ಬೆಳಕಲ್ಲಿ ಕೆನ್ನೆಯ ರಂಗಾಗಿ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.  

ಮೈಸೂರಿನಿಂದ ನಾಗೇಶ ಮೈಸೂರು ಬರೆದರು – ಪಿಸುಗುಟ್ಟಿದ ಕತ್ತಲ ಮಾತು..

ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ  

ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ.. ಕವಿತೆ ಬರೆದರು

ಕಿರಣ್ ಕಂಗೊಕರ್ ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ.. ಬರೆದರು 

ಈಗ ವಿನಿ ನಾಯಕ್ ತಮ್ಮ ದನಿ ಸೇರಿಸಿದ್ದಾರೆ 

ಓದಿ 

 

bite chin

ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ

ನೀವೂ ಕವಿತೆ ಮುಂದುವರೆಸಿ  

ಮುಸುಕು ಅನಿವಾರ್ಯವಾಗಿಬಿಟ್ಟಿತು

ವಿನಿ ನಾಯಕ್ 

ಇದು ಮುಖವಾಡವಲ್ಲ ಗೆಳೆಯ;
ಬದುಕು ಕಲಿಸಿದ ಪಾಠಗಳು
ನೀನು ಬರುವದಕ್ಕೂ ಮುಂಚೆ
ಕಳೆದು ಹೋದ ಕಾಲ ಕಠಿಣವಾಗಿತ್ತು.
ನಾನೂ ಕಠಿಣವಾಗಿದ್ದೇನೆ ಈಗ.

she stringಕಪ್ಪು ಬಣ್ಣದ ಹಳೆಯ ದಿನಗಳು
ನನ್ನೊಳಗೊಂದು ಕಪ್ಪು
ಕಂದಕವನ್ನೇ ಕೊರೆದುಬಿಟ್ಟವು.
ರಹಸ್ಯಗಳಿದ್ದವು ಸುಳ್ಳುಗಳಿದ್ದವು
ದೌರ್ಜನ್ಯ ಪಶ್ಚಾತಾಪಗಳಿದ್ದವು
ನನ್ನನ್ನು ವಕ್ರಗೊಳಿಸಿದವು.
ಮುಸುಕು ಅನಿವಾರ್ಯವಾಗಿಬಿಟ್ಟಿತು
ಭಯ ಹುಟ್ಟಿಕೊಂಡಿತು.

ಈಗಲೂ ಭಯ, ಗೆಳೆಯ
ನಿನ್ನೆದೆಗೆ ಒರಗಿ ಮಲಗಿದಾಗ
ನಿನ್ನ ಬಿಸಿ ಉಸಿರು ನನ್ನ ತಾಕಿದಾಗ
ನಿನ್ನ ಪ್ರೀತಿಯ ಧಗೆ ನನ್ನಾವರಿಸಿದಾಗ
ಎಲ್ಲ ಕಳೆದು ಹೋದರೆ ಎಂಬ ಭಯ
ನೀನೊಂದು ಚಟವಾಗಿಬಿಟ್ಟರೆ
ನಿರೀಕ್ಷೆಗಳೆಲ್ಲ ಹುಸಿಯಾಗಿಬಿಟ್ಟರೆ
ಮಾಯದ ಮನದ ಗಾಯವಾಗಿಬಿಟ್ಟರೆ…

ಮಂದ ಜ್ವಾಲೆಯಲ್ಲಿ
ಮಂದ ಗತಿಯಲ್ಲಿ ಬೇಯಿಸಿದ
ಅಡುಗೆಯ ಪರಿಮಳ
ಅತ್ಯಧ್ಬುತವಂತೆ.
ನಾವೂ ನಿಧಾನವಾಗೋಣ.
ಕಲ್ಪನೆಗಳಲ್ಲಿ ಒಮ್ಮೆಲೆ ಮುಳುಗಿ
ಉಸಿರು ಕಟ್ಟದಿರಲಿ.
ನಮ್ಮ ನಡತೆ ನಮ್ಮ ಬುದ್ಧಿಗಳೆಲ್ಲ
ನಿಧಾನಕ್ಕೆ ಬೆರೆಯಲಿ.

ಸದ್ಯಕ್ಕೆ
ನನ್ನೊಂದಿಗೇ ನಾನು ಸುಖಿ.
ನನಗೇ ನಾನೇ ಆಪ್ತ ಗೆಳತಿ.
ಕತ್ತಲಲ್ಲಿ ಸ್ವಚ್ಚಂದವಾಗಿ
ಹರಡಿದ ನ್ಯೂನ್ಯತೆಗಳೆಲ್ಲ
ಬೆಳಕಲ್ಲಿ ಕೆನ್ನೆಯ ರಂಗಾಗಿ
ಕಾಡುತಿವೆ.

‍ಲೇಖಕರು Admin

May 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. S.p.vijaya Lakshmi

    ಎಸ್ .ಪಿ. ವಿಜಯಲಕ್ಶ್ಮಿ
    ಸ್ವೇಚ್ಛೆ ಕಟ್ಟಿಕೊಟ್ಟ ದುರಂತಗಳು ಮನಸನ್ನು ಬಾಗಿಸಿ, ಹದಗೊಳಿಸಿಟ್ಟು, ಇದೀಗ ಸಂಯಮದ ಚೌಕಟ್ಟಿನಲ್ಲಿ ಕಾಮನೆಯನ್ನು ಶುದ್ಧವಾಗಿಸಿಕೊಳ್ಳುವ ಪರಿ ಚೆನ್ನಾಗಿದೆ.

    ಪ್ರತಿಕ್ರಿಯೆ
  2. s.p.vijayalakshmi

    ತಪ್ಪು ಹೆಜ್ಜೆಗಳು ನೆರಳಾಗಿ ಕಾಡಿದ , ಕಾಡುವ ಹಿನ್ನೆಲೆಯಲ್ಲಿ , ಮುಂದಿನ ಬದುಕಿನ ಹೆಜ್ಜೆಗಳು ಎಚ್ಚರಿಕೆಯದಾಗಿರಬೆಕು ಎನ್ನುವ ಸಂಯಮ ಬಹಳ ಸುಂದರವಾಗಿ ಮೂಡಿಬಂದಿದೆ ……..S.P.Vijaya Lakshmi

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: