ಅಂಬಿಕಾ ಇಡೂರು
ಬಣ್ಣ ಬಣ್ಣವೆಂದು ಬಡಿದುಕೊಳ್ಳುವುದು ಬೇಡ
ನಾಳೆ ಹೋಗುವುದು ಎಲ್ಲರೂ ಒಂದೇ ಮಣ್ಣಿಗೆ
ಅಜ್ಜ ನೆಟ್ಟ ಆಲದ ಮರವೆಂದು ಜೋತು ಬೀಳುವುದೇಕೆ
ಕಾಣುವ ಕಣ್ಣಿದ್ದರೆ ಇಲ್ಲಿ ಇನ್ನೂ ಸುಂದರ ಮರಗಳಿವೆ…
ಕಾಲವಿನ್ನೂ ಮಿಂಚಿಹೋಗಿಲ್ಲ,
ಬದಲಾಗಬೇಕಿದೆ, ತೊಳೆದು ಹಾಕಬೇಕಿದೆ
ಮನಕ್ಕಂಟಿದ ಕಲ್ಮಶದ ಬಣ್ಣವನು…

ಆಗ ಕಾಣಬಹುದೇನೋ ಶುದ್ಧಾನುಶುದ್ಧ ಬಣ್ಣವೊಂದು
ಆಗ ಹಬ್ಬಬಹುದೇನೋ ಸಮಾನತೆಯ ಬಳ್ಳಿಯೊಂದು…
ಹಂಚಿ ಹೋಗಬಾರದೇಕೆ ನಾವು ಈ ಪ್ರೀತಿಯ ಬಳ್ಳಿಯನ್ನು,
ನಿಮ್ಮ ಮತ್ತು ನಮ್ಮ ಮುಂದಿನ ಮುಗ್ಧ ಪೀಳಿಗೆಗಾಗಿ…






Tumba chennagide…
Munduvarisi…