ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷಯ ಕಾಂತಬೈಲು ಹೊಸ ಕವಿತೆ – ಭೂಗೋಳ…

ಅಕ್ಷಯ ಕಾಂತಬೈಲು

ಕೋಳಿ ಪುಕ್ಕವ ಪೂಜೆ ಮಾಡಿರೆ
ನವಿಲಗರಿ ಆದೀತೇನೋ

ಸಿಕ್ಯಾಳಂತ ಕುಣಿತ ಹಾಕಿರೆ
ಯೋನಿ ಒಳಗಿನ ಮರ ಬೀಜ ಬಿಟ್ಟಿತೇನೋ

ಸ್ಯಾವಂತಿಗೆ ಹಾರ ತಂದು ಕೋತಿಗೆ ತೊಡಿಸಿರೆ
ಬೂದಿ ಬಡಕ ಪರಸಿವನ ಡಮರ ಸದ್ದಾದೀತೆನೋ

ಬ್ರಹ್ಮಾಂಡದಲಿ ನನ್ನ ಪಿಂಡಾಂಡ
ತೆರೆದ ತತ್ವದ ಜಗಜ್ಯೋತಿ ಕಾಣೋ

ಆದರೂ
ಆರು ಕಾಂಡದ ನೀರಾ ಕೆಳಗೆ ಉಳಿದಾವ
ಆದರೂ
ಬಿಡದೆ ಗುರಿ ಹಚ್ಚಿ ಗುಂಡು ಹಾಕಬೇಕೋ
ಈಗ ಕಾಣೋ ತತ್ತಿ ಒಳಗಿಂದು ಬೀಜ ಹುಟ್ಟಿತೋ

‍ಲೇಖಕರು Admin

15 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading