ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಥೆ ಕಥಿಸಿ, ಸಮುದ್ರ ಮಥಿಸಿ..

ಎಚ್ ಬಿ ಇಂದ್ರಕುಮಾರ್  ಕಥೆ ಕಥಿಸಿ, ಸಮುದ್ರ ಮಥಿಸಿ ಹೊಸ ಹುಟ್ಟು ಪಡೆಯಿತು. ಕಾರ್ಯಕ್ರಮದ ಹೊಸ ರೀತಿಯ ಪ್ರಕ್ರಿಯೆಯನ್ನು ಕಂಚಿನ ಕಂಠದಲ್ಲಿ ಮಯೂರ್ ಬರಗಾಲೆ ಪರಿಚಯಿಸಿ, ಮಾತಿನ ದಿಕ್ಸೂಚಿ ಹಿಡಿದರು. ಬಾಗಲಕೋಟೆಯ ಭಾಷೆಯಲ್ಲರಳಿದ ತಿರುಪತಿ ಭಂಗಿ ಯವರ ಕೈರೊಟ್ಟಿಯನ್ನು ಬಸವಣ್ಣೆಪ್ಪಾ ಕಂಬಾರ ತಟ್ಟಿದರು. ಸದ್ದಾಯಿತು. ಶಿವಾಪುರ ಮಾತಿನ...

read more
ಕರೆನ್ಸಿ ನಂಬುಗೆಯನ್ನು ಒಡೆದುಹಾಕಲಾಗಿದೆ..

ಎಸ್ ಸಿ ದಿನೇಶ್ ಕುಮಾರ್  ಬೆಲೆಯಳಿಕೆ (demonetization) ಕುರಿತು ವಿದೇಶಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಹೊಗಳಲಾಗುತ್ತಿದೆ ಎಂದು ಯಾರೋ ಹೇಳುತ್ತಿದ್ದರು. ಇಲ್ಲಿ ಕೆಲವು ವಿದೇಶಿ ಮಾಧ್ಯಮಗಳು ಬರೆದಿರೋದು ಮಾತ್ರ ಬೇರೆಯದೇ ಕಥೆ ಹೇಳುತ್ತಿವೆ.. ಶ್ರೀಮಂತರು ಸಮಸ್ಯೆ ಎದುರಿಸುತ್ತಿಲ್ಲ. ಭ್ರಷ್ಟರು ತಮ್ಮ ಹಣನ್ನೆಲ್ಲ ಶೇರು, ಚಿನ್ನ...

read more
ಜೇನುಗನಸಿನ ಕಚಗುಳಿಯಿಟ್ಟಳು..

ನಿಘಂಟು ಸುನೀತ, ಕುಶಾಲನಗರ ಕಾಡೊಳಗಿನ ಪ್ರಣಯದಲಿ ದಕ್ಕಿದ ಮುತ್ತುಗಳಿಗೆಲ್ಲಾ ಹೊಳೆ ಮೈದುಂಬಿ ನಿನಾದಿಸಿದ್ದಳು ಕೈಕೈ ಹಿಡಿದು ಲಲ್ಲೆಗೆರೆಯುತಾ ಹೊಳೆ ದಂಡೆಯನು ಹಾಯುವಾಗಲೆಲ್ಲಾ ಹಿಂಬಾಲಿಸಿ ಗೇಲಿಸಿದ್ದಳು ಕಾಲ ಸರಿದು ನಡು ನೀರೇ ಉಳಿದರೂ ನಮ್ಮೊಲವಿಗೆ ಜೇನುಗನಸಿನ ಕಚಗುಳಿಯಿಟ್ಟಳು ಬೇಸಗೆಯ ಸುಡು ಬಿಸಿಲಲಿ ಹೊಳೆ ಹರಿಯುತ್ತಿದ್ದ...

read more
ಬಿಟ್ಟಹೋಗಾಕ ಮನಸಿಲ್ಲ ನಿನ್ನ..

ಯಾಕ ಒಲ್ಯಂತಿ ಕೃಷ್ಣ ದೇವಾಂಗಮಠ  ಬರಲಾಕ ಯಾಕ ಒಲ್ಯಂತಿ ಬಿಟ್ಟಹೋಗಾಕ ಮನಸಿಲ್ಲ ನಿನ್ನ ಪಟಾ ತರಗೇಲಿಯ ಹಾಂಗ ನೆಲಕ್ಕ ಬಿದ್ದರ ಜೀವಾ ಬಿಲಿಬಿಲಿ ಅನ್ನದ್ಹ್ಯಾಂಗ ಗರಕಿನೂ ಬೆಳೆಯದಂಥ ಮಣ್ಣಾಗ ಮನೆ ಕಟ್ಟಲದ್ಹ್ಯಾಂಗಾದಾತೆ ಗುಬ್ಬಚ್ಚಿ ಚಿಂವು ದನಿಯಿಲ್ಲದ ಮನ ಅದ್ಹ್ಯಾಂಗ ತಡದಿತೆ ಕೊಳಲು ಉರಿದಾಂಗ ಮನಸು ಮುರದರ ದನಿ ಹ್ಯಾಂಗ ಆಚೆ ಬರತೈತಿ...

read more
pleasant surprise!

ಕಿರಣ್ ಭಟ್ ಹೊನ್ನಾವರ    ಇವತ್ತು ನನಗೆ pleasant surprise! ಗೆಳೆಯ ಮೋಹನ ಸೋನ, ಸುದೇಶ ಮಹಾನ್ ಕಾರವಾರದಲ್ಲಿ! 'ಸ್ವಾತಂತ್ರ್ಯ ಸಂಗ್ರಾಮ' ದ ಕುರಿತ painting workshop ಗೆ ಬಂದಿದ್ರು ಅವರು. ೯೦ ರ ದಶಕದಲ್ಲಿ ಸುದೇಶ್ ನ ಮನೆಯ ಅಟ್ಟವೇ ನಮ್ಮ ಕರ್ಮಭೂಮಿ. ನನ್ನಂತಹ ಅನೇಕರನ್ನ ರೂಪಿಸಿದ ತಾಣ. ಹಲವಾರು ಕನಸುಗಳನ್ನು ಕಂಡ,...

read more
ಎಚ್ ಎಸ್ ವಿ ಕಾಲಂ: ರಾಮನವಮಿಯ ರಾತ್ರಿ…

ತಾವರೆಯ ಬಾಗಿಲು-೯ ಎಚ್.ಎಸ್.ವೆಂಕಟೇಶ ಮೂರ್ತಿ ಇದು ರಾಮನವಮಿಯ ಆಸುಪಾಸಿನಲ್ಲಿ ಬರೆದದ್ದು ರಾಮನವಮಿ ಬರುತ್ತಾ ಇದೆ. ಬಿಸಿಲ ಬೇಗೆ ಉಲ್ಬಣಿಸುತ್ತಿರುವ ದಿನಗಳು ಇವು. ಈಗಲ್ಲದೆ ಮತ್ತೆ ಯಾವಾಗ ರಾಮನವಮಿ ಬರಬೇಕು? ನಡುಹಗಲಲ್ಲಿ ಕೊಲ್ಲಾರ ಬಂಡಿಗಳಲ್ಲಿ ಬೇಲದ ಪಾನಕದ ಕೊಪ್ಪರಿಗೆಗಳು ಕೋಸಂಬರಿ ರಸಾಯನಗಳೊಂದಿಗೆ ಮುದ್ದೇನಹಳ್ಳಿಯ ಬೆಟ್ಟದ...

read more
ಡಾ. ಜಿ. ಪರಮೇಶ್ವರರಿಗೊಂದು ಬಹಿರಂಗ ಪತ್ರ

ಶ್ರೀಧರ್ ಪ್ರಭು  ಶ್ರೀಯುತರೇ, ತಮಗೆ ಸಪ್ರೇಮ ವಂದನೆಗಳು. ನಾನು ಯಾವುದೇ ಪಕ್ಷ, ಪಂಗಡ ಅಥವಾ ರಾಜಕಾರಣವನ್ನು ಪ್ರತಿನಿಧಿಸಿ ಈ ಪತ್ರ ಬರೆಯುತ್ತಿಲ್ಲ. ಇದು ನನ್ನ ವ್ಯಕ್ತಿಗತ ಸಂವಾದ. ಹಾಗೆಯೇ ನಾನು ಈ ರಾಜ್ಯದ ಗೃಹ ಮಂತ್ರಿಗಳಿಗಾಗಲಿ ಅಥವಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗಾಗಲಿ ಈ ಪತ್ರವನ್ನು ಬರೆಯುತ್ತಿಲ್ಲ....

read more
ಕಾಡುವ ಕಥೆಗಳ ಜಾಡು ಹಿಡಿದು

ಸುಧಾ ಆಡುಕಳ "ಕಥೆ ಕವನಗಳೆಲ್ಲ ಮನಸಿಗೆ ಬಂದಾಗಲೇ ಹಾರ್ಧಿಕವಾಗಿ ಸ್ವಾಗತಿಸಿ, ಪ್ರೀತಿಯಿಂದ ಅಕ್ಷರಕ್ಕಿಳಿಸಬೇಕು. ಇಲ್ಲವಾದರೆ ಅವು ಬೇರೆಯವರನ್ನು ಹುಡುಕಿಕೊಂಡು ಹೋಗಿಬಿಡುತ್ತವೆ ಎಂದು ಅಮ್ಮ ಯಾವಾಗಲೂ ಹೇಳುತ್ತಾರೆ. ಹಾಗಾಗಿ ನನ್ನ ಮನಸಿಗೆ ಬಂದ ಭಾವಗಳನ್ನು ಅಕ್ಷರಕ್ಕಿಳಿಸುವ ಸಮಯವನ್ನು ಮಾತ್ರ ನಾನು ಮನೆಯವರಿಂದ ಬೇಡುತ್ತೇನೆ"...

read more
ಎಂ ಎಸ್ ಸುಬ್ಬುಲಕ್ಷ್ಮಿಯವರನ್ನು ನೋಡಿದಾಗಲೆಲ್ಲಾ..

ರಾಜೇಂದ್ರ ಪ್ರಸಾದ್  ನನ್ನ ಅಜ್ಜಿ ಸತ್ತು ಬರುವ ಫೆಬ್ರವರಿಗೆ ಹತ್ತು ವರ್ಷ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಆಕೆ ಹುಲಿಯೂರು ದುರ್ಗದ ಬಳಿಯ ಕುಗ್ರಾಮಕ್ಕೆ ಮದುವೆಯಾಗಿ ಹೊಲಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾ ಕಡೆಗಾಲದಲ್ಲಿ ಅದೇ ಬೆಂಗಳೂರಿಗೆ ಬಂದು ಕ್ಯಾನ್ಸರ್ ಅವರಿಸಿಕೊಂಡು ಆಪರೇಷನ್ ಮಾತ್ರೆ - ಔಷಧಿ ಅಂತ ಊರಿಗೂ ಬೆಂಗಳೂರಿಗೂ...

read more
ನನ್ನ ಬುದ್ಧನಿಗೆ ಆಸೆಗಳಿವೆ!

ಎಚ್ ಎಂ ಮಹೇಂದ್ರ ಕುಮಾರ್ ಶುದ್ಧೋದನನ ಪುತ್ರ ಸಿದ್ದಾರ್ಥನಿಗೆ ವೃದ್ಧಾಪ್ಯ, ದುಃಖ, ರೋಗ-ರುಜಿನಗಳು, ಸಾವಿಲ್ಲದ ಹುಟ್ಟಿನ, ಅಮರತ್ವ ಪಡೆಯುವ ಮಹದಾಸೆ! ಅರಮನೆ, ಅರಸೊತ್ತಿಗೆ, ಅಷ್ಟೈಶ್ವರ್ಯ, ಸುಖ, ಪುತ್ರ ರಾಹುಲ, ಉಸಿರಾದ ಪತ್ನಿ, ಮಗಧ ಸಾಮ್ರಾಜ್ಯವನ್ನು ಬಿಟ್ಟು ಕತ್ತಲಲ್ಲಿ ಕಾಡು ಸೇರಿದ ಸಿದ್ಧಾರ್ಥನಿಗೆ ಬುದ್ಧನಾಗುವ ದೊಡ್ಡಆಸೆ!...

read more
ಮೈಸೂರು ಅನಂತಸ್ವಾಮಿ s/o ಶ್ರೀಮತಿ ಕಮಲಮ್ಮ

ಅಜ್ಜಿ-ತಾತ ಅಣ್ಣ ಅವರ ತಂದೆ-ತಾಯಿಯ ಬಗ್ಗೆ ಹೀಗೆ ಹೇಳ್ತಿದ್ರು: "ತಾನು ಹೆತ್ತು, ಹೊತ್ತು, ಸಾಕಿ ಸಲುಹಿದ ಮಕ್ಕಳಿಗೆ ಎಲ್ಲವನ್ನೂ ಮಾಡಿಟ್ಟೂ ಅವರಿಂದ ಒಂದು ಚಿಕ್ಕ ಸಹಾಯವನ್ನು ಬಯಸದೆ, ಮಕ್ಕಳಿಗೆ ಯಾವ ಕಷ್ಟವನ್ನೂ ಕೊಡದೆ ಸಾವಿನ ಅಂತ್ಯದವರೆಗೆ ಸ್ವತಂತ್ರ ಜೀವನ ನಡೆಸುವವ; ಉತ್ತಮನು, ಸರ್ವೋತ್ತಮನು. ಈ ಸಾಲಿಗೆ ಸೇರುವವರು, ನಮ್ಮ...

read more
ಮೊಳ ಉದ್ದದ ನಂಗ್, ಅಂಗೈ ಅಗಲದ ಕೊಕ್ಕರ್..

ಮಂಜುನಾಥ್ ಕಾಮತ್ ಯಾವ ಹೊಟೇಲು, ಅಂಗಡಿಗೆ ಹೋದರೂ ನಾವು ಆತ್ಮೀಯತೆಯನ್ನು ಬಯಸುವವರು. ಅದಕ್ಕೆಂದೇ ಉಡುಪಿಯ ಬಂಟ್ಸ್ ಹೊಟೇಲು ಮಧ್ಯಾಹ್ನದ ಊಟಕ್ಕೆ ಖಾಯಂ ಆಗಿತ್ತು. ಸುಚಿತ್ ಹಾಗೂ ನನಗೆ ದೊಡ್ಡ ದೊಡ್ಡ ಮೀನುಗಳೇ ಬೇಕು. ಕೃಷ್ಣಣ್ಣ, ಅರುಣ್ ಸರ್, ಅವಿನಾಶ್ ಗೆಲ್ಲಾ ಇರೋದರಲ್ಲಿ ಸಣ್ಣದು. ಅದಕ್ಕೆ ನಾವು ಹೊಟೇಲ್ ಒಳಗೆ ಕಾಲಿಟ್ಟ ಕೂಡಲೇ...

read more
ನಿಸರ್ಗ ಗೋವು- ನಗರ ಹುಲಿ

ಡಾ ರಾಜೇಗೌಡ ಹೊಸಹಳ್ಳಿ ನಿಸರ್ಗ ಗೋವು. ನಗರ ಹುಲಿ. ಹುಲಿಯೀಗ ಹಸಿವಿಗಾಗಿ ಹುಲ್ಲು ತಿನ್ನುವ ಪ್ರಾಣಿಯೊಂದನ್ನು ತಿನ್ನುತ್ತಿಲ್ಲ. ನೆಲದಾಳದ ಕಬ್ಬಿಣ ಕಲ್ಲಿದ್ದಲು ತೈಲ ಸಕಲಾದಿ ನಿಸರ್ಗ ಸಂಪತ್ತನ್ನೆಲ್ಲಾ ಅಗಿದುಗಿದು ಅಜೀರ್ಣದಿಂದ ನರಳುತ್ತಿದೆ. ಅದಕ್ಕೀಗ ಹೊಟ್ಟೆ ಭಾದೆ. ಯಾವ ಪ್ರಾಣಿ ವೈದ್ಯನಾಗಲೀ ದಯಾಮರಣ ನೀಡುವ ನ್ಯಾಯದ...

read more
ನಾನ್ಯಾವತ್ತೂ ಕದ್ದಿಲ್ಲ ಬಿಡಿ..

ನಾಗೇಶ ಮೈಸೂರು ಕದಿಯೋರಿಗೆ ಬಲಿಯಾಗಿದ್ದುಂಟೇ ಸಿವಾಯಿ ನಾನ್ಯಾವತ್ತೂ ಕದ್ದಿಲ್ಲ ಬಿಡಿ ಹಾಗಂತೆನಲ್ಲ ಸಾಚಾ ಕವನ ; ಕದಿಯೋದು ಕುಲ ಕಸುಬು, ಮನಸಿಗೆ ಕದಿಯೋದಂದ್ರೆ ಅಂತಿಂಥ ಮಾಲಲ್ಲ ಬಿಕರಿ ಅಂಗಡಿಲಿ ಸಿಕ್ಕೋದಲ್ಲ ಬೇಕಂದ್ರು ಕಣ್ಣಿಗೆ ಕಾಣೋದಿಲ್ಲ ಎಷ್ಟೊಂದು ಕದ್ರು ಕರ್ಗೊದೆ ಇಲ್ಲ ದಾಸ್ತಾನು ಪ್ರೀತಿ ಹೆಸರಲ್ ಕದೀತಾರೆ ಮಂದಿ ನೀತಿ...

read more
ಅವರು ನೇರ ಪುಸ್ತಕದಿಂದಲೇ ಹೊರ ಜಿಗಿದರು..

ಅದೊಂದು ವಿಶೇಷ ಕಾರ್ಯಕ್ರಮ. ಯಶವಂತ ಚಿತ್ತಾಲರ ಕಥೆ ಇದೆಯಲ್ಲ.. 'ಕನ್ನಡಿಯಲ್ಲಿ ಕಂಡಾತ ಮನೆಗೂ ಬಂದು ಬಾಗಿಲು ತಟ್ಟಿದ' ಅಂತ ಹಾಗೆ.. ಥೇಟ್ ಹಾಗೇ.. ಅದುವರೆಗೂ ಪುಸ್ತಕದಲ್ಲಿ ಕಂಡವರು ನಮ್ಮ ಮುಂದೆಯೇ ಓಡಾಡುತ್ತಿದ್ದರು. ಮುಗುಳ್ನಗುತ್ತ, ನಗಿಸುತ್ತಾ, ಗಂಭೀರ ಮುಖ ಹೊತ್ತು, ಇಲ್ಲ ನಗುವುದೇ ಇಲ್ಲ ಎನ್ನುವಂತೆ ಮುಖ ಮಾಡಿ, ತೆಳು ನಗು...

read more
ಬಡವಾ… ನಿನ್ನ ಮಡಗಿದ್ದೆಲ್ಲಿ?

ರಾಜಾರಾಂ ತಲ್ಲೂರು ಹಾ ವಿಧಿಯೇ! ಬಡವರೆಂದರೆ ಯಾರು? ಅವರು ಹೇಗಿರುತ್ತಾರೆ? ಅವರೇನು ಮಾಡುತ್ತಾರೆ? ಏನು ತಿನ್ನುತ್ತಾರೆ?... ಇದೆಲ್ಲ ತಿಳಿಯದೆ ಬಡವರ ಉದ್ಧಾರವನ್ನಾದರೂ ಮಾಡುವುದು ಹೇಗೆ?!!! ಸ್ವಾತಂತ್ರ್ಯ ಬಂದು 69 ವರ್ಷಗಳಾಗಿದ್ದರೂ ಈ ದೇಶದ ಸರಕಾರಗಳಿಗೆ ಇನ್ನೂ ಇಲ್ಲಿನ ಬಡವ ಯಾರು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಈ ದೇಶದ...

read more
ಕನಕ-ಕೃಷ್ಣ

ಸವಿತಾ ನಾಗಭೂಷಣ ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ.... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ ಕುದುರಿತು ಹೆಚ್ಚೇನಿಲ್ಲ.... ಕನಕ 'ಬ್ಯಾ'...

read more
ಕನಕದಾಸರ ಮರು ಓದು ಏನು? ಮತ್ತು ಹೇಗೆ?. . .

ಡಾ ಕಿರಣ್ ಎಂ ಗಾಜನೂರು ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ ೧೭ ನಾವು ಕನಕ ಜಯಂತಿಯನ್ನು ಆಚರಿಸುತ್ತಿದ್ದೇವೆ.  ೧೬ನೇ ಶತಮಾನದಲ್ಲಿ ಅಲೋಚಿಸಿದ್ದ ಕನಕನನ್ನು ಇಂದಿನ ನಮ್ಮ ಕಾಲಘಟ್ಟದಲ್ಲಿ ನೆನೆಯೋದು ಅಂದ್ರೆ ಏನು..? ಅಥವಾ ವರ್ತಮಾನದ ನಮ್ಮ ಯಾವ ಅಗತ್ಯದ ಭಾಗವಾಗಿ ಕನಕನನ್ನು ನೆನಪಿಸಿಕೊಳ್ಳುತ್ತಿದ್ದೇವೆ..? ಹೀಗೆ ಒಂದಷ್ಟು...

read more
ನಾನು ಖಂಡಿತ ಕವಿಯಲ್ಲ..

ರಾಜೀವ ನಾರಾಯಣ ನಾಯಕ ೧ ನಾನು ಖಂಡಿತ ಕವಿಯಲ್ಲ ಆದರೆ ಇಷ್ಟು ಹತ್ತಿರ ಬಂದಿರುವಾಗ ಚಂದಿರ ಕವನ ಬರೆಯದಿರುವುದು ಸರ್ವಥಾ ಸರಿಯಲ್ಲ! ೨ ಮೂನ್ ನೋಡ್ತಿದ್ದರೆ ಮೂಡ್ ಏಕೋ ಥರಥರಾ: ಆಗಸದಲ್ಲಿ ಒಂಟಿ ಚಂದಿರ ಸೇಮ್ ನಂಥರ ಆಗಸದಲ್ಲಿ ಪೂರ್ಣ ಚಂದಿರ ಸೇಮ್ ಟು ಸೇಮ್ ನಿಂಥರ! ೩ ನಿನ್ನ ಕಲ್ಲಿನಂಥ ಮೌನವನ್ನು ಇನ್ನೊಂದು ಮೌನದಿಂದ ಕೊಲ್ಲಬಲ್ಲೆ...

read more
ನಿಲಿಂ ಎಂಬ ಅಸ್ಸಾಮಿನ ವಸಂತ

ನಿಲಿಂ ಅಸ್ಸಾಮಿನ ವಸಂತ. ಆತನ ಕಾವ್ಯದಲ್ಲಿ ಅಲ್ಲಿನ ಹಸಿರಿದೆ, ತಂಗಾಳಿಯಿದೆ.. ಹಾಗೆಯೇ ವೇದನೆಯೂ.. ವೃತ್ತಿಯಿಂದ ವೈದ್ಯರಾದ ನಿಲಿಂ ಕವಿತೆಯ ಬೆನ್ನೇರಿ ಹೊರಟಿದ್ದಾರೆ. ಎಚ್ ಎನ್ ಆರತಿ ಅಸ್ಸಾಮಿ ಪಲುಕುಗಳನ್ನು ಕನ್ನಡಕ್ಕೆ ಬಡಿಸಿದ್ದಾರೆ  ಕವಿ - ನಿಲಿಂ ಭಾವಾನುವಾದ - ಆರತಿ.ಎಚ್.ಎನ್. ಖಾಲಿ ಮನೆ! ಬೀಗ ಜಡಿದು, ಮನೆಯವರೆಲ್ಲಾ ಹೊರಟ...

read more
ಅಮ್ಮ ಅಲ್ಲಿ ಮಲಗಿದ್ದರು..

ಅಮ್ಮನ ನೆನಪು ಪಾಲಹಳ್ಳಿ ವಿಶ್ವನಾಥ್ ( ಅಮ್ಮನ ೧೦೮ನೆಯ ಜನ್ಮದಿನದ ಸ೦ದರ್ಭದಲ್ಲಿ )   ಅಮ್ಮ ಅಲ್ಲಿ ಮಲಗಿದ್ದರು. ಎ೦ದೂ ಅವರು ಇಷ್ಟು ನಿಶ್ಚಿ೦ತೆಯಿ೦ದ ಹಾಲಿನ ಮಧ್ಯೆ ಮಲಗಿರಲಿಲ್ಲ. ಅದೂ ಇಷ್ಟು ಜನರ  ಮಧ್ಯೆ.?  ಜನರೇನೂ ಹೊಸಬರಲ್ಲ ಅವರಿಗೆ. ಇದೇ ಹಾಲಿನಲ್ಲಿ ಎಷ್ಟೋ  ಸಭೆಗಳನ್ನು ನಡೆಸಿದ್ದರು. ಅಬಲಾಶ್ರಮದ ಮಹಿಳೆಯರು,...

read more

Pin It on Pinterest

Share This