ಈ ಬದುಕಿಗೆ ಕಿಟಕಿಗಳಿರಬೇಕು

ನಿನ್ನೆ ನನ್ನ ಬರಹ ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ.. ಓದಿದ ಹಲವಾರು ಮೇಲ್ ಮಾಡಿದ್ದಾರೆ. ತಮ್ಮ ಹಾಗೂ ರೈಲಿನ ಒಡನಾಟದ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ರೈಲಿನ ಜೊತೆಗೇ ಸಾಗಿದ ತಮ್ಮ ಬದುಕನ್ನು ಬಣ್ಣಿಸಿದ್ದಾರೆ.

ನನಗೆ ಈ ಲಹರಿಯನ್ನು ಬರೆಯಲು ಕಾರಣವಾದದ್ದು ಒಂದು ಅಂತರ್ಜಾಲ ತಾಣ. ಕಾಲೇಜು ಓದುತ್ತಿದ್ದ ಹುಡುಗ ಆರಂಭ ಮಾಡಿದ ತಾಣ ಇಂದು ಜಗತ್ ಪ್ರಸಿದ್ಧಿ ಪಡೆದಿದೆ. ಆ ತಾಣವನ್ನು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇನೆ

ಹೋಗಿ ರೈಲನ್ನು ಬರಮಾಡಿಕೊಳ್ಳಿ

ಜಿ ಎನ್ ಮೋಹನ್ 
window-seat-logo

ಆತ ಕಿಟಕಿಯಿಂದ ಆಚೆ ನೋಡಿದ. ಅಷ್ಟೇ ಸಾಕು ಅನಿಸಲಿಲ್ಲ ಆಚೆ ನಿಂತು ಕಿಟಕಿಯ ಒಳಗೂ ಇಣುಕಿದ. ಹೀಗೆ ಆಚೆ ಮತ್ತು ಈಚೆ ನೋಡಿದ ಕಾರಣಕ್ಕೆ ಈಗ ಅಂತರ್ಜಾಲ ಲೋಕದಲ್ಲಿ ಹೊಸ ಸಂಚಲನ ಮೂಡಿದೆ. ರೈಲು ಲೋಕದಲ್ಲಿ ನೀವು ಕಂಡಿದ್ದ ಆದರೆ ಕಂಡೂ ಇರದ ಲೋಕ ಬಿಚ್ಚಿಕೊಂಡಿದೆ. ಇದು ಇಡೀ ಜಗತ್ತಿನ ಗಮನ ಸೆಳೆದಿದೆ. ಅದರ ಹೆಸರೇ ‘ವಿಂಡೋ ಸೀಟ್ ಪ್ರಾಜೆಕ್ಟ್’

shanu-babarಪುಣೆಯ ಸಿಂಬಿಯಾಸಿಸ್ ಯೂನಿವರ್ಸಿಟಿಯಲ್ಲಿ ಚಲನಚಿತ್ರ ಕುರಿತ ಕೋರ್ಸ್ ಮಾಡುತ್ತಿದ್ದ ಹುಡುಗ ಶಾನು ಬಾಬರ್. ಕೋರ್ಸ್ ನ ಭಾಗವಾಗಿ ಈತ ಒಂದು ಕಿರುಚಿತ್ರ ಮಾಡಬೇಕಿತ್ತು. ಸದಾ ಕಿಟಕಿ ಬಳಿಯ ಸೀಟನ್ನೇ ಇಷ್ಟಪಡುತ್ತಿದ್ದ ಹುಡುಗ ಏಕೆ ಕಿಟಕಿಯಾಚೆ ಕಾಣುವ ಜಗತ್ತನ್ನು ದಾಖಲಿಸಬಾರದು ಎಂದು ಹೊರಟೇ ಬಿಟ್ಟ.

ಕಿಟಕಿಯ ಬಳಿ ಕುಳಿತು ಕಂಡದ್ದೆಲ್ಲಾ ಚಿತ್ರಿಸಿದ. ಕಿಟಕಿ ಬಳಿ ಕುಳಿತಿದ್ದವರ ಕಥೆ ಕೇಳಿದ. ಸ್ವಲ್ಪ ದಿನ ಬಿಟ್ಟು ಅದನ್ನು ಇನ್ಸ್ಟಾಗ್ರಾಮ್ ಗೆ ಏರಿಸಿದ. ಊಹಿಸಲೂ ಆಗದಷ್ಟು ಪ್ರತಿಕ್ರಿಯೆ ಬಂತು. ಎಲ್ಲರೂ ತಮ್ಮ ತಮ್ಮ ಬಾಲ್ಯವನ್ನು ಒಮ್ಮೆ ತಡಕಿ ನೋಡಿಕೊಂಡರೇನೋ.. ಎಲ್ಲರೂ ತಾವು ಕಿಟಕಿ ಸೀಟಿಗಾಗಿ ಆಸೆ ಪಡುತ್ತಿದ್ದುದನ್ನು ನೆನಪಿಗೆ ತಂದುಕೊಂಡರೇನೋ. ಉತ್ಸಾಹದ ಹೊಳೆ ಹರಿಯಿತು. ಆಗ ಶಾನು ಬಾಬರ್ ಸಾರ್ವಜನಿಕರಿಂದಲೂ ಫೋಟೋ ಆಹ್ವಾನಿಸಿದ. ಅದಕ್ಕೂ ಇನ್ನಿಲ್ಲದ ಪ್ರತಿಕ್ರಿಯೆ. ಈಗ ‘ವಿಂಡೋ ಸೀಟ್ ಪ್ರಾಜೆಕ್ಟ್’ ಅಂತರ್ಜಾಲ ಲೋಕದ ಹೆಮ್ಮೆಯ ತಾಣಗಳಲ್ಲೊಂದು.

(https://www.instagram.com/windowseatproject)

(https://www.facebook.com/windowseatproject/?fref=ts)

ಈ ತಾಣ ಹೊಕ್ಕರೆ ಸಾಕು ರೈಲು ಲೋಕದ ಕಾವ್ಯ ನಿಮ್ಮ ಎದೆ ಹೊಕ್ಕಿಬಿಡುತ್ತದೆ. ಇಲ್ಲಿ ಯಾರಿದ್ದಾರೆ ಯಾರಿಲ್ಲ ಎನ್ನುವಂತಿಲ್ಲ. ‘ರೈಲು ನಮ್ಮ ಸಂಸ್ಕೃತಿಯನ್ನು, ನಮ್ಮ ಭೂಗಳವನ್ನೂ ಬೆಸೆಯುವ ತಂತು. ಹಾಗಾಗಿ ನನಗೆ ಸದಾ ರೈಲು ಇಷ್ಟ’ ಎನ್ನುವ ಬಾಬರ್ ಈಗ ನಿಲ್ದಾಣದಲ್ಲಿ ನಿಂತು ರೈಲಿನ ಒಳಗೇನು ನಡೆಯುತ್ತದೆ ಎನ್ನುವುದರತ್ತಲೂ ಕಣ್ಣು ಹಾಯಿಸಿದ್ದಾನೆ. ಹಾಗಾಗಿ ರೈಲಿನೊಳಗೆ ಕುಳಿತು ರೈಲಿನ ಚಿತ್ರವನ್ನೇ ಬಿಡಿಸುವವರಿಂದ ಹಿಡಿದು, ರೈಲಿನೊಳಗಿದ್ದೂ ಬೀದಿ ಪಾಲಾದವರ ಕಥೆಗಳೂ ಇವೆ. ಅಷ್ಟೇ ಅಲ್ಲ, ರೈಲಿನ ಪ್ರೇಮಿಗಳಿಂದ ಹಿಡಿದು ರೈಲಿನ ಕಾಫಿ, ಟೀ ಘಮ ಎಲ್ಲವೂ ಇಲ್ಲಿ ಸಿಕ್ಕಿ ಹೋಗುತ್ತದೆ.

ರೈಲು ಬದುಕಿನ ಒಂದು ರೂಪಕ. ಹಾಗಾಗಿಯೇ ಇರಬೇಕು. ಈ ಬದುಕಿಗೆ ಕಿಟಕಿಗಳಿರಬೇಕು. ನಾವು ಆ ಕಿಟಕಿಯ ಪಕ್ಕವೇ ಕುಳಿತುಕೊಳ್ಳಬೇಕು.

ಇನ್ನೇನು ಯೋಚನೆ. ಜಾಗ ಹಿಡಿಯಿರಿ ಕಿಟಕಿ ಬಳಿ..

whatsapp-image-2016-10-18-at-08-33-37-7

‍ಲೇಖಕರು Admin

November 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sarojini Padasalagi

    ಆ ಗುಡ್ಡ ,ಆ ಬೆಟ್ಟ ,ಆ ಕಾಡು ,ಆ ನಾಡು ,ಆ ಡೊಂಕು ,ಆ ತಿರುವು ಆ ಏರಿಳಿವಿನಲ್ಲಿ ಸಾಗುವ ರೈಲಿನ ಕಿಟಕಿ ಪಕ್ಕ ಕೂತು ಬದುಕಿನ ಒಳ ಹೊರಗನ್ನು ಸವಿಯುವುದು ,ಒಳಗಣ್ಣ ಹೊರಗಣ್ಣ ತೆರೆಯುತ್ತ ಬದುಕಿನಲ್ಲಿ ಇಣುಕಲು ಬದುಕಿಗೂ ಕಿಟಕಿಗಳಿರ ಬೇಕು ಎಂಬ ಬಯಕೆ !!! ತುಂಬ ಸುಂದರ. ನಿಜ ಬದುಕಿಗೆ ಕಿಟಕಿಗಳಿರಬೇಕು ,ತೂತುಗಳಲ್ಲ.ಬೇಕಂದಾಗ ಬೇಕಾದಷ್ಟೇ ತೆಗೆದು ಇಣುಕಿ ,ತೋರಿ ಮತ್ತೆ ಮುಚ್ಚಿ ಭದ್ರಪಡಿಸುವ ಕಿಟಕಿಗಳಿರ ಬೇಕು ,ಆ ಕಿಟಕಿಯ ಪಕ್ಕದ ಸೀಟು ನಮ್ಮದಿರ ಬೇಕು ,ತೆಗೆದು ,ಮುಚ್ಚಿ ಮಾಡ ಬರುವಂತೆ . ಒಳ್ಳೆಯ ವೈಚಾರಿಕತೆಯ. ಕಿಟಕಿ ತೆರೆಯುವ ಲಹರಿ

    ಪ್ರತಿಕ್ರಿಯೆ
  2. Gayatri Badiger, Dharwad

    ಇನ್ನೇನು ಯೋಚನೆ. ಜಾಗ ಹಿಡಿಯಿರಿ ಕಿಟಕಿ ಬಳಿ.. super sir…
    hale nenapu.. matte enenu madabeku kitaki bali kulitu annaodu huchhu hidisitu.. thank you sir..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: