ಶಂಕರ್. ಎನ್.ಎಸ್

Me Too- ಅಭಿಯಾನದ ಹಿನ್ನೆಲೆಯಲ್ಲಿ ನೆನಪಾದದ್ದು ಈ ‘ಪಿಂಕ್’ ಸಿನಿಮಾ. ಅನಿರುದ್ಧ ರಾಯ್ ಚೌಧರಿ ನಿರ್ದೇಶನದ ಈ ಸಿನಿಮಾ ಹೆಣ್ಣುಮಕ್ಕಳ ಮೇಲೆ ನಡೆದ ಅತಿಕ್ರಮಣ ಮತ್ತು ಆ ಹೆಣ್ಣುಮಕ್ಕಳು ನಡೆಸುವ ಹೋರಾಟವನ್ನು ಮನೋಜ್ಞವಾಗಿ, ಉಸಿರು ಬಿಗಿ ಹಿಡಿದು ನೋಡುವಷ್ಟು ಕುತೂಹಲಭರಿತವಾಗಿ ಚಿತ್ರಿಸಿದೆ. ಆ ಚಿತ್ರದಲ್ಲಿ, ಕೋರ್ಟಿನಲ್ಲಿ ಹೆಣ್ಣುಮಕ್ಕಳ ಪರ ವಾದ ಮಾಡುವ ವಕೀಲನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿರುವ ಅಮಿತಾಭ್ ಬಚನ್ ತನ್ನ ವಾದದ ಕಡೆ ಹಂತದಲ್ಲಿ ಆಡುವ ಕೆಲ ಮಾತುಗಳು ಇಲ್ಲಿ ಉಲ್ಲೇಖನಾರ್ಹ ಅನಿಸಿತು. ಅದಕ್ಕೇ ಹಂಚಿಕೊಳ್ಳುತ್ತಿರುವೆ….
No. No your honour. No ಎನ್ನುವುದು ಕೇವಲ ಒಂದು ಶಬ್ದವಲ್ಲ; ಅದೊಂದು ಸಂಪೂರ್ಣ ವಾಕ್ಯ. ಅದಕ್ಕೆ ಯಾವುದೇ ತರ್ಕ, ಸ್ಪಷ್ಟೀಕರಣ, ವಿವರಣೆ ಅಥವಾ ವ್ಯಾಖ್ಯಾನದ ಅಗತ್ಯವಿಲ್ಲ. ‘ಇಲ್ಲ/ ಬೇಡ’ ಎಂದರೆ ‘ಇಲ್ಲ/ಬೇಡ’ಎಂದೇ ಅರ್ಥ. ನನ್ನ ಕಕ್ಷಿದಾರರು (ಅತಿಕ್ರಮಣಕ್ಕೆ ಒಳಗಾದ ಹೆಣ್ಣುಮಕ್ಕಳು) No ಎಂದರು. No ಎಂದರೆ no ಎಂದೇ ಅರ್ಥವೆಂಬುದು ಈ ಹುಡುಗರಿಗೆ (ಅತಿಕ್ರಮಣ ಮಾಡಿದ ಯುವಕರು) ಗೊತ್ತಾಗಬೇಕು. ಹುಡುಗಿ ಕೇವಲ ಪರಿಚಿತಳಿರಲಿ, ಸ್ನೇಹಿತೆಯೋ ಗರ್ಲ್ ಫ್ರೆಂಡೋ ಆಗಿರಲಿ, ಸೆಕ್ಸ್ ವರ್ಕರ್ ಆಗಿರಲಿ, ಇಲ್ಲವೇ ಸ್ವಂತ ಹೆಂಡತಿಯೇ ಆಗಲಿ, no means no. No ಅಂದಾಗ, ಯಾರೇ ಆದರೂ ಅಷ್ಟಕ್ಕೇ ನಿಲ್ಲಬೇಕು…







0 Comments