ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Love u ಕನ್ನಡ್ಕ..

“ದೂರ ದೃಷ್ಟಿ”

manjunath kamath

ಮಂಜುನಾಥ ಕಾಮತ್ 

ಫೇಸ್ಬುಕ್ಕಲ್ಲಿ ನನ್ನ ಫೋಟೋ ನೋಡಿದ್ದಾರೆ. ಹೆಣ್ಣಿನ ಕಡೆಯವ್ರು. ಅವ್ರಿಗೆ ಡೌಟು. ಹುಡುಗ ತೆಳ್ಳಗೆ, ಉದ್ದಕ್ಕೆ, ಕಪ್ಪಗಿದ್ರೂ ಓಕೆ. ಈ ದಪ್ಪ ಕನ್ನಡ್ಕ ಯಾಕೆ?

13221480_1104122469650148_1711786316817410045_nನನಗೂ ಅವರಿಗೂ ಪರಿಚಯ ಇರೋ ಒಬ್ಬರತ್ರ ಕನ್ನಡ್ಕದ ಬಗ್ಗೆಯೇ ಎಂಕ್ವೈರಿ ಮಾಡಿದ್ದಾರೆ. ಕಣ್ಣಿನ ದೃಷ್ಟಿಯನ್ನು ಮಾತಿನಲ್ಲೇ ಅಳೆದಿದ್ದಾರೆ. ಕೆಲವೇ ದಿನಗಳಲ್ಲಿ, ಕೂಡಿಬರುತ್ತಿದ್ದ ಜಾತಕವನ್ನೂ ಕೂಡಿ ಬರುತ್ತಿಲ್ಲ ಅಂತ ಹೇಳಿ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಕಾರಣ ಈ ಕನ್ನಡ್ಕಾನ?

ಮನೆಯೋರಿಗೆ ಹುಡುಗಿ ತಪ್ಪಿದ ಬೇಜಾರು. ಕನ್ನಡ್ಕ ತೆಗೆದಿರಿಸೋಣವೆಂದರೆ ನಂಗೆ ದೂರದ್ದು ಅಸ್ಪಷ್ಟ. ಆದರೆ ಇದೇ ಕನ್ನಡ್ಕ ಮೊನ್ನೆ ಮೊನ್ನೆಯ ಘಟನೆಯಲ್ಲಿ ನನ್ನ ಮಾನ ಉಳಿಸಿತು. ನನ್ನ ಮುಖಕ್ಕೆ ಕನ್ನಡ್ಕವೇ ಒಂದು ಕಲೆ, ಅದಿಲ್ಲವಾದರೆ ನಾನು ನಾನೇ ಅಲ್ಲವಂತೆ. ಕನ್ನಡ್ಕ ಇಲ್ಲವೆಂದರೆ ನನ್ನ ಪರಿಚಯವೇ ಆಗಲ್ಲವಂತೆ. ಅಷ್ಟರ ಮಟ್ಟಿಗೆ ಈಗ ನನಗದು ಅಂಟಿಕೊಂಡಿದೆ.

ಸೂಪರ್ ಮಿನಿಟ್ಟಲ್ಲಿ ಏನಾಯ್ತೂಂತ ಗೊತ್ತೇ ಇದೆ. ಕೈ ನಡುಗಿ ಸೋತು ಹೋದೆ. ಬೂಟ್ ಕ್ಯಾಂಪಲ್ಲಿ ಡೈಸ್ ಕ್ಯಾಂಡಿ ಆಟದಲ್ಲಿ ಏಳು ಡೈಸ್ ಇರಿಸುತ್ತಿದ್ದೆ. ಐದು ಆರು ಏಳನೇ ಡೈಸನ್ನು ಇಡುತ್ತಿದ್ದಾಗ ಕನ್ನಡ್ಕದ ಫ್ರೇಮು ನಂಗೆ ಅಡ್ಡವಾದಂತನ್ನಿಸಿ ತೆಗೆದಿಟ್ಟು ಆಡುತ್ತಿದ್ದೆ. ಶೋನಲ್ಲೂ ಹಾಗೇ ಮಾಡಿದ್ದು. ನರ್ವಸ್ನೆಸ್ ನಿಂದಾಗಿ ಆರು ಡೈಸನ್ನು ಇಡಲಾಗದೆ ಒದ್ದಾಡದೆ.

ಶೋ ನೋಡಿ ಕೇಳಿದವ್ರತ್ರೆಲ್ಲ ಅದನ್ನೇ ಹೇಳಿದ್ದೆ. ಆದ್ರೆ ಊರ ಕೆಲವ್ರು ಒಪ್ಪಲೇ ಇಲ್ಲ. “ಈರ್ ಕನ್ನಡ್ಕ ದೆತ್ತ್ ದ್ ಸೋತಿನಿಯೇ. ಕನ್ನಡ್ಕ ಹಾಕಿದ್ದಿದ್ರೆ ಹಣ ನೀವೇ ಗೆಲ್ತಿದ್ರಿ” ಅಂತ ಅಂಗಡಿ ಕೃಷ್ಣಣ್ಣ ಹೇಳಿದ್ದೇ ಸೈ ಹೆಚ್ಚಿನವ್ರ ಬಾಯಲ್ಲಿ ಅದೇ ಬಂದು ಬಿಡ್ತು. ನಿಜ ಅಲ್ಲದಿದ್ರೂ ಇದು ಮಜಾ ಅನ್ನಿಸಿ ಮತ್ತೆ ಯಾರು ಕೇಳಿದರೂ ಕನ್ನಡ್ಕ ತೆಗೀಬಾರ್ದಿತ್ತು. ಇಲ್ದಿದ್ರೆ ಗೆಲ್ತಿದ್ದೆ. ಅದಿದ್ದಿದ್ರೆ ಫರ್ಸ್ಟಿಗಂತೂ ಔಟಾಗ್ತಿರಲಿಲ್ಲ ಅಂತೆಲ್ಲ ಹೇಳಿ ಮಾನ ಉಳಿಸಿಕೊಳ್ಳುತ್ತಿದ್ದೆ.

I LOVE MY ಕನ್ನಡ್ಕ….😘

‍ಲೇಖಕರು Admin

8 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading