ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಸಾಯಿನಾಥ್ ಹೊಸ ಕೃತಿ ಕನ್ನಡದಲ್ಲಿ..

ಹೆದ್ದಾರಿಗಳಿಗಿಂತ ಕಾಲ್ದಾರಿ.. ಪಿ ಸಾಯಿನಾಥ್ ಹಾಗೂ ಜಿ ಎನ್ ಮೋಹನ್ 'ಹಾಯ್' ಅಂದು ದಶಕಗಳು ಉರುಳಿವೆ. ಈ ಗೆಳೆತನದ ಅವಧಿಯಲ್ಲಿ ಇಬ್ಬರೂ ಹಲವು ಕೆರೆಯ ನೀರು ಕುಡಿದಿದ್ದಾರೆ. ಇಬ್ಬರಿಗೂ ಅರಿವಾಗಿರುವುದು ಮಾಧ್ಯಮ ಎನ್ನುವುದು ನಾಲ್ಕನೆಯ ಸ್ಥಂಭ ಹೌದು ಆದರೆ ಸಿಕ್ಕಾಪಟ್ಟೆ ಲಾಭ ಮಾಡಲು ಹೊರಟಿರುವ ಏಕೈಕ ಸ್ಥಂಭವೂ ಹೌದು. ಹಾಗಾಗಿಯೇ...

read more
ನನಗೆ ಬೇಕಾಗಿದ್ದು ಎರಡು ಅಡಿ ಜಾಗ, ಒಂದು ಚಂಬು ನೀರು ಮಾತ್ರ..

ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 15 ಬಂಕಾಸುರನ ದಮನ ಬೆಳಗಿನ ಸ್ನಾನ ವ್ಯಾಯಾಮ ಮುಗಿಸಿ, ಹೋಟೆಲ್ ಗರುಡದಲ್ಲಿ ಉಪಹಾರ ಮುಗಿಸಿ, ಹೆದ್ದಾರಿಯಿಂದ ಎಡಕ್ಕೆ ಶಿಗ್ಗಾಂವ್ ಕಡೆಗೆ ತಿರುಗಿ ಅವರಿವರನ್ನು ಕೇಳಿಕೊಂಡು “ಶ್ರೀಮತಿ ಫಕೀರಮ್ಮ ಮಂತ್ರೋದಿ ಬಾಲಕಿಯರ ಪ್ರೌಢಶಾಲೆ”ಯನ್ನು ತಲುಪಿದೆ. ಶಾಲೆಯನ್ನು ತಲುಪುವಷ್ಟರಲ್ಲಿ ಸಾಕುಸಾಕಾಗಿ...

read more
ಸಿಕ್ಕಿದ ಆ ಮೂರು ಸೇರು ಅಕ್ಕಿ..

ಮಂಜುನಾಥ್ ಕಾಮತ್ ಮೂವತ್ತೈದು ವರುಷದ ಹಿಂದೆ ತಂದೆ ವ್ಯಾಪಾರ ಆರಂಭಿಸಿದ್ದು ಹಲಸಿನ ಚಿಪ್ಸು ತಯಾರಿ ಮತ್ತು ಮಾರಾಟದಿಂದ. ನಾಲ್ಕೈದು ಹಲಸುಗಳ ದೊಡ್ಡ ಚೀಲವನ್ನು ಒಬ್ಬರೇ ತಲೆಯ ಮೇಲೆ ಹೊತ್ತುಕೊಂಡು, ಮನೆಗೆ ತಂದು ಚಿಪ್ಸು ಮಾಡಿ ಸಂಜೆಯೊಳಗೆ ನಿಟ್ಟೆಯಿಂದ ಕಾರ್ಕಳಕ್ಕೆ ನಡೆದೇ ಹೋಗಿ ಹಣ ಸಂಪಾದನೆ ಆರಂಭಿಸಿದ್ದಂತೆ. ಆ ನಂತ್ರ ಹಲಸು...

read more
Scripted ಅಂತ ತಮಗೆ ಯಾಕೆ ಅನಿಸಿತು ಅರ್ಥವಾಗಲಿಲ್ಲ..

ರಾಜಾರಾಂ ತಲ್ಲೂರು ಅವರು ತಮ್ಮ ಅಂಕಣ 'ನುಣ್ಣನ್ನ ಬೆಟ್ಟ'ದಲ್ಲಿ ಬರೆದ ಲೇಖನಕ್ಕೆ ತೀವ್ರ ಪ್ರತಿಕ್ರಿಯೆ ಬಂದಿವೆ. ಅರ್ನಬ್ ನಡೆಸಿದ  .ಸಂದರ್ಶನದ ಬಗ್ಗೆ ಓದುಗರ ಕಾಮೆಂಟ್ ಗಳು ಇಲ್ಲಿವೆ    ನಿಜ. ನಿನ್ನೆಯ ಮೋದೀಜೀ ಸಂದರ್ಶನ ಬಹು ಸುರಕ್ಷಿತ ಸಿದ್ಧತೆಯಲ್ಲಿ ನಡೆದದ್ದು ಎಂತಹವರಿಗಾದರೂ ಗೊತ್ತಾಗತಕ್ಕಂತದೇ. ಮೊದಲೇ ಪ್ರಶ್ನೆ ತಿಳಿಸಿ...

read more
ಆ ಪತ್ರವನ್ನು ಕಪ್ಪೆಗೆ ಹಸ್ತಾಂತರಿಸಿದ..

ದೂರದ ಅಂಗೋಲಾದಿಂದ  ಪ್ರಸಾದ್ ಕೆ  ರಿಪಬ್ಲಿಕ್ ಆಫ್ ಅಂಗೋಲಾ ದೇಶದ, ಅಂಬುಡು ಜನಾಂಗದ, ಬಾಕಾ ಬುಡಕಟ್ಟಿನ ಒಂದು ಜಾನಪದ ಕಥೆಯೆಂದು ಹೇಳಲಾಗುವ ಪುಟ್ಟ ಕಥೆಯೊಂದನ್ನು ಇತ್ತೀಚಿಗೆ ಓದಿದೆ. ಓದಿ, ಖುಷಿಪಟ್ಟು ಅನುವಾದಿಸಿ, ಸಕಾಲಿಕವೆಂದು ತಿಳಿದು  ನಿಮ್ಮ ಮುಂದಿರಿಸಿದ್ದೇನೆ. ಒಂದಾನೊಂದು ಕಾಲದಲ್ಲಿ ಕಿಮಾನ (ಕಿಮನೌಝ್) ಎಂಬ...

read more
ಭಾಸ್ಕರ ಮಯ್ಯರ ಪುಸ್ತಕಗಳು

ಕುಂದಾಪುರದ ಹಿರಿಯ ಲೇಖರಾದ ಪ್ರೊ. ಭಾಸ್ಕರ ಮಯ್ಯ ಅವರ ನಾಲ್ಕು ಪುಸ್ತಕಗಳು ಒಮ್ಮೆಲೆ ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಕನ್ನಡ, ಇಂಗ್ಲಿಷ್, ಪಾಲಿ, ಸಂಸ್ಕೃತ, ಹಿಂದಿ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ ಮಯ್ಯ ಅವರು ಈ ಎಲ್ಲಾ ವಿಷಯದಲ್ಲಿ ಎಂ ಎ ಯನ್ನೂ ಮಾಡಿದ್ದಾರೆ. ಸದಾ ಓದಿನೊಂದಿಗೆ ನಡೆವ ಮಯ್ಯ ಅವರು ಉಳಿದವರ ಓದಿಗೂ...

read more
ಅರ್ನವ್ ಗೋಸ್ವಾಮಿ ಎಂಬ ಫುಟ್ ಲಾಯಿರಿ..

ಫುಟ್ ಲಾಯಿರಿಯೊಬ್ಬರ “ಕ್ರಾಸು” ಮತ್ತು “ಚೀಫು” ರಾಜಾರಾಂ ತಲ್ಲೂರು ಸೋಮವಾರ ಟೈಮ್ಸ್ ನೌ ಚಾನಲ್ಲಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಅರ್ನವ್ ಗೋಸ್ವಾಮಿ ನಡೆಸಿದ ಸಂದರ್ಶನ ಪ್ರಸಾರವಾಯಿತು. ಫ್ರಾಂಕ್ಲೀ ಸ್ಪೀಕಿಂಗ್, ಈ ಸಂದರ್ಶನವನ್ನು ನೋಡಿದಾಗ ಬೇಡಬೇಡವೆಂದರೂ ಎರಡು ವರ್ಷಗಳ ಹಿಂದೆ ನಡೆದ ಇನ್ನೊಂದು ಸಂದರ್ಶನ...

read more
ನಾನು ನಿದ್ದೆಯಲ್ಲಿ ಇರುವವನಂತೆ ನಟಿಸಿದೆ

ಚಂದ್ರಶೇಖರ ಆಲೂರು  ಈಚಿನ ಬಸ್ ಪ್ರಯಾಣದಲ್ಲಿ ಆಲಿಸಿದ್ದು . ಮಧ್ಯ ವಯಸ್ಕ ಮಹಿಳೆಯೊಬ್ಬರು ತುಂಬಾ ಆತಂಕದಲ್ಲಿ ಮೊಬೈಲ್ ನಲ್ಲಿ ಮಾತಾಡುತ್ತಲೇ ಇದ್ದರು ಕೆಲವೊಮ್ಮೆ ಗದ್ಗದಿತರಾಗುತ್ತಿದ್ದರು. ಬಹುಶಃ ಕುಟುಂಬ ಸದಸ್ಯರು, ಆಪ್ತೆಷ್ಟರು.. ಹೀಗೆ ಹಲವರೊಂದಿಗೆ. ಕೊನೆಯಲ್ಲಿ ಒಬ್ಬರೊಂದಿಗೆ ಮಾತನಾಡುವಾಗ ಅವರ ಕಣ್ಣುಗಳು ಹನಿಗೂಡಿದವು. ಆದರೂ...

read more
ಆದ್ರೆ ಮಳೆಗೆ ಆದವನೇ ಗಂಡ..

ನೆಂಪೆ ದೇವರಾಜ್, ತೀರ್ಥಹಳ್ಳಿ ಇವತ್ತು ಆರಿದ್ರಾ ಮಳೆ ಸ್ವಲ್ಪ ಮಟ್ಟಿನ ತನ್ನ ಭೀಭತ್ಸತೆ ತೋರಿಸಿದಂತೆ ಕಾಣುತ್ತಿದೆ. ಕುಂಟುತ್ತಿದ್ದ ಹಳ್ಳಗಳು ಧುಮ್ಮಿಕ್ಕುವ ಹಂತದಲ್ಲಿವೆ.. ಬೆಳಿಗ್ಗೆ ಬಾಗಿಲು ತೆಗೆದು ನೋಡಿದಾಗ ಮನೆ ಎದುರಿನ ಬೆಳ್ಳಾಲೆ ಮರದ ಮೇಲೆ ಕುಳಿತು ಜಗಳಾಡುತ್ತಾ, ಮುದ್ದಿಸಿ ಕೊಳ್ಳುತ್ತಾ ಚಿಪಿಲಿಗುಟ್ಟುತ್ತಿದ್ದ ಹಕ್ಕಿಗಳ...

read more
ನಾ ಬಿಟ್ಟ ಉಸಿರ ನಾನೇ ಕುಡಿಯುತ…

----------------------------------------- ಬಿದಲೋಟಿ ರಂಗನಾಥ್ ----------------------------------------- ಎತ್ತಿ ಬಿಸಾಡಿದ್ದಾರೆ ಈ ಕತ್ತಲೆ ಕೋಣೆಯೊಳಕೆ ಮೌಢ್ಯಕ್ಕೆ ಬಿದ್ದ ಕೈಗಳು ಕತ್ತಲೆಂದರೆ ಕತ್ತಲು ಅವರ ಕಣ್ಣ ಕತ್ತಲು ಸೇರಿ ಕಣ್ಣೇ ಕಾಣುತ್ತಿಲ್ಲ ನನಗೆ ಕಿಟಕಿಯಿಲ್ಲ ಕದವಿಕ್ಕಿ ಬೀಗ ಜಡಿದಿದ್ದಾರೆ ಕೂಗುತ್ತಲೆ...

read more
“ರೀ ನಿಮ್ ಹುಡ್ಗಿ ಸೂಪರ್ರಾಗಿ ಇದಾರ್ರೀ. ಒಳ್ಳೆ ಸಿನಿಮಾ ಹೀರೋಯಿನ್ ತರ..”

ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 14 ತಿಮ್ಮಾಪುರದ ತರಲೆಗಳು ಒಂದು ಕೆಟ್ಟ ಕನಸಿನಿಂದ ಸೂರ್ಯನೇಳುವ ಮುಂಚೆಯೇ ಎಚ್ಚರವಾಯಿತು. ವ್ಯಾಯಾಮ ಮತ್ತು ಯೋಗ ಮಾಡಿ ಮನಸ್ಸನ್ನು ಮತ್ತೆ ಗಟ್ಟಿಗೊಳಿಸಿದೆ. ಬೆಳಗಿನ ಕಾರ್ಯಕ್ರಮ ಮುಗಿದು, ತಿಂಡಿ ತಿಂದು ಆವರಣದಲ್ಲಿ ಬಿದ್ದಿದ್ದ ಒಂದಷ್ಟು ಪ್ಲಾಸ್ಟಿಕ್ ಕಸ ಎತ್ತಿ ಕಸದ ಬುಟ್ಟಿಗೆ...

read more
ಅನಾಥವಾದ ಸೈಕಲ್..

ವಿಠಲ ಭಂಡಾರಿ  ಬಂಗಾರೇಶ್ವರ ಗೌಡರು ಎಂದ ತಕ್ಷಣ ನೆನಪಾಗೋದು ಅವರ ಬಳಿ ಇರುವ ಸೈಕಲ್. ಬಿಕ್ಕನಹಳ್ಳಿಯಿಂದ ಸುಮಾರು 10 ಕಿಮಿ ದೂರದಲ್ಲಿರುವ ಶಿರಸಿಗೆ ಅವರು ಸೈಕಲ್ ಹೊಡೆದುಕೊಂಡು ಬರುತ್ತಿದ್ದರು. ಅತಿಕ್ರಮಣ ಭೂಮಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರನ್ನು ಸಂಘಟಿಸಲು ಹಳ್ಳಿ ಹಳ್ಳಿ ತಿರುಗಲೂ ಇದೇ ಸೈಕಲ್. ಎಲ್ಲಾ ಕೆಲಸ ಮುಗಿಸಿ ಇದೇ...

read more
ಕಲ್ಲುಗಳು ಬೀಳುತ್ತಲೇ ಇದ್ದವು. ನಾವು ಓಡುತ್ತಲೇ ಇದ್ದೆವು. ಎಲ್ಲಿ ಎಂಬುದರ ಅರಿವಿಲ್ಲ. ಮುಂದೆ ಅಲ್ಲೆಲ್ಲೋ ಅಡಗಿದೆವು ಮತ್ತೆ ಓಡುತ್ತಿದ್ದೆವು.

ಸಾವು ಬದುಕಿನ ನಡುವಿನ ಅನುಭವದ ಆ ದಿನ ಡಾ. ರಾಜ್ ನಿಧನದ ಕವರೇಜ್ ನ ಆ ರೋಚಕ ಕ್ಷಣ ವೃತ್ತಿ ಬದುಕಿನಲ್ಲಿ ಕವರೇಜ್ ಮಾಡಿದ ರೋಚಕ, ಭಾವುಕ ಮತ್ತು ಚಾಲೆಂಜಿಕ್ ಕ್ಷಣಗಳನ್ನು ನೆನಪಿಸುವ ಘಟನೆಗಳು ಯಾವುವು ಅಂದ್ರೆ ತಕ್ಷಣ ನೆನಪಿಗೆ ಬರೋದು ಆ ದಿನಗಳು. ನಿಜ ಡಾ. ರಾಜ್ ಕುಮಾರ್ ನರಂಹಂತಕ ವೀರಪ್ಪನ್ ಕಪಿಮುಷ್ಟಿಯಿಂದ ಹೊರಬಂದು ಮೊದಲ...

read more
ಇದೇನು ಅಸಾಧಾರಣ ಸಿನಿಮಾ ಅಲ್ಲ..

ಜಾತಿ ವೈಷಮ್ಯದಲ್ಲಿ ಕಮರುವ ಹರೆಯದ ಪ್ರೇಮ  ರಾಜೀವ ನಾರಾಯಣ ನಾಯಕ ಸಮಾಜವನ್ನು ವಿಭಜಿಸುವ ಭಾರತೀಯ ವರ್ಣವ್ಯವಸ್ಥೆಯು ಅದೆಷ್ಟು ಪ್ರೇಮಿಗಳ ಆಪೋಶನ ತೆಗೆದುಕೊಂಡಿದೆಯೋ! ಗ್ರಾಮ ಭಾರತದಲ್ಲಿ ಇನ್ನೂ ಉಳಿದುಕೊಂಡಿರುವ ಜಾತಿ ವ್ಯವಸ್ಥೆಗೆ ನಲಗುವ ಹರಯದ ಪ್ರೇಮದ ಕತೆಯನ್ನು ಹಿನ್ನಲೆಯಾಗಿಟ್ಟುಕೊಂಡ ಇತ್ತೀಚಿನ ಮರಾಠಿ ಚಿತ್ರವೊಂದು ಇಡೀ...

read more
ಒಂದು ಚಪ್ಪಲಿ ಟಾಸ್ಕು ! 

ಫ್ಲೋರಿಡಾದಿಂದ ಪ್ರದೀಪ್ ಹೆಗ್ಡೆ  ಚಪ್ಪಲಿ ಬಗೆಗೆ ಓದಿದಾಗ ಹಳೆಯಘಟನೆಯೊಂದು ನೆನಪಾಗುತ್ತಿದೆ, ನಿಮ್ಮೊಂದಿಗೆ ಹಂಚಿಕೊಳ್ಳುವೆ. ನಾನಾಗ ೫ ನೇ ತರಗತಿ ನನ್ನ ಪಕ್ಕದ ಮನೆ ಸ್ನೇಹಿತ ಮಧುಕರ ೩ ನೇ ತರಗತಿ.. ನಮ್ಮ ದಿನಚರಿಯ ಬಹುತೇಕ ಬಾಗ - ಆಟ - ಸುತ್ತಾಟಗಳು ಒಟ್ಟಿಗೆ ಜರುಗುತ್ತಿದ್ದವು ಮೊದಲೆರಡು ವರ್ಷ ಮನೆ ಹತ್ತಿರ ವಿದ್ದ ಶಾಲೆಗೆ...

read more
ಈ ರಂಗಪ್ರಯೋಗಕ್ಕೆ ಅಂಕ ಬೀಳುವುದಿಲ್ಲ..

ರುಕ್ಮಿಣಿ ಎನ್ ಆ ದಿನ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದ. ಸಾಮಾಜಿಕ ಜಾಲತಾಣಗಳ ತುಂಬ ಅವನದೇ ಸುದ್ದಿ ಮತ್ತು ಆತ ಬರೆದಿಟ್ಟಿದ್ದ (ಕನ್ನಡದಲ್ಲಿ ಅನುವಾದಿತ) ಡೆತ್ ನೋಟ್ ಕೂಡ ಹರಿದಾಡುತ್ತಿತ್ತು. ರೋಹಿತ್ ವೇಮುಲ? ಯಾರೀತ? ಯಾತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ? ಆ ಡೆತ್ ನೋಟ್'ನಲ್ಲಿ ಇರುವುದಾದರೂ ಏನು? ಎಂಬಿಷ್ಟೇ...

read more
ರೊಕ್ಕ ಅವರ್ ಜೇಬಿಗೆ ಇಳಿಸಿದ್ರಾ ಅವರ್ ಹೆಂಡ್ತಿ ಮಕ್ಕಳನ್ನಾ ಕೂಡ ಬರ್ಕೊಡ್ತಾರಾ..

ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 13 ಗಾಯತ್ರಿ ಮಠದಂಗಳದಲ್ಲಿ ಬೆಳಗ್ಗೆ ಎದ್ದಾಗ ಗಾಯತ್ರಿ ಮಾತೆಗೆ ಮಹಾ ಮಂಗಳಾರತಿ ಮಾಡುತ್ತಿದ್ದುದು ಮಂತ್ರಪಠಣದಿಂದ ಗೊತ್ತಾಯಿತು. ಬೆಳಗಿನ ಉಪಹಾರದ ನಂತರ ನನಗೆ ಏನು ಕೆಲಸವಿಲ್ಲದಿದ್ದರಿಂದ ಮಠವನ್ನು ಒಂದು ಸುತ್ತು ಹೊಡೆದು ಬಂದೆ. ವಿಸ್ತಾರವಾದ ವಾಹನ ನಿಲ್ದಾಣ, ಪಾದರಕ್ಷೆ ಬಿಡಲು ಪ್ರತ್ಯೇಕ...

read more
ಅವಳಿಗೆ ಅವಳೇ ಅಮ್ಮ..

ವಿನಿ ನಾಯಕ್  ಗೊಂಬೆಯಂತಹ ಕಂದಮ್ಮ. ಹುಟ್ಟಿ ಎರಡೇ ವರ್ಷಗಳಾಗಿದೆಯಂತೆ ಅಪ್ಪ ಎಂದರೇನು ಅಮ್ಮ ಎಂದರೇನು ಯಾವುದೂ ಗೊತ್ತಿಲ್ಲ ಹಸುಳೆಗೆ ಮಾಸಿದ ಬಟ್ಟೆ ಎಣ್ಣೆ ಕಾಣದ ಕೂದಲು ಉಗುರುಗಳ ತುಂಬ ಮಣ್ಣು. ಯಾರೋ ಬಂದು ಸ್ನಾನ,ಊಟಗಳನ್ನೆಲ್ಲ ಮಾಡಿಸುತ್ತಾರೆ ಕೆಲವೊಮ್ಮೆ. ಅವಳನ್ಯಾರೂ ಎತ್ತಿ ಮುದ್ದಾಡುವದಿಲ್ಲ ತಟ್ಟಿ ಮಲಗಿಸುವದಿಲ್ಲ ಅವಳಿಗೆ...

read more
ಅಚ್ಚರಿ, ಅಚ್ಚರಿ, ಅಚ್ಚರಿ, ಅಚ್ಚರಿ..

ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 12 ಬಡಗಣದಲ್ಲೊಂದು ಮಾದರಿ ಶಾಲೆ ಬೆಳಿಗ್ಗೆ ಎದ್ದು ಕಿಟಕಿಯ ಹತ್ತಿರ ಹೋಗಿ ನೋಡಿದೆ. ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ಬರುತ್ತಿತ್ತು. ಸೂರ್ಯ ಕಾಣಲಿಲ್ಲ. ಸಮಯವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಹೋಗಿ ತಲೆ ಸ್ನಾನ ಮಾಡಿ, ಬಟ್ಟೆಗಳನ್ನು ಬ್ಯಾಗಿಗೆ ತುಂಬಿಕೊಂಡು ಶಾಲೆಯ ಕಡೆಗೆ...

read more
‘ಮಂಗಳಮುಖಿ’ನಾ..

ಟಿ ಕೆ ತ್ಯಾಗರಾಜ್  ಅದೇಕೋ ಕೆಲವು ಪತ್ರಿಕೆಗಳು ಮಂಗಳಮುಖಿಯರು ಎಂಬ ಶಬ್ದ ಬಳಕೆಗೆ ಇನ್ನೂ ಕೊನೇ ನಮಸ್ಕಾರ ಹಾಕಿಲ್ಲ. ಈ ಬಳಕೆ ಕೂಡ ಮೌಢ್ಯವನ್ನು ಪೋಷಿಸುತ್ತದೆ. ಈ ಹಿಂದೆ ದಿನಪತ್ರಿಕೆಯೊಂದರ ಸಂಪಾದಕರಾಗಿದ್ದ ವ್ಯಕ್ತಿ ತನ್ನ ಮೌಢ್ಯಕ್ಕೆ ತಕ್ಕಂತೆ ಈ ಶಬ್ದದ ಬಳಕೆ ಆರಂಭಿಸಿದ್ದರು. ಮಂಗಳಮುಖಿ ಎಂದು ಕರೆಯುವ ಸಮುದಾಯಕ್ಕೆ ಸೇರಿದವರ...

read more

Pin It on Pinterest

Share This