ದೇವಕನ್ನಿಕೆಯೆ ನಿಜ, ಈ ಕಿರುಹರೆಯದ ಹುಡುಗಿ..

sangam translation team

`ನಿಚ್ಚಂ ಪೊಸತು’ ಎಂಬ ಹೆಸರಿನಲ್ಲಿ `ಕುವೆಂಪು ಭಾಷಾ ಭಾರತಿ’

ತಮಿಳಿನ ಆಯ್ದ ಸಂಗಂ ಕವಿತೆಗಳ ಅನುವಾದವನ್ನು ಪ್ರಕಟಿಸಿದೆ.

ಇದರಲ್ಲಿ ಭಾಗಿಯಾಗಿದ್ದ ಎಂ ಆರ್ ಕಮಲಾ ಹಾಗೂ ಜಯಲಲಿತಾ ಅವರ ಅನುವಾದದ ಒಂದು ಝಲಕ್ ಇಲ್ಲಿದೆ.

sangam poetry

ಕುರಿಂಜಿ
(ಸಂಗಂ ಕವಿತೆಗಳ ಅನುವಾದ ತಮಿಳಿನಿಂದ: ಎಂ.ಆರ್. ಕಮಲ ಮತ್ತು ಡಾ.ಜಯಲಲಿತಾ)

ಮಲೆ ತಪ್ಪಲ ಕೊರವನ ಮುದ್ದಿನ ಮಗಳು
ಬೆಟ್ಟದಲ್ಲಾಡುವ ದೇವ ಕನ್ನಿಕೆ ಇವಳು
ಚಕಿತಗೊಳಿಸುವ ಚೆಲುವಿನವಳು, ಕೆಂದುಟಿಯವಳು
ಎದೆಯ ಮೇಲೊಂದು ಹಳದಿ ಕಲೆಯವಳು

kurunjigirlಮಲೆತಪ್ಪಲ ಕೊರವನ ಮುದ್ದಿನ ಮಗಳು
ದುಂಬಿ ಮುತ್ತುವ ಮುಡಿಯವಳು, ಎಲೆ ಉಡುಗೆ ಉಟ್ಟವಳು
ಬಳೆಯ ತೊಟ್ಟವಳು, ಮೊಳೆ ಹಲ್ಲಿನವಳು
ದೇವಕನ್ನಿಕೆಯೆ ನಿಜ, ಈ ಕಿರುಹರೆಯದ ಹುಡುಗಿ

ಮಲೆತಪ್ಪಲ ಕೊರವ ದೇವರಿಗೆ ನಮಿಸಿ
ಬೇಡಿ ಪಡೆದ ಮಗಳು, ಹೊಂಬಳೆ ತೊಟ್ಟಿಹಳು
ಕೆಂಗೆರೆಗಳ ನಿಡುಗಣ್ಣು ಕಂಬನಿ ಸುರಿಸುವುದು
ನೀನು ಕಡು ದೂರವೆಂದು

ಮಲೆತಪ್ಪಲ ಕೊರವನ ಮುದ್ದಿನ ಮಗಳು
ಬಯಲಲಿ ಬಿರಿದ ಹೊನ್ನೆ ಹೂ ಕೊಯ್ದು
ಬೆಟ್ಟದ ಕುಲದೇವತೆಯ ಪೂಜಿಸುವಳು
ಜೇನ ಎಡೆ ನೀಡಿ ತೊಯ್ದ ನರುಗಂಪ ಕರದವಳು

ಮಲೆ ತಪ್ಪಲ ಕೊರವ ಬೇಡಿದರೆ ಮುಗಿಲ ಮೋಡ
ಹನಿದು, ಸುರಿದು ಭೋರ್ಗರೆವುದು ಮಳೆ
ನಿಡುಕಣಿವೆಯಿಂದ ತೋಟಕ್ಕೆ ಹರಿವ ನಿಮ್ಮೂರ ನೀರ್ಬೀಳ
ಕಂಡರೆ ಸಾಕು, ಇವಳು ಕಂಬನಿ ಹೊನಲು

ಮಲೆತಪ್ಪಲ ಕೊರವ ಕಡಿದು ಚಂದನವ ಸುಟ್ಟರೆ
ಚವುತಿ ಹೂಗಂಪಿನೊಡನೆ ಬೆರೆಯುವುದು ಅದರ ಗಂಧ
ದುಂಬಿಗಳು ಮುತ್ತುವ ನೊಸಲ ನಾಯಕಿಯೇ
ಮಲೆಯೂರಿಗೆ ಕರೆದೊಯ್ಯುವರು ಮೇಲೇಳು

ಮಲೆತಪ್ಪಲ ಕೊರವನ ಮುದ್ದಿನ ಮಗಳನ್ನು
ಮಿದು ತೋಳ್ಗಳ ಕನ್ನೆಯನ್ನು ಕಾಣಲಾಗದು ಇನ್ನು
ಹಸಿರು ಗಿಳಿಗಳ ಅವಳು ಇನ್ನು ಓಡಿಸಲು ಬಾರಳು
ಹೊಲದಿ ಬಿತ್ತಿದ ಬೀಜ ತೆನೆಯಾಗಿದೆ

(Kurinji: This thinai speculates on the union of lovers. The landscape a mountainous region with a special flower named kurinji that blossoms once in twelve years. Monkeys, elephants and bull are the animals of the location and are filled with bamboos, jack fruit trees and ‘venkai’ (Honge mara) trees. The occupants are tribal people who hunt and gather honey. The place is cool with water in abundance and represents midnight of a day-kalimuththu nallatambi)

‍ಲೇಖಕರು Admin

May 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: