ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Love u ಮೈ ಗೈಡ್ !

ಬಿ ವಿ ಭಾರತಿ

ಅವತ್ತು ಜೈಸಲ್ಮೇರ್ ನ ಕೋಟೆಯಲ್ಲಿ ಕೋಟಿ ಜನ. ಗೈಡ್ ಗಳಿಗೆಲ್ಲ ಡಿಮ್ಯಾಂಡಪ್ಪೋ ಡಿಮ್ಯಾಂಡು. ನಮ್ಮ ಸಾರಥಿ ಹುಡುಕಿ ಸುಸ್ತಾದವನು ಬೀದಿಯಲ್ಲಿ ಅಂಗಡಿ ಮುಂದೆ ನಿಂತಿದ್ದವನನ್ನ ‘ಗೈಡ್?’ ಎಂದ. ಆಯಪ್ಪ ಆಕಾಶ ನೋಡ್ತಾ ನಿಂತಿದ್ದಿದ್ದು ತಲೆ ಆಡಿಸ್ತು. ಆಮೇಲೆ ಕೋಟೆ ಒಳಗೆ ಕರ್ಕೊಂಡು ಹೋಯ್ತು. ನಾವು ಕುರಿಗಳ ಹಾಗೆ ಹಿಂಬಾಲಿಸಿದ್ವಿ.

ರಾಜನ ಫೋಟೋ ಎದುರು ನಿಂತು ‘ಇದು ಇಂತಿಂಥ ಇಂತಿಂಥ ರಾಜ … ಇಂತಿಂಥ ಇಂತಿಂಥ ವರ್ಷದಲ್ಲಿ ರಾಜ್ಯಭಾರ ಮಾಡಿದ್ರು…’ ಅಂತೇನೋ ಹೇಳ್ತು. ತಲೆ ಆಡಿಸಿದ್ವಿ.

ಆಮೇಲೆ ಇನ್ನೆಲ್ಲೋ ನಿಲ್ಸಿ ಇನ್ನೇನೋ ಹೇಳ್ತು. ಆಗ ಗಮನಿಸಿದ್ವಿ … ಆಯಪ್ಪ ಕೆಳಗಿನ ಬೋರ್ಡಲ್ಲಿ ಬರ್ದಿರೋದನ್ನೇ ಓದ್ತಿದೆ ಅಲ್ವಾ!! ಅಂತ. ಆಮೇಲೆ ಇನ್ನೆಲ್ಲೋ ನಿಲ್ಸಿ ‘ಹಿಂಗಿಂಗೆ .. ಹಿಂಗಿಂಗೆ’ ಅಂತ ಶುರು ಮಾಡ್ತಿದ್ದ ಹಾಗೆ ಸ್ಯಾಂಡಿ ಮಗ ‘ ವೋ ಸಬ್ information ಉಸ್ ಬೋರ್ಡ್ ಮೇ ಹೈ. ಉಸ್ಕೇ ಅಲಾವಾ ಕುಚ್ ಔರ್ ಬತಾಯಿಯೇ’ ಅಂದುಬಿಟ್ಟ. ಆಯಪ್ಪ ಕಕಮಕ ಅಂತ ನಿಂತು ಬಿಡ್ತು. ಅಲ್ಲಿಂದ ಮುಂದೆ ಅದರ ಪಾಡು ನೋಡ್ಬೇಕು! ನಮಗೆ ಗೊತ್ತಾಗೋಯ್ತು ಅದರ ಆಟ ಅಂತ ಅದಕ್ಕೆ ಅರ್ಥ ಆಗೋಯ್ತು. ಬಿದ್ರೂ ಮೀಸೆ ಮಣ್ಣಾಗದ ಹಾಗೆ ಪಾಪ ಒದ್ದಾಡ್ತಿದೆ!

ನಮಗೆ ಉರಿಯಕ್ಕೆ ಶುರು ಆಗೊಯ್ತು. ಎದುರೆದುರೇ ರೇಗ್ಸಕ್ಕೆ ಶುರು ಮಾಡಿಬಿಟ್ವಿ. ಆದರೂ ಅರ್ಥವಾಗದ ಹಾಗೆ ನಟಿಸ್ತಲೇ ಹೋದ. ನಾವೂ ಕಿಡಿಗೇಡಿ ನಗುವಿನ ಜೊತೆ ಅವನನ್ನ ಪೇಚಿಗೆ ಸಿಕ್ಕಿಸ್ತಾ ಹೋದ್ವಿ. ಒಟ್ನಲ್ಲಿ ಇಬ್ರೂ ಆಸ್ಕರ್ ಅವಾರ್ಡ್ ಸ್ಫರ್ಧೆಗಿಳಿದ್ವಿ!

ಆಯಪ್ಪನ ನಟನೆ ಮುಗಿಯದೇ ಮುಂದುವರೀತಲೇ ಹೋದಾಗ ‘ ನೀವು ನಮ್ಮಪ್ಪನಾಣೆ ಗೈಡ್ ಅಲ್ರೀ’ ಅಂದೇ ಬಿಟ್ವಿ. ಅವನು ‘ ಅಯ್ಯೋ ಗೈಡ್ ಅಲ್ದೇ ಹೇಗೆ ಸಾಧ್ಯ’ ಅಂತ ಭಂಡತನ ತೋರಿಸಿದ. ನಾವು ಸಿಟ್ಟು ಬಂದು ಒಂದು ಬಾಗಿಲಿನ ಮುಂದೆ ನಿಂತು ‘ ಇಲ್ಲೇನಿದೆಯೋ’ ಅಂದ್ವಿ ವ್ಯಂಗ್ಯವಾಗಿ. ಅವನು ‘ಇರಿ’ ಅಂದವನೇ ಒಳಕ್ಕೆ ಹೋಗಿ ಬಂದು ‘ಇದು ಶಸ್ತ್ರಗಳ ರೂಮು’ ಅಂದ!

ಊರು ಸುತ್ತುವುದೆಂದರೆ ಏನೆಲ್ಲ ಅನುಭವಗಳು!

‍ಲೇಖಕರು admin

31 December, 2015

1 Comment

  1. ನ.ವಿಶ್ವನಾಥ

    Guide andre guide.Hottepaadu?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading