ಅಮೆರಿಕಾದಲ್ಲಿ 'ಏಕ್ ಏಕ್ ಏಕ್ ಅನೇಕ್..'

ಜಿ ಎನ್ ಮೋಹನ್ 

‘ನೋಡೋ ಸುನಿತಾ ಅನಂತಸ್ವಾಮಿ ಬೆಂಗಳೂರಿನಲ್ಲಿದ್ದಾಳೆ . ಮಾತಾಡು. ನಿನ್ನ ತಲೆಗೆ ಏನಾದ್ರೂ ಹೊಳೆಯುತ್ತೆ’ ಅಂತ ಫೋನ್ ಮಾಡಿ ಹೇಳಿದ್ದು ಎಚ್ ಎನ್ ಆರತಿ, ದೂರದರ್ಶನದ ಹೆಸರಾಂತ ನಿರ್ಮಾಪಕಿ.
ಮೈಸೂರು ಅನಂತಸ್ವಾಮಿ ಅವರ ಕುಡಿಗಳನ್ನು ನಾನು ಮೈಸೂರು ಅನಂತಸ್ವಾಮಿಯಂತೆಯೇ ಸಂಭ್ರಮಿಸುತ್ತೇನೆ. ಹಾಗಿರುವಾಗ ಸುನಿತಾ ಜೊತೆ ಮಾತನಾಡದೆ ಏನು? ಆದರೆ ಆ ವೇಳೆಗೆ ಸುನಿತಾ ಅಮೆರಿಕಾಗೆ ಹಾರಿಯಾಗಿತ್ತು . ಆದರೂ ಭಾರತ- ಅಮೆರಿಕಾದ ಕತ್ತಲು ಬೆಳಕಿನ ಕಾಲವನ್ನು ಮಣಿಸಿ ನಾವಿಬ್ಬರೂ ಮಾತನಾಡಿದ್ದೇ ಆಡಿದ್ದು.
ಆಗ ನಾನು ಸಮಯ ಚಾನಲ್ ನ ಪ್ರಧಾನ ಸಂಪಾದಕನಾಗಿದ್ದೆ. ತಣ್ಣನೆ ಜಿಗಿದು ಬಂತು ಕನ್ನಡ ರಾಜ್ಯೋತ್ಸವಕ್ಕೆ ಒಂದು ಹಾಡು ಕಟ್ಟುವ ಯೋಚನೆ.
ಹಾಗೆ ಶುರುವಾದ ನನ್ನ, ಸುನಿತಾ ಬಾಂಧವ್ಯ ಮತ್ತೆ ಚಿಗುರಿದ್ದು ನಾನು ‘ಈಟಿವಿ’ ಸುದ್ದಿ ಚಾನಲ್ ನ ಮುಖ್ಯಸ್ಥನಾಗಿ ಬಂದ ಮೇಲೆ. ಆಗಸ್ಟ್ ೧೫ ಕಾಲಿಡುತ್ತಾ ಬರುತ್ತಿತ್ತು. ನಮ್ಮ ದೇಶದಿಂದ ದೂರ ಉಳಿದ ನಮ್ಮ ನೆಲದವರು ಹೇಗೆ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನಾನು ಸ್ವತಃ ಅಲ್ಲಿದ್ದು ಅವರ ಚಡಪಡಿಕೆಯ ಮೂಲಕ ಕಂಡಿದ್ದೆ.
ಹಾಗಾಗಿ ಸುನೀತಾ, Why not this? ಅಂತ ‘ಜನಗಣಮನ’ ಆಲ್ಬಮ್ ತಯಾರಿಸುವ ಯೋಚನೆ ಮುಂದಿಟ್ಟೆ
ಸುನಿತಾ ನಾನು ಕಂಡ ಅತ್ಯಂತ ಲವಲವಿಕೆಯ ಹುಡುಗಿ ಆಕೆಗೆ Why not ಗಳೇ ಇಷ್ಟ
ಇದ್ದ ಕಡಿಮೆ ಸಮಯದಲ್ಲಿ  ಅಮೆರಿಕಾದ ಬೇರೆ ಬೇರೆ ಕಡೆ ನೆಲೆ ನಿಂತವರನ್ನು ಕೂಡಿಸಲು ನಿರ್ಧರಿಸಿದೆವು. ಕ್ಯಾಮೆರಾ ಲೈಟ್ ಸ್ಟುಡಿಯೋ ಎಡಿಟಿಂಗ್ ಯಾವುದೇ ತಲೆ ಕೆಡಿಸಿಕೊಳ್ಳದೆ ಯೋಜನೆ ಸಿದ್ಧವಾಗಿಯೇ ಹೋಯ್ತು.
ತಾವೇ ಟ್ರೈಪಾಡ್ ನಿಲಿಸಿ, ಕ್ಯಾಮೆರಾ ಕೂರಿಸಿ ಅದರ ಮುಂದೆ ಇಡೀ ಭಾರತದ ಅಷ್ಟೂ ಕೋಟಿ ಜನರಿಗಾಗಿ ಹಾಡುತ್ತಿದ್ದೇವೇನೋ ಎನ್ನುವ ಪುಳಕದಿಂದ ಎಲ್ಲರೂ ಹಾಡಿ ಅದರ raw footage ಅನ್ನು ನನಗೆ ಕಳಿಸಿಕೊಟ್ಟರು. ಸುನಿತಾ ಹಾಡಿದ್ದೂ ಅಲ್ಲದೆ ಈ ಸಂಭ್ರಮ ಅವರಲ್ಲಿ ಆವರಿಸಿದ ಬಗೆಯನ್ನೂ ಮಾತನಾಡಿದರು.
ಮಿಚಿಗನ್ ನಿಂದ ಸುನಿತಾ ಅನಂತಸ್ವಾಮಿ, ಪೆನ್ಸಿಲ್ವೇನಿಯಾದಿಂದ ಅನಿತಾ ಅನಂತಸ್ವಾಮಿ, ಕ್ಯಾಲಿಫೋರ್ನಿಯಾದಿಂದ ಶೇಷಪ್ರಸಾದ್, ಬೋಸ್ಟನ್ ನಿಂದ ಸೌಮ್ಯಶ್ರೀ, ನ್ಯೂಜೆರ್ಸಿಯಿಂದ ಶ್ರೇಯಸ್ ಶ್ರೀಕಾರ್, ವಾಷಿಂಗ್ಟನ್ ನಿಂದ ಅಭಿಜಿತ್ ಹೀಗೆ ಎಲ್ಲ ದನಿಗಳೂ ಕೂಡುತ್ತಾ ಹೋದವು.
ರಾಷ್ಟ್ರ ಗೀತೆ ಅಂದರೆ ಅದೇ ಅಲ್ಲವೇ- ಹನಿ ಹನಿ ಕೂಡಿ ಹಳ್ಳ
ಅಥವಾ ಏಕ್ ಏಕ್ ಏಕ್ ಅನೇಕ್..
ಇಲ್ಲಿದೆ ಆ ಆಲ್ಬಮ್..

