗಾದವರ ಕವಿತೆ – ಸುಳ್ಳಿನಂಗಡಿ…

ಆರ್ ಎನ್ ದರ್ಗಾದವರ

ವರ್ತಮಾನದ ಜಂಗುಳಿ ಜಾತ್ರೆಯಲಿ
ಕಣ್ಣು ನಡೆದ ಕಡೆಗಳಲ್ಲಿ
ಸುಳ್ಳಿನ ವರ್ತಕರ ಅಬ್ಬರ
ತೆರಿಗೆ ವಿನಾಯಿತಿ ಪಡೆದು
ಮಾರಾಟ ಮಾಡುತ್ತಲೇ ಇದ್ದಾರೆ

ಗದ್ದಲವೆಬ್ಬಿಸಬೇಡಿ ಸಾಲಾಗಿ ಬನ್ನಿ !

ಸತ್ಯದ ಪೋಷಾಕು ತೊಟ್ಟ ಈ ಜಗತ್ತು
ಎಷ್ಟೊಂದು ವೈವಿಧ್ಯಮಯ
ಕಿತ್ತಳೆ,ಬಿಳಿ,ನೀಲಿ
ಹಸಿರು ಇತ್ಯಾದಿ
ಜೀನ್ಸ್ ತೊಟ್ಟ ಸುಳ್ಳುಗಳು
ಸೀರೆಯುಟ್ಟ ಸುಳ್ಳುಗಳು
ಪಂಚೆ-ಶಾಲು ತೊಟ್ಟಿಕೊಂಡ
ಕವ್ವಾ ಪೇಡೆಯಂತಹ ಮೆತ್ತನೆ
ಸುಳ್ಳುಗಳು
ಚೌಕಳಿ ಚೌಕಳಿ, ಚಿಕ್ಕಪುಟ್ಟ
ವಿಧವಿಧದ ಹೂವಿನ ಸೋಗು ತೊಟ್ಟ
ಮುಗ್ದವಾದ ಸುಳ್ಳುಗಳು
ಬೆತ್ತಲೆ ಚಲಿಸುವ ಮಜ ಮಜವಾದ
ಸುಳ್ಳುಗಳು
ಇದರ ಮಧ್ಯ,
ಧರ್ಮಚಕ್ರವೆಂದುಕೊಂಡಿದ್ದ ಚಕ್ರ
ಮಟ ಮಟ ಮಧ್ಯಾಹ್ನವೇ ಮಾಯ
ಶ್ !
ತಡವಿ ತಣಿಯಬೇಡ
ಸುಳ್ಳಿನ್ನೂ ಹಸಿಹಸಿಯಾಗಿದೆ

ಸುಳ್ಳುಗಳಿಗೆ ಬೋರ್ನ್ವಿಟಾ ಶಕ್ತಿಯಿದೆ
ಬಳಸಿದಷ್ಟು ದಷ್ಟಪುಷ್ಟ
ಈಗೀಗ ಅವರಂತೂ
ಒಂದೇ ಸಮನೆ ದುಂಬಾಲು
ಬಿಳ್ಳುತ್ತಾರೆ
ಒಂದು ಸುಳ್ಳನ್ನಾದರೂ ಒಪ್ಪಿಕೊಳ್ಳಿ

ಅನುಮತಿ ಸದ್ಯದಲ್ಲೇ ದೊರೆಯಲಿದೆ
ಚಂದಾದ ಹೆಸರನ್ನು ಸೂಚಿಸಲು
ಹಲವರಲ್ಲಿ ಕೇಳಿಕೊಂಡಿದ್ದೇವೆ
ನಗರದ ಮಧ್ಯಭಾಗದಲಿ
ಜಾಗವೊಂದು ಗೊತ್ತು ಮಾಡಿ
ಕಂಪನಿಯೊಂದು ಸ್ಥಾಪಿಸಬೇಕು

ಸುಳ್ಳಿನ ಊರಿನಲ್ಲಿ ಸತ್ಯ ಹೇಳಿಕೊಳ್ಳುವದು
ನಾಚಿಕೆಗೇಡಿನ ಸಂಗತಿ !

ನಿಮಗೆ ಗೊತ್ತಾ..!
ನಿಮ್ಮ ಒಂದು ಸತ್ಯವನ್ನು
ರೂಪಾಂತರಿಸಿದರೆ
ಕಟುಮಸ್ತಾದ ನಾಲ್ಕಾರು
ಸುಳ್ಳುಗಳಾಗುತ್ತವೆ
ಅವನಿಗೊಂದು ಇವನಿಗೊಂದು
ಆ ದಿಕ್ಕಿಗೊಂದು ಈ ದಿಕ್ಕಿಗೊಂದು
ಈಗ ಎಲ್ಲೆಲ್ಲೂ ರಾಜ್ಯಭಾರ !

ತಿರುಚುತ್ತಾರೆ ಅಂತ ಹೇಳಬೇಡಿ
ಖೇದವಾದಿತು !
ಸತ್ಯವನ್ನೇ ಖಾದಿಯಂತೆ ತೊಟ್ಟಿಕೊಂಡವರು
ಸುಳ್ಳನ್ನು ಸರದಿಯಲ್ಲಿ
ನಿಂತು ಯಥಾವತ್ತಾಗಿ ಕೊಳ್ಳುತ್ತಾರೆ

‍ಲೇಖಕರು Admin

March 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: