ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷತಾ ಬರೆದ ಕವಿತೆ: ಸಮಕ್ಷಮ

 

ಹೇಳಿಹೋದರೆ ಕಾರಣ-ಸಕಾರಣ,

ವಿನಾಕಾರಣ

ಮಿಟಿಯುತ್ತಿತ್ತು ಅಪಶ್ರುತಿಯ ತಂತಿ

ಪುಟಿಯುತಿತ್ತು ಅನುಮಾನದ ರೆಕ್ಕೆ

ಜ್ವಲಿಸುತ್ತಿತ್ತು ಅಸಹನೆಯ ಕಿಡಿ

ಗಂಡುತನದ ವಿಶ್ವಾಸದ ಲೋಕಕ್ಕೆ

ಬೀಳುವುದು ಬಕ್ಕಬಾರಲು ಬರೆ

ಅದರಿಂದೇಳುವ ಸಾಮೂಹಿಕ ಬೊಬ್ಬೆ

ಕೀವು, ಹುಣ್ಣು, ರಸಿಕೆ, ನೋವು

ಹೇಳಿಹೋಗಲಿಲ್ಲ ಎಂದ ಮಾತ್ರಕ್ಕೆ

ಕದ್ದು ಹೋದೆವು ಎಂದು ಭಾವಿಸಬೇಕಿಲ್ಲ

ತುಸು ದುಗುಡವಿತ್ತು ಖರೆ

ವಿನಃ ದುಗುಡದಲಿ ಹೆಣ್ಣಿನ ಹಣೆಯಲ್ಲಿ

ಚೆಲ್ಲಾಟದ ಹುರುಪು ಚಕ್ಕಂದದ ಸೊಗಸು ಅತ್ತಿರಲಿ

ದೇಹದ ತುಡಿತ ಉಸಿರಿನ ಮಿಡಿತವೂ

ಬರೆದಿಲ್ಲ ಎಂಬುದು ಯಾವ ಹೆಣ್ಣೂ

ಯಾವ ಹೆಣ್ಣಿಗೂ ಯಾವ ಕಾಲದಲ್ಲೂ

ಹೇಳಿಕೊಟ್ಟು ಅರಿತದ್ದಲ್ಲ

 

ಕಣ್ತಪ್ಪಿಸಿ ಹೋದವಳು

ಕಣ್ಣೊಪ್ಪಿಸಿ ಬಂದವಳು

ಕಣ್ಣಿಗೆ ಕಣ್ಕೊಟ್ಟು ಒಮ್ಮೆಯೂ ನೋಡದವಳು

ನಿಮ್ಮ ಸಮಕ್ಷಮದಲಿ ಬಾಯಿಬಿಟ್ಟ ದಿನ

ಅಸ್ತಿತ್ವ ನಡಗುವುದು-ಅಪಶಂಕೆ ಬೆಳೆಯುವುದು

ಅನುಮಾನ ನುಂಗುವುದು-ಅವಮಾನ ಹೀರುವುದು

ಬಾಯಿ ಬಿಟ್ಟರೆ ನಾವು

ಅಪಮಾನದಿಂದ ಹೊತ್ತಿ ಉರಿವಿರಿ ನೀವು

ಅಪಮಾನದಾಬೇಗೆ ನಮಗೆ ಗೊತ್ತು

 

ಕಣ್ತಪ್ಪಿಸಿ ಹೋದರೂ ತಿರುಗಿ ಬಂದೇ ಬರುವೆವು

ನಿಮ್ಮ ಬೆದರಿಕೆ ನಮಗೆ ತಿಲಮಾತ್ರವಿಲ್ಲ

ನಿಮ್ಮ ಹೆದರಿಕೆ ನೋಟ ನಮ್ಮಿಷ್ಟವಲ್ಲ.

ಕಣ್ತಪ್ಪಿಸಿ ಹೋಗುವೆವು ಕಣ್ಣೊಪ್ಪಿಸಿ ಬರುವೆವು

ಕಣ್ಣೋಟ, ಚಿಮ್ಮುನಗೆ,

ಅರಳದೇ ಬಿಟ್ಟೀತೆ ದೇಹ ಕಮಲ

ಘಟಿಸಿದರೂ, ಘಟಿಸದೇ ಕಂಗಾಲಾದರೂ

ಬಾಯಿಬಿಡಲಾರೆವು ನಿಮ್ಮ ಸಾಕ್ಷ್ಯ

 

 

 

‍ಲೇಖಕರು G

28 March, 2011

6 Comments

  1. raju hegade

    haage yaake hodedaatakke bandahaage heluttiri!banni samaxama maataadona.-raju hegde

    • raju hegade

      channagide.aadare…..

      • Anonymous

        Nice

  2. M.S.Rudreswaraswamy

    kaNtappisi hIge hOguvudaadarU
    ellige. sikkitE suKa,
    nemmadiyeMba marIchike alliyaadarU? araLidare manassu
    hUvina haage; hELade haage
    hOgiddakkoMdu artha. illavaadare
    geLati ,elli hOdarU moNakaalu
    keLage nIru.nillada huDukaaTa.

  3. Nagarathna T.A.

    Samakshama kavithe chennagide. Kavitheya ella salugalu bahala arthagarbhithavaagive.Adarallu kavitheya eradaneya stanza nanage thumba ishtvagide.

    nagarathna t.a.

  4. ಡಾ.ಟಿ.ಎನ್. ವಾಸುದೇವಮೂರ್ತಿ

    ಅಕ್ಷತಾಗೆ,
    ಈ ಪದ್ಯ ಓದಿದ ಮೇಲೆ ’ಚಿಂತಾಮಣಿಯಲ್ಲಿ ಕಂಡ ಮುಖ’ ನೆನಪಾಗುತ್ತದೆ. ಆ ಪದ್ಯದಲ್ಲಿ ಅನುಕ್ತವಾದ ’ಸಭಾ ಮಧ್ಯದಲ್ಲಿ ಕುಳಿತ’ ಆ ಅಜ್ಞಾತ ಮುಖದ ಇಂಗಿತಗಳು ಇಲ್ಲಿ ವ್ಯಕ್ತವಾದಂತಿದೆ.
    ಯಾವುದನ್ನು ಬೇಕಾದರೂ ಗ್ಯಾರಂಟಿಯಾಗಿ ಹೇಳಿಬಿಡುವ ನಿಮ್ಮ ಕವಿತ್ವದ ಧೈರ್ಯಕ್ಕೆ ಏನೆನ್ನಲಿ,..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading