ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂಟಿ ಬತ್ತಿಯ ಹಣತೆ ಸಣ್ಣಗೆ ಉರಿಯುತ್ತದೆ..
ಬಿ ವಿ ಭಾರತಿ ಸಾವಿನ ಮನೆಯಲ್ಲಿ ದೇಹವಿದ್ದ ತಾವಲ್ಲಿ ಒಂಟಿ ಬತ್ತಿಯ ಹಣತೆ ಸಣ್ಣಗೆ ಉರಿಯುತ್ತದೆ, ಹಗಲಿನಲ್ಲೂ, ರಾತ್ರಿಯಲ್ಲೂ ಸಾವನ್ನು ಮರೆಯಲು ಬಿಡದೇ ಎಣ್ಣೆಯೂಡುತ್ತಲೇ ಇರಬೇಕು, ಬದುಕಿಗಾಗುವುದು ಹಾಗಿರಲಿ ನಡುರಾತ್ರಿಯಲ್ಲಿ ಎಚ್ಚರವಾದರೆ ಪರಿಚಿತ ಮನೆಯ ಬಚ್ಚಲಿಗೂ ಹಾದಿ ತೋರದ ತಬ್ಬಲಿ ಮಬ್ಬು ಬೆಳಕದು ಆದರೂ ದೀಪವಿರಬೇಕು...
ಇದೆಂಥಾ ಸಂತ್ಯಾಗ ಕೈಬಿಟ್ಟ ಹೋದ್ಯೋ ಕಬೀರಾ..
ಇದೆಂಥಾ ಸಂತ್ಯಾಗ ಕೈಬಿಟ್ಟ ಹೋದ್ಯೋ ಕಬೀರಾ.... ಇಲ್ಲಾ ಇಂಥಾದ್ದೊಂದು ಸುದ್ದಿ ಸುಳ್ಳಾಗಲಿ ಅಂತ್ಯಾವ ದೇವರ ಮುಂದ ಬೇಡಲಿ? ಕಾಕಾ ಮೋಸಾ ಮಾಡಿದ್ರಿ, ದೊಡ್ಡ ಘಾತಾ ಮಾಡಿದ್ರಿ, ವಾರದ ಹಿಂದ ಫೋನಿನ್ಯಾಗ ಏನ ಹೇಳಿದ್ರಿ ನೆಪ್ಪೈತೇನ ನಿಮಗ? ರಾಜಾ ನಿನ್ನ ಪುಸ್ತಕ ಬಿಡುಗಡೆಗೆ ಬರ್ತೇನಿ ಆದ್ರ ನಾ ಪುಸ್ತಕದ ಬಗ್ಗೆ ಮಾತಾಡುದಿಲ್ಲ ನಿನ್ನ...
ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ: ಸುದ್ದಿ ಸುಳ್ಳ ಆಗಲ್ಯೋ ಎಪ್ಪಾ!
ಸುದ್ದಿ ಸುಳ್ಳ ಆಗಲ್ಯೋ ಎಪ್ಪಾ!, …..ಸುದ್ದಿ ಸುಳ್ಳ ಆಗಲಿ. .. ಅಣ್ಣ ಗೋಪಾಲ ವಾಜಪೇಯಿ ಅವರ ಧಾರವಾಡದವರ ಕುರಿತ ಮೊದಲನೆ ಕಂತನ್ನು ಓದಿ ಈಗಷ್ಟೆ ಕಮೆಂಟ್ ಹಾಕಲು ಬಯಸಿದ್ದವಗೆ ಬರಸಿಡಿಲಿನಂತೆ ಈ ಸುದ್ದಿ ಓದಬೇಕಾಗಿ ಬಂದದ್ದು ನಾಡಿನ ದುರದೃಷ್ಟ. ಅವರೊಬ್ಬ ಸಂತನಂತಹ ವ್ಯಕ್ತಿತ್ವದ, ಎಲ್ಲರೊಂದಿಗೂ ಬೆರೆಯುವ ಹಸನ್ಮುಖಿ ವ್ಯಕ್ತಿ....
ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ: ನೋವುಂಟಾಗಿದೆ
ಆಗ ನಾನು "ಕಸ್ತೂರಿ" ವಾಹಿನಿಯಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿ, ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. "ಕಾವ್ಯಧಾರೆ" ಎಂಬ ಕಾರ್ಯಕ್ರಮದ consept ನಿರ್ದೇಶನ ನನ್ನದಾಗಿತ್ತು. ಗೋಪಾಲ ವಾಜಪೇಯ (ಯಾಗ್ನವಲ್ಕ) ಅವರನ್ನು ಹೈದರಾಬಾದಿನಿಂದ ೪.೯.೨೦೦೮ರಂದು ಕರೆಯಿಸಿದ್ದೆವು. ಅವರಿಗೆ ಗಾಂಧಿನಗರದ ಮೋತಿ ಮಹಲ್ ಲಾಡ್ಜ್ ವಾಸ್ತವ್ಯ....
ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ: ಯಾಕೋ ಗೊತ್ತಿಲ್ಲ
ಇವರು ಗೋಪಾಲ ವಾಜಪೇಯಿ -ಜಿ ಎನ್ ಮೋಹನ್ ಇವರು ಗೋಪಾಲ ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು ...
ಗೋಪಾಲ ವಾಜಪೇಯಿ ಕಾಕಾ ಅಂತ್ಯಸಂಸ್ಕಾರ ಗುರುವಾರ
ಗೋಪಾಲ ವಾಜಪೇಯಿ ಕಾಕಾ ಅಂತ್ಯಸಂಸ್ಕಾರ ಗುರುವಾರ. ಅಲ್ಲಿಯವರೆಗೆ ಅವರನ್ನು ಸೌತ್ ಎಂಡ್ ಸರ್ಕಲ್ ಬಳಿ ಇರುವ ಬೆಂಗಳೂರು ಆಸ್ಪತ್ರೆಯಲ್ಲಿ ಇರಿಸುವ ಬಗ್ಗೆ ಈಗ ಕುಟುಂಬಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ. ನಾಡಿದ್ದು ಅವರ ಮನೆಯಲ್ಲಿ ಅಂತಿಮ ದರ್ಶನ Bangalore Hospital, Near South End Circle, Bengaluru 79 ಜಯಲಕ್ಷ್ಮಿ...
BREAKING NEWS: ಗೋಪಾಲ ವಾಜಪೇಯಿ ಇನ್ನಿಲ್ಲ
ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ. 'ಅವಧಿ'ಯ ಆತ್ಮೀಯ ಗೋಪಾಲ ವಾಜಪೇಯಿ ಅವರು ತೀವ್ರ ಅನಾರೋಗ್ಯದಿಂದ ಈಗ ಅರ್ಧ ಗಂಟೆಯ ಹಿಂದೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು ಉಸಿರಾಟದ ತೊಂದರೆಯಿಂದ ಹಲವು ವರ್ಷಗಳ ಕಾಲ ಬಳಲಿದ ಅವರು ಬೆಂಗಳೂರಿನ ಕುಸುಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಬಸವನಗುಡಿಯ ಬಿ ಎಂ ಎಸ್ ಕಾಲೇಜಿನ...
ಅವಳ ಸೀರೆ ನನಗೆ ತಾಗಿ..
ಪ್ರಸಾದ್ ಶೆಣೈ ಆರ್ ಕೆ ಕೆಲವೊಮ್ಮೆ ಹಾಗೇ ದಾರಿ ಸರಿದು ಹೋಗುತ್ತಿರುವಾಗ ದೂರದಲ್ಲಿ ನಿಮ್ಮ ಗೆಳೆಯ ರಾಜೇಶನೋ, ರಮೇಶನೋ ಬರುತ್ತಿದ್ದಾನೆ ಅಂತಂದುಕೊಂಡು, ಇವನತ್ತಿರ ಏನಾದ್ರೂ ಮಾತಾಡ್ಬೇಕಲ್ಲ ಅಂತ ಒಳಗೊಳಗೆ ಇಲ್ಲದ ಮಾತುಗಳಿಗಾಗಿ ತಡಕಾಡುತ್ತಿದ್ದಾಗ ಆ ವ್ಯಕ್ತಿ ಹತ್ತಿರ ಬರುತ್ತಾನೆ. ಅಷ್ಟೊತ್ತಿಗೆ “ಅಯ್ಯೋ ಇವನು ರಮೇಶನಲ್ಲ ರಮೇಶನ...
ಹಂದಿಮಾಂಸದ ನಂತರ ಸಿಕ್ಕಿದ್ದು ಬಿದಿರು ತಾಯಿ..
ಡಾನ್ ಬಾಸ್ಕೋ ಮ್ಯೂಸಿಯಂ, ಶಿಲ್ಲಾಂಗ್ | ಪ್ರವಾಸ ಕಥನ 2 ಹಂದಿಮಾಂಸವನ್ನ ಸಣ್ಣಗೆ ಉದ್ದಕೆ ಒಳ್ಳೆ ಈರುಳ್ಳಿ ಹಚ್ಚಿದಂತೆ ಹಚ್ಚಿ ಹುರಿದಿದ್ದ ಫ್ರೈಡ್ ರೈಸ್ ತಿನ್ನೋವಾಗ ಇದೇನು ಹೊಸ ತರಹ ಇದೆಯಲ್ಲ! ಇದು ತರಕಾರಿಯಾ? ಮಾಂಸವಾ? ಯಾವ ಮಾಂಸ?! ಇತ್ಯಾದಿ ಪ್ರಶ್ನೆ ಏಳ್ತಾ ಇದ್ರು ಹಸಿದ ಹೊಟ್ಟೆಗೆ ಉತ್ತರವಂತೂ ಸದ್ಯಕ್ಕೆ ಬೇಕಿರಲಿಲ್ಲ....
ನೆರಳಿಗಿಂತ ಜೊತೆಗಾರನಿಲ್ಲ
ನಳಿನ ಡಿ ರಸ್ತೆ ಖಾಲಿಯೇ ಇರಬಹುದು ತಮ್ಮಾ, ಮನಸು ಎಲ್ಲಿ ಖಾಲಿ ನಿಲ್ಲತ್ತೈತಿ ಹೇಳ, ಗಡಿಯಾರದಾಂಗ ಮೆಲ್ಲನೆ, ಬೇಗನೆ ಕಳೆದು ಹೋಗತೈತಾ, ಜತೆಗೆ ನಮ್ಮ ನಮ್ಮದನ್ನು ಒಮ್ಮೊಮ್ಮೆ ಕೂಡಿಸಿ ಕೊಡತ್ತೈತಾ ತಮ್ಮಾ. ಜಾಗೃತಿ ಏಕೆ, ಜಗದ ಎಚ್ಚರ ತಲಿ ಒಳಗಾ ಹೇಳತೈತಿ ಬೆನ್ನಿನ ಮೇಲೆ ಹೊತ್ತ ಹೊರೆಯೇ ತಿಳಿಸತೈತಾ ತಮ್ಮಾ. ಇದೇ ಸಮಯ, ಇದೇ ಸಾಲ,...
ಏಯ್ ಚೋಟೂ..
ಗೀತಾ ಹೆಗ್ಡೆ ಏಯ್ ಚೋಟೂ ಇದೇನೊ ನಿನ್ನ ಸಾಹಸ ? ಕಾಲವನ್ನೇ ಹೊತ್ತೊಯ್ಯುತಿರುವೆಯಲ್ಲ ! ಈ ಜಗದ ಜಂಜಡವೇ ನನಗೆ ಬೇಡಾ ಎಂದು ರೋಸಿ ಎಲ್ಲಿಗೊ ಸಾಗಿದಂತಿದೆ ನಿನ್ನ ಪಯಣ. ನಿನ್ನ ಕಾಲಡಿಯಲ್ಲೆ ಇದೆ ನಿನ್ನ ಪ್ರತಿಬಿಂಬ ಬೆನ್ನಿಗೇರಿದ ಕಾಲನೂ ನಿನ್ನ ಹಿಂಬಾಲಿಸುತಲಿಹನು ದಯವಿಟ್ಟು ಒಮ್ಮೆ ಬಗ್ಗಿ ನೋಡು. ತರವಲ್ಲ ನಿನಗೆ ಸಿಟ್ಟು ಸೆಡಗು...
ಹೆದ್ದಾರಿ ಕವಲಿನಲ್ಲಿ ಆರ್ ಜಿ ಹಳ್ಳಿ
ಸಮಸ್ಯೆಯಲ್ಲಿದ್ದಾರೆ ಮಮತಾ..
ಪ್ರಿಯ ಸ್ನೇಹಿತರೆ, ನನ್ನ ಕವನ ಸಂಕಲನ "ಸಂತೆ ಸರಕು"ಗೆ ಕಲಾವಿದರಾದ ಅರುಣ್ ಕುಮಾರ್ ಕವರ್ ಪೇಜ್ ಮಾಡಿದ್ದಾರೆ. ಯಾವುದು ಸೂಕ್ತ ಸೂಚಿಸುವಿರ ? -ಮಮತಾ...
ತುಮಕೂರಿನಲ್ಲಿ ಚಿತ್ರೋತ್ಸವ
ಇಸ್ಮಾಯಿಲ್ ಗೋನಾಳ್ ನಮನ
"ತನುವಿನೊಳಗನುದಿನವಿದ್ದು ಎನ್ನ ಮನಕೊಂದು ಮಾತ ಹೇಳದೆ ಹೋದೆ ಹಂಸೆ.." ಗೀತೆ ನಿಮಗೆ ಮೋಸ ಮಾಡಿತೇ? ನಿಮಗೆ ನಿಮ್ಮ ಪ್ರಾಣಪಕ್ಷಿ ಹಾರಿಹೋದ ಮೆಸೇಜ್ ಸಿಗಲಿಲ್ಲವೇ? ಯಾವ ರಾಗದ ಮೂಡ್ ನಲ್ಲಿ ಕಳೆದು ಹೋದಿರಿ? ಸಂಗೀತ ಹಾಗೂ ಸಂಗೀತಗಾರರು ವ್ಯವಹಾರವಾಗಿ ಬದಲಾಗಿರುವಾಗ ನಿಮ್ಮ 'ಕಲಿತ ಹುಡುಗಿ ಕುದುರಿ ನಡಿಗಿ ನಡಕೊಂತ ಹೊರಟಿತ್ತ..' ಹಾಡು...
ಓದಲೇಬೇಕಾದ ಒಂದು ವಿಲ್..
ವಿಜಯೇಂದ್ರ ಹಿರಿಯ ಪತ್ರಕರ್ತರು. ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರೂ ಆಗಿದ್ದವರು * ಯಾರೂ ಶೋಕಿಸ ಕೂಡದು ವಿಜಯೇಂದ್ರ ನಾನು ಈಗಾಗಲೇ 61 ವಸಂತಗಳನ್ನು ಕಂಡಿದ್ದು, ಇನ್ನೂ ಹೆಚ್ಚು ದಿನ ಬದುಕುವ ನಂಬಿಕೆ ಮತ್ತು ಅಸೆ ಇಲ್ಲವಾಗಿದೆ. ನಾನು ಸತ್ತಾಗ, ನನ್ನ ಸಾವು ಸ್ವಾಭಾವಿಕವಾಗಿ ಸಂಭವಿಸಿದ್ದಲ್ಲಿ ನನ್ನ ದೇಹದ...
ಹುಷಾರು..! ಇಲ್ಲಿ ಎದೆಯನ್ನೇ ಸುಟ್ಟು ಹಾಕಲಾಗುತ್ತದೆ..
'ಚಿಕ್ ಚಿಕ್ ಸಂಗತಿ'ಯಲ್ಲಿ 'ಹಾಳಾದೊವೆರಡು ಮೊಲೆ ಬಂದು..' ಪ್ರಕಟವಾಗುತ್ತಿದ್ದಂತೆ ಓದುಗರು ಅಕ್ಷರಶಃ ಬೆಚ್ಚಿ ಬಿದ್ದರು. 'ಇದು ಸಾಧ್ಯವೇ.." ಎನ್ನುವ ಉದ್ಘಾರ ಎಲ್ಲರಿಂದಲೂ. ಜೊತೆಗೆ ಹೇಳಲಾಗದ ನೋವು. ಯೋನಿ ಛೇಧನದ ಬಗ್ಗೆ ಆಗೀಗ ವರದಿಗಳಾದರೂ ಬಂದಿವೆ. ಆದರೆ ಎದೆಯನ್ನೇ ಚಿವುಟಿ ಹಾಕಿಬಿಡುವ ಕ್ರೂರ ಆಚರಣೆಯೊಂದು ಸದ್ದಿಲ್ಲದೇ...
ಹೊಯಿಗೆ ನುಂಗುವ ಮರಳು ಮಾಧವರು…
ರಾಜಾರಾಂ ತಲ್ಲೂರು ಡಿಮಾಂಡು- ಸಪ್ಲೈ ಆಧರಿಸಿದ ಇಕನಾಮಿಕ್ಸು ಈ ದೇಶವನ್ನು ಹರಿದುತಿಂದಷ್ಟು ಬೇರಾವುದೂ ಹರಿದುತಿಂದಿಲ್ಲ. ಹಾಸಿಗೆ ಗಾತ್ರದಲ್ಲಿ ಹಿಗ್ಗುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ, ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕಾದಲ್ಲಿ ಒಮ್ಮೆ ಹಾಸಿಗೆಯನ್ನು ಕೆಳಗೆಳೆಯುತ್ತಾ ಇನ್ನೊಮ್ಮೆ ಕಾಲನ್ನೂ ಚಾಚುತ್ತಾ ಸಾಗಿದ್ದೇವೆ. ಹಾಸಿಗೆ...
ಎರವರ ಜಗತ್ತಿನಲ್ಲೊಂದು ಪಯಣ..
ಬೇರನ್ನೇ ಕಿತ್ತ ಮೇಲೆ? ಒಂದು ನಾಡಿನ ಶ್ರೀಮಂತಿಕೆ ಅಲ್ಲಿನ ಜನಾಂಗ ಪ್ರತಿಬಿಂಬಿಸುತ್ತಿದೆ. ಆದರೆ ಇವತ್ತು ಅನುಕರಣೆಯ ಅಬ್ಬರಕ್ಕೆ ಎಲ್ಲವು ಅಸ್ತವ್ಯಸ್ತಗೊಂಡಿದೆ. ಕಣ್ಣೆದುರೇ ಹಲವು ಜನಾಂಗಗಳು ಕಣ್ಮರೆಯಾಗುತ್ತಿವೆ. ಈ ನಾಡಿನ ನೆಲ ಜಲ, ಭಾಷೆ,ಜನಾಂಗಗಳ ಬಗ್ಗೆ ಕನವರಿಸುವ ಪ್ರೀತಿಸುವ ಜೀವಗಳು ಇದನ್ನು ನೋಡಿ ಆತಂಕ ನೋವು ಪಡೋದನ್ನು...
ಕಾಲರಾಯನ ಹೆಗಲಿಗೇರಿಸಿಕೊಂಡು..
ಕಾಲಚಕ್ರ ಪರಮೇಶ್ ನಿಂತಿದೆ, ಕವಲೊಡೆದ ದಾರಿಯಲಿ ಕಾಲರಾಯನ ಹೆಗಲಿಗೇರಿಸಿಕೊಂಡು ತುಸು ವಿಶ್ರಮಿಸುಲು ಯತ್ನಿಸಿದೆ… ಎಂದೂ... ಬಸವಳಿದಾ ಕಾಲನೋ ! ದೂಡುತಿಹನು ಹಿಂಬದಿಯಿಂದ ನಿಲ್ಲದಿರೂ ಎಲ್ಲಿಯೂ, ನಡೆ ಮುಂದೆ, ನಡೆ ಮುಂದೆ (ಟಿಕ್, ಟಿಕ್) ಎಂಬ ಘೋಷವಾಕ್ಯ ಕಿವಿಯನು ಚುಚ್ಚುತಿಹದು ಗುರಿಯೋ, ಗಮ್ಯವೋ, ತೀರವೋ ಯೆತಕಾಗಿ ಈ ಸೆಣಸಾಟ ?...
ಹೃದಯದ ಕೂಗಿಗಾಗಿ..
ಕ್ಲಿಕ್ ಆಯ್ತು ಕವಿತೆ ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ.. ನಂ ಪಾರ್ವತಿ ಈ ಬಯಕೆ ಇಂದು ನೆನ್ನೆಯದಲ್ಲ, ಮೊನ್ನೆಯದೂ ಅಲ್ಲ ಹಿಂದಣ ಕಾಲದ್ದೋ, ಹಿಂದಣ ಜನ್ಮದ್ದೋ ಇರಬೇಕು ಜೀವನ ಒಂದು ಚಕ್ರವಂತೆ, ಪರೀಕ್ಷಿಸುವ ಬಯಕೆಯಂತೂ ಎಳ್ಳಷ್ಟೂ ಇಲ್ಲ ಅದಕ್ಕೇ ಇರಬೇಕು ನನಗೆ ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ.... ಕಣ್ಣೆದುರಿನ ಈ ತಿರುವು...
