ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಲಿದು ಕೊಡುವೆಯಾ ಟೈಲರಣ್ಣ ಮತ್ತೆ ಹರಿದ ಕರುಳ?

ಸಂವರ್ಥ ’ಸಾಹಿಲ್’


ಹೊಲಿದು ಕೊಡುವೆಯಾ ಟೈಲರಣ್ಣ  ಮತ್ತೆ ಹರಿದ ಕರುಳ?
ಸ್ವಲ್ಪ ಜಾಸ್ತಿಯೇ ಹರಿದುಹೋದಂತಿದೆ  ಈ ಬಾರಿ…
 
ಒಂದೆರಡು ದಿನ ಬರಬಹುದೇನೋ ಅಷ್ಟೇ
ಬಹುಶಃ ಇನ್ನೊಂದೆರಡು ದಿನ ಬರಬಹುದು…
 
ನೆರೆ ಬಂದು
ನದಿ ಗದ್ದೆಯನ್ನೇ ನುಂಗಿತು
ಎನ್ನುತ್ತಿದ್ದಾರೆ
 
ಗುಡ್ಡೆ ಜರಿದು ಮನೆ ಕುಸಿದು
ಹೆಂಡತಿ ಮಕ್ಕಳಿಗೆ
ಸೂರು ಕೊಟ್ಟಿಗೆ
ಎನ್ನುತ್ತಿದ್ದಾರೆ
 
ಮಗ ಶಾಲೆ ಕಂಡಿಲ್ಲ ಎನ್ನುತ್ತಿದ್ದಾರೆ
ಮಗಳ ಮದುವೆ ಆಗಿಲ್ಲ ಎನ್ನುತ್ತಿದ್ದಾರೆ
ನನ್ನ ಮುದುಕಿ ಕೆಮ್ಮುತ್ತಾ ಕೆಮ್ಮುತ್ತಾ
ಉಸಿರುಸಿರಿಗೂ ಒದ್ದಾಡುತ್ತಿದ್ದಾಳೆ
ಎನ್ನುತ್ತಿದ್ದಾರೆ
 
ನಾನೋ ಮುದಿ ಜೀವ
ಮನೆಗೆ ಹಿಂದಿರುಗಲು ಬೇಕಾದ
ರೊಕ್ಕವನ್ನು ಹೊಂದಿಸಲಾರೆ
 
ಹೊಲಿದು ಕೊಡುವೆಯಾ ಟೈಲರಣ್ಣ  ಮತ್ತೆ ಹರಿದ ಕರುಳ?
ಸ್ವಲ್ಪ ಜಾಸ್ತಿಯೇ ಹರಿದುಹೋದಂತಿದೆ ಈ ಬಾರಿ…
 
ನೇಪಾಳಿ ಮೂಲ: ಮಂಜುಲ್
ಅನುವಾದ: ಸಂವರ್ತ ‘ಸಾಹಿಲ್’

‍ಲೇಖಕರು avadhi-sandhyarani

18 February, 2013

2 Comments

  1. Prasad V Murthy

    ಅದ್ಭುತವಾದ ಕವಿತೆ. ಅನುವಾದವು ಗಮನ ಸೆಳೆಯುತ್ತದೆ.
    ಹೊಲಿದು ಕೊಡುವೆಯಾ ಟೈಲರಣ್ಣ ಮತ್ತೆ ಹರಿದ ಕರುಳ?
    ಸ್ವಲ್ಪ ಜಾಸ್ತಿಯೇ ಹರಿದುಹೋದಂತಿದೆ ಈ ಬಾರಿ…
    ಈ ಸಾಲುಗಳು ಮಾತ್ರ ಮನಸ್ಸಿನಲ್ಲಿಯೇ ಉಳಿದುಬಿಟ್ಟವು.
    – ಪ್ರಸಾದ್.ಡಿ.ವಿ.

  2. ರವಿ ಮೂರ್ನಾಡು,ಕ್ಯಾಮರೂನ್

    ಕರುಳ ಹರಿದ ಕವಿತೆ… ಕವಿ ಟೈಲರಣ್ಣ ಆಗಿದ್ದು ಅಂಗಿ ತೊಟ್ಟ ಮೇಲೆ ಕಾಗದದ ಕ್ಯಾನ್ವಾಸಿನಲ್ಲಿ ಓಡಿದ್ದು ಸ್ವಲ್ಪ ಹೆಚ್ಚು ಖುಷಿ ಆಯಿತು.ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading