ದರ್ಶನ್ ಜೆ
ಬರೆದರೆ ….
“ಗೇಬ್ರಿಯಲ್ ಗಾರ್ಸಿಯ”ನಂತೆ
ಬರೆಯಬೇಕು !
ಬರೆಯುವಾಗಿನ magic
ಓದುವಾಗಿನ realism ಅನ್ನು
ಅಳಿಸಿಹಾಕುವಂತಿರಬೇಕು !
ನನಗೂ ನಾ ಸತ್ತಂತೆ
ಕನಸು ಬೀಳಬೇಕು
ನನ್ನ ಗೆಳೆಯರೆಲ್ಲರೂ
ನನ್ನ funeral ಗೆ ಬರಬೇಕು !
ನಾನೂ ರೋಮ್ ಸ್ಪೇನ್ ವಿಯೆನ್ನಾ
ಮತ್ತು ಇಡೀ ಲ್ಯಾಟಿನ್ ಅಮೆರಿಕಾವನ್ನು
ಪ್ರತ್ಯಕ್ಷ ನೋಡಬೇಕು !
ಸ್ಪ್ಯಾನಿಷ್ ಭಾಷೆಯನ್ನು
ಬೇಗ ಕಲಿಯಬೇಕು
ಮತ್ತು
pablo neruda ನನ್ನ
ಅವನ ಭಾಷೆಯಲ್ಲೇ ಓದಬೇಕು!
ನಾ
ನೂ ಏಕಾಂಗಿಯಾಗಬೇಕು
ಅದರ ಬಿಸಿ ಚಳಿ ಅನುಭವಿಸಬೇಕು
ಕನಸುಗಳ ಮಾರಬೇಕು
ಚೆಲುವೆಯೊಬ್ಬಳ ಮಗ್ಗುಲಲ್ಲಿ ಇಡೀ ರಾತ್ರಿ ಕಣ್ಣೆವೆಯಿಕ್ಕದೆ ಮಲಗಬೇಕು !
ನಾನೂ
ಸಂತನಾಗಬೇಕು
spy ಆಗಬೇಕು
ಚಿಕ್ಕ ದೇಶವಾದರೂ ಸರಿಯೇ
ಅದರ ಅಧ್ಯಕ್ಷನಾಗಬೇಕು !
ಕಾಲರಾ ಬಂದರೂ
ಮಲೇರಿಯಾ ನೇ ಕೊಂದರೂ
ಪ್ರೀತಿಯಾಗಬೇಕು !
ನಾನೂ
ಕುತೂಹಲಗಳ ಬೆನ್ನಟ್ಟಿ ಹೋಗಬೇಕು
ಹ್ಯೂಮನ್ ಸ್ಪಿರಿಟ್ಟುಗಳ ಜೊತೆ
ಬದುಕಿನ ನಂತರದ
possibility ಗಳ ಬಗ್ಗೆ
ಚಿಂತಿಸಬೇಕು !
ನಾನೂ
ಗೇಬ್ರಿಯಲ್ ನಂತಾಗಬೇಕು
ಬಿಡುವಿಲ್ಲದೆ ಬರೆಯಬೇಕು
ಸಿನೆಮಾ telenova ಮಾಡಬೇಕು !
ಏನೂ ಮಾಡಲಾಗದ
ಆತ್ಮದ ತುಕಡಿಗಳನ್ನು
ಸಣ್ಣ ಕಥೆಗಳಾಗಿ ಬರೆದು
ಹಾಗೇ ಗಾಳಿಯಲ್ಲಿ
ತೇಲಿಬಿಟ್ಟು ಬಿಡಬೇಕು…..
ನಾನೂ
ತಾತ್ಕಾಲಿಕವಾಗಿ
marquez ಆಗಬೇಕು !!!






0 Comments