ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

poem- ಐದು ದಾಟಿದವರಿಗೆ

ಡಾ.ಹೆಚ್.ವಿ.ವೇಣುಗೋಪಾಲ್

ಎಂಟನೆಯ ತರಗತಿಯ ಇಂಗ್ಲೀಷ್ ಪಠ್ಯಪುಸ್ತಕದಲ್ಲಿ ಕಾಣಿಸಿದ ಒಂದು ಪದ್ಯ ನನಗೆ ತುಂಬ ಇಷ್ಟವಾಯಿತು. ಅದನ್ನು ಕನ್ನಡಕ್ಕೆ ಅನುವಾದ ಮಾಡಿದೆ. ಆಸಕ್ತಿ ಇದ್ದವರು ಓದಲೆಂದು ಇಲ್ಲಿ ಕೊಟ್ಟಿದ್ದೇನೆ.

ಮಳೆ ಬಿದ್ದ ಮರುದಿನ, ಕಿಟಕಿ ಕೆಳಗಿಳಿದ
ನಿನ್ನ ಕೋಣೆಯ ಒಳಗೆ ಸುಳಿದ
ಬಸವನಹುಳುವನ್ನು ನೋಡಲೆಂದು ನನ್ನ ಕೂಗಿ ಕರೆದೆ,
ಅದನ್ನು ಹಾಗೆಯೇ ಬಿಡುವುದು ಸರಿಯಲ್ಲ, ಕಾಣದೇ
ಕಾಲಿಗೆ ಸಿಕ್ಕಿ ಸಾಯುವ ಮೊದಲು ಕಾಪಾಡಬೇಕಿದೆ.
ವಿವರಿಸಿದ ನನ್ನ ಮಾತನರಿತು ಜತನದಲಿ ಹೊರಗೊಯ್ದೆ
ಹೂವ ಪಕಳೆಯ ಮೇಯಲು.
 
ಅದೆಂಥ ಮಮತೆಯ ಮನೆ ನಿನ್ನ ಕಣ್ಣು
ಅದೆಂಥ ಮೃದುತ್ವ ಮೂಡಿತು ನಿನ್ನಲ್ಲಿ
ನನ್ನ ಮಾತಿಗೆ, ಇಲಿಯ ಹಿಡಿದವಳ, ಹದ್ದು ಹೊಡೆದವಳ,
ನನ್ನ ಮಾತಿಗೆ, ನಿನ್ನ ಬೆಕ್ಕನೀರಿಗಿಕ್ಕಿದವಳ, ಹತ್ತಿರದ ಬಂಧುಗಳ
ದೂರಸರಿಸಿದವಳ, ಅದೆಷ್ಟೋ ಕಹಿಸತ್ಯಗಳ ನಡುವೆಯೂ
ಕಂಡವರಿಗೆ ಹೊತ್ತಿಉರಿದವಳ, ಹೌದು ಅದೆಲ್ಲ ಹಾಗೇ, ನಾನು ನಿನ್ನ ಅಮ್ಮ.
ನಮಗದೆಷ್ಟು ಕರುಣೆ ಬಸವನಹುಳುವಿನ ಮೇಲೆ.
 

Original English Poem

For a Five-Year-Old

 
A snail is climbing up the window-sill
into your room, after a night of rain.
You call me in to see and I explain
that it would be unkind to leave it there:
it might crawl to the floor; we must take care
that no one squashes it. You understand,
and carry it outside, with careful hand,
to eat a daffodil.
I see, then, that a kind of faith prevails:
your gentleness is moulded still by words
from me, who have trapped mice and shot wild birds,
from me, who drowned your kittens, who betrayed
your closest relatives and who purveyed
the harshest kind of truth to many another,
But that is how things are: I am your mother,
And we are kind to snails.
1967……………..by Fleur Adcock
 

‍ಲೇಖಕರು avadhi

5 May, 2013

3 Comments

  1. ರೂಪ ಹಾಸನ

    ಸರ್ ನಮಸ್ತೆ,
    ಪದ್ಯ ತುಂಬ ಇಷ್ಟ ಆಯ್ತು. ಅನುವಾದಕ್ಕಾಗಿ ಧನ್ಯವಾದಗಳು.ಇದು ಮಕ್ಕಳ ಪದ್ಯ ಅಲ್ಲವೇ ಅಲ್ಲ. ‘……ನಾನು ನಿನ್ನ ಅಮ್ಮ. ನಮಗದೆಷ್ಟು ಕರುಣೆ ಬಸವನಹುಳುವಿನ ಮೇಲೆ.’ ಸಾಲು ಮಗುವಿಗೆ ಮಾತ್ರ ಹೇಳಿದ್ದಲ್ಲ ಅಲ್ಲವೇ?

    • hvvenugopal

      ಹೌದು. ನೀನು ಎಣಿಸಿರುವುದು ಸರಿ. ಹಾಗಾಗಿಯೇ ಈ ಪದ್ಯಕ್ಕೆ ಹೆಸರು ’ಐದು ದಾಟಿದವರಿಗೆ’ ಎಂದಿದೆ. ಅಮ್ಮನಾಗಿ ಐದು ದಾಟಿದವಳಿಗೂ ಸಹ ಈ ಪದ್ಯ ತಿವಿಯುವುದು ನಿಜ. ಇಂಗ್ಲೀಷ್ ನಲ್ಲೂ ಸಹ ಈ ಪದ್ಯಕ್ಕೆ ‘For a Five year old’ ಎಂದೇ ಇಟ್ಟಿರುವುದು ನಿನ್ನ ಅನಿಸಿಕೆಯನ್ನು ನಿಜ ಮಾಡಿದೆ. ಈ ಕಾರಣಕ್ಕೇ ಈ ಪದ್ಯ ನನಗೂ ಇಷ್ಟವಾಗಿದ್ದು. ನಿನಗೂ ಇಷ್ಟವಾಗಿದ್ದಕ್ಕೆ ಸಂತೋಷವಾಯ್ತು. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading