ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಲ್ಯ style of ಸಾಲ asking..!!
ಪ್ರತಿಭಾ ನಂದಕುಮಾರ್ ಒಂದ್ ಸಲ ಸ್ಕೂಟರಲ್ಲಿ ಹೋಗ್ತಿದ್ದೆ. ನನ್ ಫ಼್ರೆಂಡ್ (ಚಾರ್ಟರ್ಡ್ ಅಕೌಂಟೆಂಟ್) ಸಿಕ್ಕಿದ್ರು. " ಯಾಕೆ ಹೀಗೆ ಡಲ್ ಆಗಿದ್ದೀರಿ?" " ಬ್ಯಾಂಕಿಗೆ ಸಾಲ ಕೆಳಕ್ಕೆ ಹೋಗ್ತಿದ್ದೀನಿ. ಅದಕ್ಕೇ ಕಷ್ಟದಲ್ಲಿರೋ ಬಡವರ ಥರ ಕಾಣಿಸಕ್ಕೆ..." " ಯಾರ ಹೇಳಿದ್ದು? ನೀವು ಕಷ್ಟ ಇದೆ ಅಂದ್ರೆ ಬ್ಯಾಂಕ್ ದುಡ್ಡು ಕೊಡಲ್ಲ....
ಇಲ್ಲಿದೆ ನೋಡಿ ಕಿರಗೂರಿಗೆ ಸೆನ್ಸಾರ್ ಬೋರ್ಡ್ ಕೊಟ್ಟ ಕಿರಿಕ್
ಕಿರಗೂರಿನ ಗಯ್ಯಾಳಿ ಹೆಂಗಸ್ರು ತಮ್ತಮ್ಮ “ ಹಿಟ್ಟಿನ ಕೋಲು” ತಗಂಡು ಹಂಗೇ ಒಂದ್ಕಿತಾ ಸೆನ್ಸಾರ್ ಆಫೀಸ್ ತಾವ್ಕೆ ಹೋಗಿ, ಅಲ್ಲಿರೋ “ಕನ್ನಡ ಪಂಡಿತ”ರನೆಲ್ಲ ಮಾತಾಡಿಸ್ಕಂಡ್ ಬಂದಿದ್ರೆ… ಸಿನಿಮಾ ಬೋ ಸಂದಾಗಿರೋದು… ಸಿನ್ಮಾದಲ್ಲಿರೋ ಡೈಲಾಗು ಖಾಲೀ ಇರೂ ಜಾಗಗಳೆಲ್ಲಾ ತುಂಬಿರೋವು… -ರಾಜಾರಾಂ ತಲ್ಲೂರ್ ಮಧ್ಯ ಮಧ್ಯ ಬೀಪ್ ಸೌಂಡು ಗಳು...
ಇನ್ನೊಬ್ಬರ ಹೆಸರಲ್ಲಿ ಪ್ರಕಟವಾಗಿತ್ತು. .!
ಪ್ರಿಯ ಸ್ನೇಹಿತರೆ, ನಾನು ಮಂಡ್ಯ ಎಂಬ ದೊಡ್ಡ ಹಳ್ಳಿಯ ಹೆಣ್ಮಗಳು. .!! ಅಷ್ಟೇನು ಹೆಸರುವಾಸಿಯಲ್ಲದ, ತೋಚಿದ್ದನ್ನು ಗೀಚುವ ಹವ್ಯಾಸವಿರುವ, ನಿರೂಪಣೆಯೆಂಬ ಕಲೆಯನ್ನು ಅರ್ಜಿಸಿ ಪ್ರೀತಿಸುವ ..ನೋವು, ಅವಮಾನ, ಅಸಹಾಯಕತೆಯನ್ನೆ ಬೆನ್ನಿಗೆ ಕಟ್ಟಿಕೊಂಡ , ಆಡಿಕೊಂಡವರ ಮಧ್ಯೆ ಛಲದಿಂದ ಬದುಕಬೇಕೆಂದು ಹಪಹಪಿಸಿ ಬದುಕುತ್ತಿರುವವಳು. ನೋವು...
ನನಗೆ ಹುಕಿ ಬಂದಿದೆ ಪ್ರಶ್ನೆ ಕೇಳಿಯೇ ಬಿಡೋಣವೆಂದು..
ನೀತಾ ಎಸ್ ರಾವ್ ಓಡಿ ಹೋದ ಮಲ್ಯ, ನಿರಾಳವಾದ ಬ್ಯಾಂಕುಗಳು ಮಲ್ಯ ಅಂತೂ ತಪ್ಪಿಸಿಕೊಂಡು ಓಡಿದರು, ಈಗ ಹೊರದೇಶಗಳ ಹೆಣ್ಣುಗಳ ಜೊತೆ ಜಾಲಿ ಟ್ರಿಪ್ಪಿನಲ್ಲಿದ್ದರೂ ಆಶ್ಚರ್ಯವಿಲ್ಲ. ಹಾಗೇ ಅವರು ಹೋಗುವ ತನಕ ಕಾದಿದ್ದು ಆಮೇಲೆ "ಊರು ಕೊಳ್ಳೆ ಹೊಡೆದ ಮೇಲೆ ದಡ್ಡಿ ಬಾಗಿಲು ಹಾಕಲು ಪ್ರಯತ್ನಿಸಿದ ನಮ್ಮ ದೇಶದ so called ಬೃಹತ್...
ಒಂದು ಗೋಡೆಯಲ್ಲ, ಒಂದು ಮಹಡಿಯಲ್ಲ, ಇಡೀ ಗ್ಯಾಲರಿಯನ್ನೇ ಕೇಳುವೆವು..
ಹಮ್ ಮೆಹನತ್ ಕಶ್ ಜಗವಾಲೋಂಸೆ, ಜಬ್ ಅಪನಾ ಹಿಸ್ಸಾ ಮಾಂಗೆಗೆ, ಏಕ್ ಖೇತ ನಹೀ, ಏಕ್ ದೇಶ ನಹೀ ಹಮ್ ಸಾರಿ ದುನಿಯಾ ಮಾಂಗೆಂಗೆ... ನಾವು ಬೆವರನು ಸುರಿಸಿ ದುಡಿಯುವ ಜನ, ನಮ್ಮ ಬೆವರಿನ ಪಾಲನು ಕೇಳುವೆವು, ತುಂಡು ಭೂಮಿಯಲ್ಲ, ಒಂದು ದೇಶವಲ್ಲ, ಇಡೀ ಭೂಮಂಡಲವನೇ ಕೇಳುವೆವು... ಫೈಜ್ ಅಹ್ಮದ್ ಫೈಜ್ ನೆನಪಾಗಿ ಹೋದರು.....
ಮಗುವಿನಾಟಕ್ಕೆ ಈ ಸದ್ದುಗಳು ದಣಿದಿವೆ..
ಮಣ್ಣಿನಂಗಳದ ಮಗು ಸಂಗೀತ ರವಿರಾಜ್ ಅಲ್ಲೊಂದು ಕೇರಿ ಡೋಲು, ತಮಟೆ, ನಗಾರಿಗಳು ಸರಹದ್ದುಗಳ ಮೀರಿ ಗುಡಿಸಿ ಗುಡಿಸಿ ನುಣ್ಣಗಾದ ಮನೆಯಂಗಳದಿ ಇಹಪರದ ಇರುವಿಕೆಯಿಲ್ಲದ ಮಗುವಿನಾಟಕ್ಕೆ ಈ ಸದ್ದುಗಳು ದಣಿದಿವೆ. ಕಾಲ ಕಾಲವು ಕಳೆದು ಏನೊಂದು ಬದಲಾವಣೆಲ್ಲದ ಡೋಲಿನ ಲೋಕದ ಬದುಕು ಡೋಲಾಯಮಾನ ಅಲ್ಲವೇ ಅಲ್ಲ ಎಂಬ ಎದೆಯೊಳಗಿನ ನಂಬಿಕೆ...
ಇದು ಸರಳ ಮದುವೆಯ ತಾಣ
ನಾಗೇಂದ್ರ ಶಾ ದೃಶ್ಯ - 1 ಜೆ.ಪಿ.ನಗರದಲ್ಲಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನವಿದೆ. ಕುವೆಂಪುರವರ ಮಂತ್ರ ಮಾಂಗಲ್ಯದಂತೆ... ಸರಳ ಮದುವೆಗೆ ಹೆಸರಾಗಿದೆ. ನೀವು ಲಗ್ನ ಇಟ್ಟುಕೊಂಡು ಯಾವುದೇ ದಿನ ಬನ್ನಿ. ಎಷ್ಟೇ ಜೊತೆ ಮದುವೆ ಇರಲಿ... ದೇವಸ್ಥಾನದವರೆ ಜವಾಬ್ದಾರಿ ವಹಿಸಿಕೊಂಡು ಮಾಡಿಸುತ್ತಾರೆ. ಒಂಥರ ಸಾಮೂಹಿಕ ಮದುವೆ...
ಕಿರಗೂರಿನ ಗಯ್ಯಾಳಿಗಳ ನೆನಪಲ್ಲಿ, ನಾನು ಶಂಕರಪ್ಪ..
ಸಂತೋಷ್ ಅಂಗಡಿ ಸ್ನೇಹಿತರೆ ಈಗ್ಗೆ ಸುಮಾರು ಎರಡು ವರೆ ತಿಂಗಳ ಹಿಂದೆ ತುಮಕೂರಿನ ನಾಟಕ ಮನೆ ಪ್ರಯೋಜಕತ್ವದ ಕಿರಗೂರಿನ ಗಯ್ಯಾಳಿಗಳು ನಾಟಕಕ್ಕೆ ನನ್ನನ್ನು ನಟನಾಗಿ ಆಹ್ವಾನಿಸಲಾಗಿತ್ತು ...ಸೃಜನಶೀಲ ಬರಹಗಾರ ಚಿಂತಕ ಸಂಘಟಕರಾದ ಉಗಮ ಶ್ರೀನಿವಾಸ. ಇದರ ನಿರ್ದೇಶಕರು ..ನಾಟಕ ಸುಮಾರು ೨೫ ದಿನ ರಿಹರ್ಸಲ್ ಮಾಡಲಾಗಿತ್ತು ನಾಟಕದ...
ಗಲ್ಲಕಚ್ಚಿದ ಅರಿಷಿಣ ಕೆಂಪಾಗಿ ಬಿಡಲಿ ದಿನ ದಿನವು..
ಚಂದ್ರಕಾಂತ ಕುಸನೂರ `ಬೊಗಸೆ' ಓದುತ್ತಿರುವಾಗ Roman Jakobsons ಅವರ ಕೆಲವು ಸಾಲುಗಳು ನೆನಪಾದವು. “Poetry is the shaping of the autonomous word”ರ ಅವರು ಹೇಳುವ ಒಟ್ಟಾರೆ ಮಾತುಗಳು ಹೀಗಿವೆ. ‘’If the plastic arts involve the shaping of the autonomous material of visual representations,...
ಬೆಂಡ್ ಎತ್ತಿ ಬ್ರೇಕ್ ಹಾಕಲು ಬರುತ್ತಿದ್ದಾರೆ ಗಯ್ಯಾಳಿಗಳು
ಸಧ್ಯದಲ್ಲೇ..
ನೀವು ನೋಡ್ಲೇಬೇಕು ಈ ಪೂಜೆ ಸ್ಟೈಲ್
ಇಲ್ಲಿ ನೋಡಿ ಒಂದು ಪೂಜೆ ಸ್ಟೈಲ್ ವಿಡಿಯೋ ಓಪನ್ ಆಗದಿದ್ದಲ್ಲಿ ರಿಫ್ರೆಶ್ ಮಾಡಿ ಇಲ್ಲವೇ ಬೇರೆ ಬ್ರೌಸರ್ ಮೂಲಕ...
ಅಲ್ಯೂಮಿನಿಯಂ ಪಾತ್ರೆ ಎಂಬ ಅಪ್ಪಟ ಕಾವ್ಯ..
ಟಿ ಕೆ ದಯಾನಂದ್ ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದೆ. ಆನ್ ದಿ ವೇ ನಮ್ " ಮನ್ಸೋರೆ" ಮನೆಗೋಗಿ ಬೇಗ ಎಬ್ಬಿಸಿ ಕಾಟ ಕೊಟ್ಟು ಹೋಗಣ ಅಂತ ಮನ್ಸೋರೆ ಮನೆ ಮುಂದೆ ಗಾಡಿ ಪಾರ್ಕ್ ಮಾಡ್ತಿದ್ದೆ. ಅಲ್ಲಿ ತಳ್ಳೋಗಾಡೀಲಿ ಸೊಪ್ಪುತರಕಾರಿ ಮಾರೋ ಹೆಂಗಸೊಬ್ರು, ಸೊಪ್ಪಿಗೆ ಚಿಮುಕಿಸೋಕೆ ಅಂತ ಇಟ್ಕೊಂಡಿದ್ದ ಒಂದು ಪಾತ್ರೇಲಿ ನೀರು...
ಈಗ ರಾಜ್ಯದ ತುಂಬ ಅವನ ಶಾಸನವೇ ಕವಿತೆ..
ಪಿ ಬಿ ಪ್ರಸನ್ನ ಪ್ರಭುಸಮ್ಮಿತ ಓಲಗದಲ್ಲಿ ವಿರಾಜಮಾನ ರಾಜ ಬಗೆ ಬಗೆಯ ಬಿರುದು ಬಾವಲಿಗಳ ಸಹಿತ ಸಾಲುಗಟ್ಟಿದ್ದಾರೆ ಜನ ಹೂ ಹಣ್ಣು ಅಹವಾಲುಗಳ ಜೊತೆಗೆ ಅವನೋ ಅನಾ ಮತ್ತಾಗಿ ಅವರು ತಂದ ಅರೆಬಿರಿದ ಹೂಗಳ ಹಿಸುಕಿ ಇದು ಗಂಧ ಮಿಡಿ ಕಾಯಿ ದೋರುಗಾಯಿಗಳ ಹಿಂಡಿ ಇದೇ ರಸವೆನುವ ಮರುದಿನದಿಂದ ಅದೇ ಶಾಸನ ಸಂಗೀತ ಸೇವಾ ಅವಧಾರಯ ಎಂದಾಗ...
ವಸುಂಧರಾ ಭೂಪತಿಯವರ ‘ಜೀವಸಿರಿ’
ವಸುಂಧರಾ ಭೂಪತಿಯವರ 'ಜೀವಸಿರಿ'
ನನ್ನ ಡೈಲಾಗ್ ಗೋಸ್ಕರ ಕಳ್ಳತನ, ರಾಬರಿ ಎಲ್ಲಾ..!
ಟಿ ಎನ್ ಸೀತಾರಾಂ " ಆನ೦ದನ ಕನ್ನಡ ಪ್ರೇಮ ಬೆಳೆದೂ, ಬೆಳೆದೂ,ಬೆಳೆದು ಕಡೇಗೆ ಅಮೇರಿಕಾಗೆ ಹೊರಟು ನಿ೦ತಿದ್ದಾನೆ ಕಣಯ್ಯ..." ಇದು ಲ೦ಕೇಶ್ ಮೇಷ್ಟ್ರು ತಮ್ಮ ಬಿರುಕು ಎನ್ನುವ ನಾಟಕದಲ್ಲಿ ಅನೇಕ ದಶಕಗಳ ಹಿ೦ದೆ ಬರೆದ ಸ೦ಭಾಷಣೆ.. ಅದರಲ್ಲಿ ನಾನು ಬಸವರಾಜ ಎ೦ಬ ಮುಖ್ಯ ಪಾತ್ರ ವಹಿಸಿದ್ದೆ.... ಈ ಮಾತು ಮು೦ಚೆ ನನಗೆ ಇರಲಿಲ್ಲ.... ಬೇರೆ...
ನಮ್ಮ ಪದಗಳ ಬಗ್ಗೆ ಎಚ್ಚರದಿಂದಿರೋಣ, ಅವು ಕ್ರಿಯೆಗಳಾಗುತ್ತವೆ.. ನಮ್ಮ ವ್ಯಕ್ತಿತ್ವದ ಬಗ್ಗೆ ಎಚ್ಚರದಿಂದಿರೋಣ, ಅವು ನಾಡಿನ ಭವಿಷ್ಯವಾಗಿರುತ್ತದೆ..
ಕನ್ನಡ ನಾಡು ಕಂಡ ಮಹತ್ವದ ವಿದ್ವಾಂಸರಲ್ಲಿ ಪ್ರಮುಖರು ಡಾ ಪುರುಷೋತ್ತಮ ಬಿಳಿಮಲೆ. ಸದಾ ನೋಡುವ ಕಣ್ಣುಗಳನ್ನು, ಆಲೋಚಿಸುವ ಮನಸ್ಸನ್ನು ಜಾಗೃತವಾಗಿಟ್ಟ ಹಿರಿಮೆ ಅವರದ್ದು. ಪ್ರಸ್ತುತ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಪ್ರಮುಖರು. ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅವರನ್ನು ಘಟಿಕೋತ್ಸವ ಭಾಷಣ...
ಪಂಜು ಗಂಗೊಳ್ಳಿ speaking..
ಪಂಜು ಗಂಗೊಳ್ಳಿ ಕನ್ನಡ ಮಣ್ಣಿಗೆ ಮರಳಿದ್ದಾರೆ, ಈ ಹೊತ್ತಿನಲ್ಲಿ 'ಅವಧಿ' ಅವರ ಬಗ್ಗೆ ಆತ್ಮೀಯ ಸಾಲುಗಳನ್ನು ಬರೆಯಿತು. ಅದಕ್ಕೆ ಪಂಜು ಗಂಗೊಳ್ಳಿ ಪ್ರತಿಕ್ರಿಯಿಸಿದ್ದಾರೆ. ಪತ್ರಿಕೆಗಳು ಯಾವತ್ತೂ ಜನಪರ. ಹಾಗಾಗಿಯೇ ಇವು ಯಾವತ್ತೂ ಆಡಳಿತ ವ್ಯವಸ್ಥೆಯ `ವಿರೋಧಿ'ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಈ ವಿರೋಧ ಯಾವತ್ತೂ...
ಗೊತ್ತಿದ್ದರೆ ಉತ್ತರ ಸಿಗಲೇಬೇಕಿತ್ತು..
ಕೇಳದ ಕೂಗು ಅಶಾ ದೀಪ ಸಾಸರ್ ನಲ್ಲಿ ಕಪ್ ಇಡುವ ಮುನ್ನ ಕೇಳಿದ್ದು, ನಿರ್ಭಾವದ ಚಪ್ಪರಿಸುವ ಸದ್ದಷ್ಟೆ.. ತುಂಬು ಕಣ್ಗಳಲಿ ಚೂರು ಹೊಳಪು ತುಟಿಯಂಚನು ಮುದ್ದಿಸುವ ನಗು ಇಷ್ಟೇ ನಿರೀಕ್ಷೆಗಾಗಿ ಮನಸ್ಸು , ಅಡುಗೆಮನೆಯಿಂದಲೇ ಇಣುಕುತ್ತಿತ್ತು. ಸೆರಗಿನಿಂದ ಮುಖ ಒರೆಸಿ, ಒಳಕ್ಕೂ ಹೊರಕ್ಕೂ ತಿರುಗುತ್ತಿತ್ತು... ಪೇಪರ್ ನಲ್ಲಿ ಮುಖ...
ಪಾಠವನ್ನೇ ಆಟ ಮಾಡಿಬಿಟ್ರೆ ಎಷ್ಟು ಚೆನ್ನಾಗಿ ಇರುತ್ತೆ ಆಲ್ವಾ?
ಹೌದು, ಪಾಠವನ್ನೇ ಆಟ ಮಾಡಿಬಿಟ್ರೆ ಎಷ್ಟು ಚೆನ್ನಾಗಿ ಇರುತ್ತೆ ಆಲ್ವಾ ...? ಮಕ್ಕಳು ಅಡಾಡ್ತಾ ತಮಗೆ ಬೇಕಾಗಿದ್ದನ್ನ ಒಳಗೆ ಸೇರಿಸ್ಕೊಳ್ತಾ ಹೋದರೆ ಅದಕ್ಕಿಂತ ಖುಷಿ ಬೇಕೇ? ಅಂತಹ ಪ್ರಯೋಗ ಒಂದು ಪುಟ್ಟದಾಗಿ ನಡೀತಾ ಇದೆ. ಚಾಮರಾಜ ನಗರದ ಒಂದು ಸರ್ಕಾರಿ ಶಾಲೆಯಲ್ಲಿ. ಪ್ರಶಾಂತ್ ವಿ ಎಸ್ ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಇಂತಹ ವಾಹ್!...
‘ನಾನು ನಿಮ್ಮೊಳಗೊಬ್ಬ’ ಎಂದು ಬರೆಯುವ ರೀತಿ
'ಚೌಕಟ್ಟಿನಾಚೆ'ಯ ಹುಡುಕಾಟಗಳು ಎಂ ಎ ಶ್ರೀರಂಗ ಇಂದು ಪತ್ರಿಕೆಗಳಲ್ಲಿ ಅಂಕಣ ಬರಹಗಳು ಒಂದು ಅವಿಭಾಜ್ಯ ಅಂಗಗಳಾಗಿವೆ. ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಸರ್ಕಾರಿ ಒಡೆತನದ 'ದೂರದರ್ಶನ' ಮಾತ್ರ ಇದ್ದಾಗ ಅದರಲ್ಲಿ ದಿನಕ್ಕೆ ಒಂದೆರೆಡು ಬಾರಿ ಬರುತ್ತಿದ್ದ ಸುದ್ದಿಗಳಿಗೂ 'ಆಕಾಶವಾಣಿ'ಯ ಸುದ್ದಿಗಳಿಗೂ ಇದ್ದ ಒಂದೇ...
