ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಾಲ ಕಟ್ ಮಾಡ್ತಾರೆ ಅಷ್ಟೇ..
Journalist Roundup ನೀವಾಡುವ ಮಾತನ್ನು ಒಬ್ಬೊಬ್ಬರು ಒಂದೊಂದು ರೀತಿ ಗ್ರಹಿಸಬಹುದು ಎಂಬುದು ನೆನಪಿನಲ್ಲಿರಲಿ ಆರ್.ಟಿ.ವಿಠ್ಠಲಮೂರ್ತಿ ಆ ಹೊತ್ತಿಗಾಗಲೇ ಸಿದ್ರಾಮಯ್ಯ ಸಿಎಂ ಎಂಬುದು ನಿಕ್ಕಿಯಾಗಿತ್ತು.ಕಾಂಗ್ರೆಸ್ ಹೈಕಮಾಂಡ್ ಕೂಡಾ ಇವರೇ ಮುಖ್ಯಮಂತ್ರಿ ಎಂದು ಘೋಷಿಸಿ ಆಗಿತ್ತು. ಸರಿ,ಸಿದ್ರಾಮಯ್ಯ ಅವರೇನೋ ಸಿಎಂ.ಆದರೆ ಅವರ ಸಚಿವ...
ಎಲ್ಲಿಂದ ಶುರುವಾಯಿತು ಅಂಕೋಲೆ?
ಅಂಕೋಲೆ ವೆಂಕಟ್ರಮಣ ಗೌಡ ಎಲ್ಲಿಂದ ಶುರುವಾಯಿತು ಅಂಕೋಲೆ? ಬೆಟ್ಟದ ಸೆರಗು ಹಿಡಿದು ನಡೆವಾಗ ಕಿರುದಾರಿಯಲ್ಲಿ ಕಂಡ ಕನಸು ಅದೆಷ್ಟು ವರ್ಷಗಳ ತಪಸ್ಸು! ಪೇಟೆಯಿಂದ ಬರುವ ಸರೀಕ ಹುಡುಗರ ಮುಂದೆ ಅವಮಾನದಿಂದ ತೊಯ್ದು ತೊಪ್ಪೆಯಾಗಿ ನಿಂತ ಘಳಿಗೆಯಲ್ಲೇ ಒಳಗೆ ಒದೆಯುತ್ತಿತ್ತು ಅಂಕೋಲೆ ನಾವೆಲ್ಲ ಹಳ್ಳಿ ಗುಗ್ಗುಗಳು, ಪೆದ್ದರು ಅದೂ ಆಗಿರದ...
ಜುಗಾರಿ ಕ್ರಾಸ್‌ನಲ್ಲಿ ಭಗವಾನ್, ಭಗವಾನ್ ಹೇಳಿಕೆ ಮತ್ತು ಪ್ರಶಸ್ತಿ
ಪೆರಿಯಾರ್ ಜನ್ಮೋತ್ಸವದಲ್ಲಿ ಭಗವಾನ್ ಹೇಳಿಕೆ ಮತ್ತು ಅದು ಹುಟ್ಟು ಹಾಕಿದ ವಿರೋಧಕ್ಕೆ ಮೆಲ್ಗಣ್ಣಿಗೆ ಕಾಣದ ಇನ್ನೊಂದು ಕಾರಣವಿದೆ . ಅದು ಪುರುಷ ಪ್ರಜ್ಞೆಯನ್ನು ಸಿಟ್ಟಿಗೇಳಿಸಿದೆ ಎಂದು ಸಂವರ್ತಾ ಸಾಹಿಲ್ ಬರೀತಾರೆ. ಇದೊಂದು ಕುತೂಹಲಕರ ವಿಶ್ಲೇಷಣೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಚರ್ಚೆ ವಸ್ತುನಿಷ್ಠವಾಗಿರಲಿ,...
’ಆ ಹುಡುಗ ಗೋಡೆ ಮುಟ್ಟಿ ಆಗಾಗ ಸಮಾಧಾನಿಸುತ್ತಾನೆ…’ – ದಿವ್ಯಾ ಆಂಜನಪ್ಪ
ಗೋಡೆ ದಿವ್ಯ ಆಂಜನಪ್ಪ ಹುಡುಗನೊಬ್ಬ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದ ರಕ್ತ ಸೋರಿತು ಗಾಬರಿಯಾಗಿ ದೂರ ಓಡಿ ಮತ್ತೊಂದು ಗೋಡೆಗೆ ತಲೆ ಚಚ್ಚಿಕೊಂಡ ಆಗಲೂ ರಕ್ತ ಒಸರಿತು! ಹುಡುಗ ಗಂಭೀರನಾದ ಬೇಕೆಂದೇ ಹೊಸದು ಗೋಡೆ ಹುಡುಕಿ ಮತ್ತೆ ತಲೆ ಚಚ್ಚಿಕೊಂಡ ರಕ್ತವೋ ಧಾರಾಕಾರ ಸುರಿಯಿತು! ಖುಷಿಯಿಂದ ನಕ್ಕ.... ಅದೇನನ್ನೋ ಕಂಡುಕೊಂಡಂತೆ!...
’ಕಮಲ ಬಸದಿಯ ಕರಿ ಕಲ್ಲು’ – ಜಯಶ್ರೀ ದೇಶಪಾಂಡೆ
- ಜಯಶ್ರೀ ದೇಶಪಾಂಡೆ ಬನು ಅ೦ದರೆ ಬನಶ೦ಕರಿ, ನನ್ನ ಗೆಳತಿ. ಅ೦ತಿ೦ಥ ಸಾದಾ ಗೆಳತಿ ಅಲ್ಲ, ಫ್ರಾಕಿನ ಬೆನ್ನ ಹಿ೦ದಿನ ಗು೦ಡಿ ಹಾಕಿಕೊಳ್ಳಲು ಬರದೆ ಇನ್ನೊಬ್ಬರ ಕಡೆಯಿ೦ದ ಹಾಕಿಸಿಕೊಳ್ಳಲು ಅಕ್ಕ ಅಥವಾ ಅಮ್ಮ ಯಾರದಾದರೂ ಮರ್ಜೀ ಕಾಯಬೇಕಾದ ವಯಸ್ಸಿನ ಗೆಳತಿ. ಸ೦ಜೆಯ ಐದು ಗ೦ಟೆ ಸಾಲಿ ಬಿಡುವಾಗಲೇ ನಾವು ಇಬ್ಬರೂ ಬಸದಿಗೆ ಹೋಗಿ ಆಡುವುದು...
'ಹಾಗಿದ್ದರೆ ಅಡಿಗರ ಕಾವ್ಯವನ್ನೂ ಚಿತ್ರೀಕರಿಸಬಹುದಲ್ಲ!’ – ಎಸ್ ದಿವಾಕರ್
ವಿಟ್ಮನ್ ಮತ್ತು ಅಡಿಗ ಎಸ್ ದಿವಾಕರ್ ಕವನವೆನ್ನುವುದು ಅಭಿವ್ಯಕ್ತಿ ಸಮಗ್ರತೆಯ ಅತ್ಯಂತ ತೀವ್ರ ರೂಪದಲ್ಲಿರುವ ಭಾಷೆ. ಅದನ್ನು ರಕ್ಷಿಸಿಡಬಲ್ಲವನು ಆ ಭಾಷೆಯ ಕವಿ ಮಾತ್ರ. ಹೀಗಿರುವಾಗ ಒಂದು ಕವನವನ್ನು ಇನ್ನೊಂದು ಭಾಷೆಗೆ ಅನುವಾದಿಸುವುದೇ ಸಾಧ್ಯವಿಲ್ಲವೆಂಬ, ಅನುವಾದಿಸುವಾಗ ಯಾವುದು ಕಳೆದುಹೋಗುತ್ತದೋ ಅದೇ ಕಾವ್ಯವೆಂಬ...
ಅಪ್ಪ ಮಕ್ಕಳ ಕ್ರಿಕೆಟ್ ಆಟ
ಭಾರತೀಯ ಕ್ರಿಕೆಟ್ನಲ್ಲಿ ತಂದೆ ಮಕ್ಕಳು ಹನುಮಂತ ಅನಂತ ಪಾಟೀಲ್ ಮೂಲತಃ ಭಾರತ ಒಂದು ಭಾವನಾತ್ಮಕ ದೇಶ. ಈ ಹಿಂದೆ ಈ ದೇಶವನ್ನಾಳಿದ ರಾಜ ಮಹಾರಾಜರು ನವಾಬರು ಆದಿಲ್ಶಾಹಿಗಳು ವಂಶಪಾರ್ಯಂರ್ಯವನ್ನು ಒಪ್ಪಿಕೊಂಡು ಬಂದಂತಹವರು. ಸುಮ್ಮ,ನೆ ಒಮ್ಮೆ ಈ ವಂಶವಳಿಗಳ ಬಗೆಗೆ ಅವಲೋಕಿಸುವ, ಮೊಘಲ್ ಸಾಮ್ರಾಜ್ಯವೆಂದರೆ ನಮಗೆ ತಕ್ಷಣಕ್ಕೆ ನೆನಪಿಗೆ...
ಮಕ್ಕಳ ಕೃತಿಗೆ ಒಂದು ಲಕ್ಷ ರೂಪಾಯಿ ಬಹುಮಾನ
ಕನ್ನಡದಲ್ಲಿ ರಚಿತವಾಗಿರುವ ಅತ್ಯುತ್ತಮ ಮಕ್ಕಳ ಕೃತಿಗೆ ವಾತ್ಸಲ್ಯ ಪುರಸ್ಕಾರ ಮುಂಬೈನ ಪದ್ಮ ಬಿನಾನಿ ಫೌಂಡೇಷನ್ ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಭಾರತೀಯ ಭಾಷೆಗಳ ಮಕ್ಕಳ ಸಾಹಿತ್ಯಕ್ಕೆ ವಾತ್ಸಲ್ಯ ಪುರಸ್ಕಾರವನ್ನು ನೀಡುತ್ತಿದೆ. ಪ್ರತಿವರ್ಷವೂ ಒಂದೊಂದು ಭಾರತೀಯ ಭಾಷೆಯನ್ನು ಆಯ್ಕೆಮಾಡಿಕೊಂಡು ಆ...
ಬಾ ತಾಯಿ ಮಹದಾಯಿ…
- ಯರಗಲ್ಲ ವಿಜಯ ಊರಾಗ ಒಳ ಹೊಕ್ಕರ ಸ್ಮಶಾನ ಮೌನ,ಸದ್ದಿಲ್ಲ, ಮಂದಿಯ ಉಲುವಿಲ್ಲ, ಕಣ್ಣು ಹೊಳ್ಳಿಸಿದಷ್ಟೂ ಬರಡು ಬಣ ಬಣ, ಉಸಿರಿನ ಏರಿಳಿತವಿಲ್ಲ,ಜೀವಿಲ್ಲ, ಅನ್ನ ನೀಡುವ ಭೂತಾಯಿ ಒಡಲು ಒಣ ಒಣ, ಮಡಿಲಾಗ ಚೂರು ಹಸಿರಿಲ್ಲ, ಬರಗಾಲ ಹುಟ್ಟಿ ನದಿ ಸತ್ತು ಹೋಗ್ಯಾವ, ಕುಡಿಯಾಕ ಬೊಗಸೆ ನೀರಿಲ್ಲ || ವರ್ಷ ವರ್ಷ ತಪ್ಪದ ಬರ...
ಒಮ್ಮೆ ಕದಡಿದ ಕೊಳವು..
ಒಮ್ಮೆ ಕದಡಿದ ಕೊಳವು ಎಸ್. ಬಾಗೇಶ್ರೀ ಒಮ್ಮೆ ಕದಡಿದ ಕೊಳವು, ಮತ್ತೆ ತಿಳಿಯಾಗಿರಲು, ತಳದೀ ಮಲಗಿಹ ಕಲ್ಲು ನಿನ್ನ ನೆನಪು: ಅಡಿ ಅಡಿಯನು ಎಣಿಸಿ, ಇಡು ಮನದ ಮೂಲೆಯಲಿ, ಹುಚ್ಚು ಓಟದ ಬಯಕೆ ನಿನ್ನ ನೆನಪು: ಬೇಸರವು ಕವಿದಿರಲು, ಎಲ್ಲ ಕಹಿಯಾಗಿರಲು, ಸಿಹಿಕನಸ ನೇವರಿಕೆ ನಿನ್ನ ನೆನಪು: ಬಹಳ ಬಹಳ ಬಳಸಿ ಹಳಸಿದ, ಪದಪುಂಜಗಳ ನಡುವೆ, ಹೊಸತ...
ಮೀನು ಹಿಡಿದ ಮುದುಕ
ಮೀನು ಹಿಡಿದ ಮುದುಕ ಹರೀಶ್ ಕೇರ ಮೊನ್ನೆ ಕ್ಯೂಬಾದ ಮುದುಕ ಮೀನುಗಾರ ಸ್ಯಾಂಟಿಯಾಗೋ ನನ್ನ ಭೇಟಿಯಾದ ಮೂರು ಹಗಲು ಮೂರು ರಾತ್ರಿ ನಡುಗಡಲಿನಲ್ಲಿ ತನ್ನ ದೋಣಿಯನ್ನೆಳೆದೊಯ್ದು ಮಾರ್ಲೆನ್ ಮೀನನ್ನು ಮಣಿಸಿ ಕೊಂದು ದೋಣಿಗೆ ಕಟ್ಟಿ ಎಳೆದು ಶಾಕ್ ಗಳ ಜತೆ ಹೋರಾಡಿ ದಣಿದ ಮುದುಕ ಬೆಂಗಳೂರಿನ ಮಾಕರ್ೆಟ್ಟಿನಲ್ಲಿ ರುಚಿಯಾದ ಮೀನು ಹುಡುಕಿ ಸೋತು...
ಎಸ್ ದಿವಾಕರ್ ಈಗ S Diwakar
ನರೇಂದ್ರ ಪೈ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನವರು ಪ್ರಕಟಿಸಿರುವ ಎಸ್ ದಿವಾಕರ್ ಅವರ ಅನುವಾದಿತ ಇಂಗ್ಲೀಷ್ ಕತೆಗಳ ಸಂಕಲನ Hundreds of Streets to the Palace of Lights ನಲ್ಲಿ ಸೇರಿರುವ ಹದಿನೇಳು ಕತೆಗಳು ಯಾವುವು ಎಂಬ ಕುತೂಹಲ ಸಹಜವಾದದ್ದೇ. ಎಸ್ ದಿವಾಕರ್ ಅವರ "ರೂಪ ರೂಪಗಳನು ದಾಟಿ" ಸಂಕಲನದಲ್ಲಿ ಲಭ್ಯವಿರುವ...
ಆಹಾ, ಅದೇನು ಘಮ ನನ್ನ ಪುಸ್ತಕದಲ್ಲಿ…
Invited Article ಮೊದಲ ಪುಸ್ತಕವೆಂಬ ಮಾಯೆಯ ಕುರಿತು... ಎಚ್ ಬಿ ಇಂದ್ರಕುಮಾರ್ ಮೊದಲ ಪುಸ್ತಕ... ಆಹಾ ಅದೇನು ನೆನಪು? ಏನು ಘಮ? ಮೊನ್ನೆ ಫೇಸ್ ಬುಕ್ ನಲ್ಲಿ ಇಂದ್ರಕುಮಾರ್ ತಮ್ಮ ಮೊದಲ ಪುಸ್ತಕದ ಬಗ್ಗೆ ಎರಡು ಸಾಲು ಬರೆದುಕೊಂಡಿದ್ದರು. ಅರೆ... ನಿಮ್ಮೊಳಗೆ ಆಗ ಉಕ್ಕಿದ ಭಾವನೆಗಳನ್ನೆಲ್ಲಾ ಬರೆದುಕೊಡಿ ಎಂದು 'ಅವಧಿ'...
ಪಾರಿಜಾತ ಆಯುವಾಗಲೆಲ್ಲಾ ಕೃಷ್ಣ ಬಿಡದೇ ಕಾಡುತ್ತಾನೆ…
ಆತ್ಮ ಸಖಿ ನೆನಪಾಗಲೇ ಇಲ್ಲವೇ.. -ಸ್ಮಿತಾ ಅಮೃತರಾಜ್, ಸಂಪಾಜೆ ಹುಲ್ಲ ಹಾಸಿನ ಮೇಲೆ ತಲೆ ಕೆಳಗು ಬಿದ್ದ ಪಾರಿಜಾತವ ಆಯುವಾಗಲೆಲ್ಲಾ ಕೃಷ್ಣ ಬಿಡದೇ ಕಾಡುತ್ತಾನೆ. ಒಂದೊಂದೇ ಆಯ್ದು ಉಡಿ ತುಂಬಿಕೊಳ್ಳುವಷ್ಟು ಹೊತ್ತು ಮೌನ-ಸಂವಾದ. ಜನುಮ ಜನುಮಾಂತರದ ಬಂಧುವಿನಂತೆ ಆತ್ಮ ಸಖನಂತೆ ಕುಶಲ ವಿಚಾರಿಸಿ ನನ್ನ ತುದಿ ಮೊದಲಿಲ್ಲದ ಪ್ರಶ್ನೆಗಳಿಗೆ...
ನಾನಿನ್ನು ಏನನ್ನೂ ಬರೆಯುವುದಿಲ್ಲ…
ಸ್ವಗತ ವನಮಾಲಾ ಸಂಪನ್ನಕುಮಾರ ~~~~~ ಬೆನ್ನಿಗಿರಿದವರು ಎದುರು ಬಂದು ಸುರಿವ ನೆತ್ತರಿಗೆ ಕಾರಣ ಕೇಳುತ್ತಾರೆ ಆಗ ಇನ್ನಷ್ಟು ನೋವು * * * * ದನಿ ಮೌನವಾಗಿ ಯುಗ ಉರುಳಿದೆ ಹಾಡು ನನಗೀಗ ಅಪರಿಚಿತ * * * * * ಯಾವ್ಯಾವುದೋ ಕಾರಣಕ್ಕೆ ಎದೆಯೊಳಗೆ ಸಿಡಿಮದ್ದು ಹುಟ್ಟುತ್ತದೆ ಅದು ಸಿಡಿಯದಂತೆ ತಡೆಯುವುದೇ ನನ್ನ ಬದುಕಾಗಿದೆ * * * * *...
ಇದು ಜಯರಾಮಾಚಾರಿ ಸಾಹಸ : The Knot
ಜಯರಾಮಾಚಾರಿ ಇತ್ತೀಚಿಗೆ ತಾನೆ ತಮ್ಮ ಕಥಾ ಸಂಕಲನ 'ಕರಿಮುಗಿಲ ಕಾಡಿನಲ್ಲಿ' ಹೊರತಂದು ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದು ಈಗ ಬೆಂಗಳೂರು ಮೆಟ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಇವರ ತುಡಿತ ಬರವಣಿಗೆ ಹಾಗೂ ಸಿನೆಮಾದತ್ತಲೇ.. ಮೆಟ್ರೋ ಕಾಮಗಾರಿಯ ಸದ್ದಿನ...
ಜೋಗಿಯವರ 'ವಿರಹ'
EXCLUSIVE ವಿರಹದ ಸಂಕ್ಷಿಪ್ತ ಪದಕೋಶಕ್ಕೆ ಬರೆದ ಮೊದಲ ಮಾತು ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ. ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್ ಅಂಕಲ್, ಒಬ್ಬ ಸ್ಟೀಲ್ ಪಾತ್ರೆ ಮಾರುವವನು, ಒಬ್ಬ ಟೈಲರ್, ಒಬ್ಬಳು ತರಕಾರಿ ಮಾರುವ ಹೆಂಗಸು, ಟಾಟಾ ಇಂಡಿಕಾ ಕಾರಿಟ್ಟುಕೊಂಡ ಒಬ್ಬ- ಹೀಗೆ ಅಲ್ಲಿ ತರಹೇವಾರಿ...
ವಿಜಯನಗರ ಬಿಂಬದಲ್ಲಿ 'ಧಾಂ ಧೂಂ'
Update ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ 20ನೇ ವಷಾದ ಸಂಭ್ರಮಾಚರಣೆಯಲ್ಲಿ ತಿಂಗಳಿಗೊಂದು ಕಾಯ೯ಕ್ರಮವನ್ನು ಹಮ್ಮಿಕೊಂಡು ಬಂದಿದೆ. ಸೆಪ್ಟೆಂಬರ್ 27ರಂದು ಬೆಂಗಳೂರಿನ ಕಲಾ ಗ್ರಾಮದಲ್ಲಿ "ಮಕ್ಕಳ ರಂಗಭೂಮಿ ಇಂದು ಮುಂದು" ಎನ್ನುವ ಬಗ್ಗೆ ವಿಚಾರ ಸಂಕಿರಣವನ್ನು ಏಪ೯ಡಿಸಲಾಗಿತ್ತು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ...
ಬಾಪು ಮತ್ತು ವ್ಯಂಗ್ಯಚಿತ್ರ – ಜೆ ಬಾಲಕೃಷ್ಣ
ಡಾ ಜೆ ಬಾಲಕೃಷ್ಣ 2004ರಲ್ಲಿ ಆಗ ಅಮೆರಿಕದ ಸೆನೇಟರ್ ಆಗಿದ್ದ ಹಿಲರಿ ಕ್ಲಿಂಟನ್ ಹಣ ಸಂಗ್ರಹಣಾ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿಯ ಬಗ್ಗೆ ತಮಾಷೆ ಮಾಡುತ್ತಾ `ಆತ ಇಲ್ಲೇ ಸೇಂಟ್ ಲೂಯಿಯಲ್ಲಿ ಗ್ಯಾಸ್ ಸ್ಟೇಶನ್ ನಡೆಸುತ್ತಿದ್ದ' ಎಂದು ಹೇಳಿದರು. ಜನರ ನಗು ಕಡಿಮೆಯಾದ ಮೇಲೆ `ಇಲ್ಲ, ಮಹಾತ್ಮ ಗಾಂಧಿ 20ನೇ ಶತಮಾನ ಕಂಡ ಮಹಾನ್...
'ಗಾಂಧೀಜಿಯ ಅಂತರಾಳ' – ನಾ ದಿವಾಕರ್
ಹಿಂದ್ ಸ್ವರಾಜ್ ಕುರಿತು ಒಂದಿಷ್ಟು ನಾ ದಿವಾಕರ್ (ಗಾಂಧಿ ಜಯಂತಿಯ ಸಂದರ್ಭದಲ್ಲಿ ಅವರ ಮಹತ್ವದ ಕೃತಿ, ಬಹು ಚರ್ಚಿತ ಕೃತಿ ಹಿಂದ್ ಸ್ವರಾಜ್ ಕುರಿತಂತೆ ಕೆಲವು ಅನಿಸಿಕೆಗಳು) ತಮ್ಮ ಹಿಂದ್ ಸ್ವರಾಜ್ 30 ಕೋಟಿ ಭಾರತೀಯ ಜನತೆಯ ಮುಕ್ತಿಯ ಮಾರ್ಗ ತೋರುವ ಕೃತಿ ಎಂದು ತಾವೇ ಹೇಳಿಕೊಳ್ಳುವ ಹಿಂದ್ ಸ್ವರಾಜ್ನ ಮೂಲ ಸ್ವರೂಪವೇ...
ಗಾ೦ಧೀಜಿ ಮತ್ತು ರೈಲು
ಪಾಲಹಳ್ಳಿ ವಿಶ್ವನಾಥ್ ೨೯ನೆಯ ಮಾರ್ಚ್ ೧೯೪೭ರ ಬೆಳಿಗ್ಗೆ . ಬಿಹಾರಿನ ಪಾಟ್ನಾವಿನಿ೦ದ ದೆಹಲಿಗೆ ೯:೩೦ಕ್ಕೆ ರೈಲು ಹೊರಡಲಿತ್ತು. ೯.೨೫ಕ್ಕೆ ಸರಿಯಾಗಿ ೧೮ ವರ್ಷದ ಹುಡುಗಿ ಒಬ್ಬ ವೃದ್ಧರ ಜೊತೆ ಬೇಗ ಬೇಗ ನಡೆದುಕೊ೦ಡು ಬ೦ದು ರೈಲನ್ನು ಹತ್ತಿದಳು. ಆ ವೃದ್ಧರಿಗೋ ಮಹಾ ರಾಜಕಾರಣ. ದೇಶದ ವೈಸರಾಯರನ್ನು ಮು೦ದಿನ ದಿನ ಸ೦ಧಿಸಬೇಕಿತ್ತು....