‍ಲೇಖಕರು Avadhi

August 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. kvtirumalesh

    ತುಂಬಾ ಒಳ್ಳೆಯ ಪ್ರಯೋಗ, ಕೇಳಿ ಖುಷಿಯಾಯಿತು.

    ಪ್ರತಿಕ್ರಿಯೆ
  2. Shama, Nandibetta

    ವೈಯಕ್ತಿಕವಾಗಿ ವಂದೇ ಮಾತರಂ ಇದಕ್ಕಿಂತ ಹೆಚ್ಚು ನೆಚ್ಚಿನ ಗೀತೆ ಆಗಿರುವ ನನಗೂ ರೋಮಾಂಚನ ತಂದಿಟ್ಟ ಆಲ್ಬಮ್. Thanks.
    Whattan innovative idea sir ji…

    ಪ್ರತಿಕ್ರಿಯೆ
  3. Mala Shylesh

    ಹೊರ ದೇಶದಲ್ಲಿ ನೆಲೆಸಿರುವ ನಮ್ಮ ಗಾಯಕರಿಂದ ಮೂಡಿಬಂದ ಈ ರಾಷ್ಟ್ರಗೀತೆಯ ಆಲ್ಬಂ ತುಂಬಾ ಅದ್ಭುತವಾಗಿದೆ….

    ಪ್ರತಿಕ್ರಿಯೆ
  4. mallappa

    ಕಣ್ಣಲ್ಲಿ ನೀರು ಬಂತು. ಹಾಡಿಗೆ ಓಡು (ವೀಡಿಯೊ) ಸೇರಿದ್ರೆ ಚನ್ನಾಗಿತ್ತು.

    ಪ್ರತಿಕ್ರಿಯೆ
  5. Pushpa Jagadish

    ಕೇಳಿ ರೋಮಾಂಚನವಾಯಿತು ! ಎಂಥಹ ಕೊಡುಗೆ!

    ಪ್ರತಿಕ್ರಿಯೆ
  6. Jayashree

    ಸ್ತುತ್ಯಾಹ೯ವಾದ ಸುಂದರ ಪ್ರಯತ್ನವಿದು. ಜಯ ಜಯ ಜಯ ಜಯ ಹೇ! ಚೆಲುವಾದ ರಾಷ್ಟ್ರ ಗೀತೆಯ ಉತ್ಸಾಹಭರಿತ ಹಾಡುವಿಕೆ.

    ಪ್ರತಿಕ್ರಿಯೆ
  7. vaanee. Suresh

    ರೋಮಾಂಚನಗೊಳಿಸಿದ ಸುಂದರ ಪ್ರಯತ್ನ! ಧನ್ಯವಾದಗಳು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: