ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಮೀಕ್ಷೆಗೆ ಕನ್ನಡಕ ಒಯ್ಯಬೇಕು..
-ಉದಯ ಗಾಂವಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತೆಲ್ಲ ಮನೆಗಳ ಮುಂದೆ ಹೋಗಿ ಹೇಳಿದರೆ ಏನೂ ಪ್ರಯೋಜನವಿಲ್ಲ. ಅವರಿಗೆ ಅರ್ಥವಾಗುವಂತೆ ʻಗಣತಿʼ ಎನ್ನಬೇಕು. ಅವರೇ ʻಜಾತಿ ಗಣತಿಯಾ?ʻ ಎಂದು ಕೇಳುತ್ತಾರೆ. ಗಣತಿಯ ಆರಂಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಕಷ್ಟಪಡುತ್ತಿದ್ದೆ. ಮಾತೃ ಪ್ರಧಾನ ಕುಟುಂಬಗಳಿರುವ ಉಡುಪಿ ಜಿಲ್ಲೆಯ...
ಕನ್ನಡ ಅನಾವರಣಗೊಳಿಸುವ ಕಥೆಗಳು
ಡಾ ಹನುಮಂತರಾವ್ ದೊಡ್ಡಮನಿ ಅವರ 'ಶಾರಿ ಶಾಣ್ಯಾ ಆದಾಗ' 'ಶಾಂತಕುಮಾರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಡಿ ಎಂ ನದಾಫ್ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ. ಕಲ್ಯಾಣ ಕರ್ನಾಟಕ ಭಾಗ ಕರುನಾಡಿನ ಉತ್ತರದಲ್ಲಿದ್ದು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಇತಿಹಾಸದಿಂದಾಗಿ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ. ಈ ಭಿನ್ನತೆಯು ಈ...
ಹನುಮಕ್ಕ ಇನ್ನಿಲ್ಲವೆಂಬ ಕಡು ದುಃಖದ ಸಂಗತಿ..
ಡಿ ಎಸ್ ಚೌಗಲೆ ಹನುಮಕ್ಕ ನಮ್ಮನ್ನು ಬಿಟ್ಟು ಹೋದಳೆಂಬ ಸುದ್ದಿ ಬಂದಿದೆ. ರಂಗಭೂಮಿಯ ಅಪ್ಪಟ ಕಲಾವಿದೆ. ಬದುಕಿನ ತಿರುವುಗಳಲ್ಲಿ ಒಂದೆಡೆ ಮಿದುಳಿನ ಆಘಾತಕ್ಕೆ ಒಳಗಾಗಿ ಚಿಕಿತ್ಸೆಗಳಿಗೆ ಈಡಾಗಿ ಸ್ವಲ್ಪ ಚೇತರಿಕೆ ಕಂಡಿದ್ದಳು. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕಾಣುತ್ತದೆ. ಇಂದು ಮರಳಿ ಬಾರದ ಲೋಕಕ್ಕೆ...
ಶ್ರೀನಿವಾಸ ಪ್ರಭು ಅಂಕಣ : ‘Elegant eight’ – ಆ ಗೆಳತಿಯರ ಸಾಂಗತ್ಯ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ..
ತಾತ್ವಿಕ ನೆಲೆಗಳಿಂದಾಚೆಗೆ ಗಾಂಧಿ ಸಮಾಜದ ಉನ್ನತಿಗೆ ಅವಶ್ಯವಾಗಿ ಬೇಕಾಗುತ್ತಾರೆ -ನಾ ದಿವಾಕರ ಚಾರಿತ್ರಿಕವಾಗಿ ನೋಡಿದರೂ, ವರ್ತಮಾನದ ರಾಜಕಾರಣದ ನೆಲೆಯಲ್ಲಿಟ್ಟು ನೋಡಿದರೂ, ಮಹಾತ್ಮ ಗಾಂಧಿ, ಭಾರತದ ಸಮಕಾಲೀನ ಇತಿಹಾಸದಲ್ಲಿ ಕುತೂಹಲಕಾರಿ (intriguing) ವ್ಯಕ್ತಿಯಾಗಿ ಕಾಣುತ್ತಾರೆ. ದ್ವೇಷ ರಾಜಕಾರಣದ ವಿಶಾಲ ಸಂತೆಯಲ್ಲಿ ತಮ್ಮ...
ಕೈಲಾಸಂ ನೆನಪಿನಲ್ಲಿ..
ಅಕ್ಟೋಬರ್ ನಲ್ಲಿ ‘ಬಿಐಸಿ’
ಗಾಂಧಿಯ ಜೀವನ ಒಂದು ಯಾತ್ರೆ..
ಗಾಂಧಿ ಚಿಂತನೆಗಳು: ಭಾಗ -1 ಗಾಂಧಿಯ ಬಗೆಗಿನ ಚಿಂತನೆಗಳು: ಜಾರ್ಜ್ ಆರ್ವೆಲ್ ಅವರ ದೃಷ್ಟಿಕೋನ ಸಂತರನ್ನು ಸದಾ ಅಪರಾಧಿಗಳಂತೆಯೇ ಪರಿಗಣಿಸಬೇಕು, ಅವರು ತಮ್ಮ ನಿರಪರಾಧತ್ವವನ್ನು ಸಾಬೀತುಪಡಿಸುವ ತನಕ. ಆದರೂ, ಈ ಪರೀಕ್ಷೆಯ ವಿಧಾನಗಳು ಪ್ರತಿ ಸಂದರ್ಭದಲ್ಲೂ ಸಮಾನವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮಹಾತ್ಮ ಗಾಂಧಿಯ...
ಗಾಂಧೀ ಸಿಗುವುದಿಲ್ಲ..
ಗಾಂಧೀ ಗೆರೆಗಳು.. -ಸದಾಶಿವ ಸೊರಟೂರು ಗಾಂಧೀ ಚಿತ್ರ ಬರೆಯಲು ಸಾಕುಎರಡೊ, ಮೂರೊ ಗೆರೆಗಳು ಈ ಗಾಂಧೀ ಯಾಕೆ ಅಡಗಿಕೊಂಡರೊಮೂರೇ ಮೂರು ಗೆರೆಗಳಲಿ? ಏನು ಮಾಡುವುದುಉಳಿದ ಗೆರೆಗಳನು? ಯಾರೊ ಹೇಳಿದರು ಅಲ್ಲೊಂದು ಚಿತ್ರದಲ್ಲಿಯಾರಿಗೊ ಕಣ್ಣಿಲ್ಲ.. ಬರೆಯಿರಿ ಕಣ್ಣುಯಾರಿಗೊ ಹಸಿವಿದೆತುಂಡು ರೊಟ್ಟಿಮೈ ಮೇಲೆ ಬಟ್ಟೆಯಿಲ್ಲ ಚೂರು ಅರಿವೆಸೋರುವ...
ಬೆಳಕಾಗಿ ಗಾಂಧಿ..
ಬೆಳಕಾಗಿ ಗಾಂಧಿ -ಎಂ ವಿ ಶಶಿಭೂಷಣ ರಾಜು ಹಾಗೆ ಅದು ಮನಸು ತಳಮಳಗೊಳ್ಳುತ್ತದೆ ಎದೆಯಲಿ ಕಳವಳ ಗಾಳಿದಿಕ್ಕು ಬದಲಿಸಿ ನಿಡಿಸುಯ್ಯುತ್ತದೆ ಅಂಧಕಾರದ ಸುರಂಗ ಮಾತನಾಡುತ್ತದೆ ಪಿಸು ಪಿಸು ಮಾತಲಿ ಒಂದು ವ್ಯಂಗ ಹಚ್ಚಿಯೂ ಹಚ್ಚಿಕೊಳ್ಳದಂತೆ ಇರುವಿಕೆಗೆ ಒಂದು ಸಣ್ಣ ವಿರಾಮ ಬರಿ ಅವಲೋಕಿಸುವುದು ಗಾಳಿ ಎತ್ತ...
Pic through Getty Images
ಅವಧಿ ಮೀರುವ ಮುನ್ನ ಬಾ..
ದುರ್ಗಾಷ್ಟಮಿ.. -ರಂಜನಿ ಪ್ರಭು ಗೋಧೂಳಿ ವೇಳೆಯಲಿಸಂಪಿಗೆಯ ಮರದ ಬಳಿಘಮ್ಮೆನುತನಿಂತವಳೇ ಬೆಳುದಿಂಗಳಿರುಳಲ್ಲಿನೈದಿಲೆಯ ಕೊಳದ ಬಳಿಕಿಲಕಿಲನೆ ನಕ್ಕವಳೇ ಉರಿತೇರನೆಳೆಯುವವೈಶಾಖ ಬೀದಿಯಲಿಥಣ್ಣನೆಯ ಮುಗಿಲ ಕೊಡೆ ಬಿಡಿಸಿದವಳೇ ಗಾಳಿಯಲಿ ಬಳುಕುತಿಹ ಬೆಳೆದ ಪೈರುಗಳಿಗೆಸವಿಯಾದ ತೆನೆಹಾಲ ಕುಡಿಸಿದವಳೇ ಶ್ರಾವಣದ...
ಇಂದು ಪತ್ರಿಕೆ ಇಲ್ಲ; ಪಾಠವೂ ಇಲ್ಲ!
-ಸದಾಶಿವ ಸೊರಟೂರು ಯಾಕೊ ಏನೊ ಈ ಬೆಳಗಿಗೆ ಲಯ ತಪ್ಪಿದೆ. ಕಣ್ಣಲ್ಲಿ ಈಗಷ್ಟೆ ಸೂರ್ಯ ಮೂಡಿದ್ದಾನೆ. ಬಣ್ಣಗೆಟ್ಟ ಸೈಕಲ್ ಮೌನವಾಗಿದೆ. ಎದ್ದವನು ಕೂತ ಹಾಗೆಯೇ ಕೂತಿದ್ದೇನೆ. ಇಂದು ರಜೆ, ಇಂದಷ್ಟೇ ರಜೆ. ಈ ದುಬಾರಿ ರಜೆಯನ್ನು ಖರ್ಚು ಮಾಡುವುದು ಹೇಗೆ? ಏನು ಮಾಡುವುದು ಈ ಬೆಳಗನ್ನು? ಮಲಗುವುದೇ? ನಿದ್ದೆಗೆ ಅವಮಾನ ಮಾಡಿದಂತೆ...
ಅಕ್ಟೋಬರ್ ನಲ್ಲಿ ‘ರಂಗ ಶಂಕರ’
ಮುಖವಾಡದ ಜನಮಾತ್ರ..
ಕಚ್ಚದ ಚೇಳಿನ ಏರದ ಬೇನೆಗೆ.. -ಗೀತಾ ನಾರಾಯಣ್ ಆಗಸ ಮುನಿದು ದಿನ ಮುಗಿದವುಅವನಿಯ ಮೃಚ್ಛಕೀಗ ಸಂಕಟಹೊಂಗೆಯ ಮರದಲ್ಲಿ ಹಕ್ಕಿಗಣ್ಗಳು ಸೋರುತ್ತಿವೆಮುಖವಾಡದ ಜನಮಾತ್ರರೋಬೋಟ್ ಹಿಡಿದು ಮಾರುಕಟ್ಟೆಯಲ್ಲಿ ಬೆವರುತ್ತಿದ್ದಾರೆ ಕಚ್ಚದ ಚೇಳ ಕಂಡು ಅಲ್ಲಮನಿಗೆ ಕಳವಳಏರದ ಬೇನೆಗೆ ಜನ ತತ್ತರಿಸುತ್ತಾರೆನಷ್ಟವೆಂದರೆ ಹಣಕಾಸಿನ ಗಣಿತದಲ್ಲಿ ಜೇಬು...
ಅಕ್ಷರಗಳಲ್ಲಿ ಸಮಾಜ ಕಟ್ಟಿಕೊಟ್ಟ ಭೈರಪ್ಪ..
-ನಾ ದಿವಾಕರ ಸಮಾಜ ಸಂಸ್ಕೃತಿಯ ಬೆಳಕಲ್ಲಿ ಸಾಹಿತ್ಯದ ಮೇರು.. ಎಚ್.ಎಸ್. ಶ್ರೀಮತಿ ಅವರು ತಮ್ಮ “ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂದರ್ಭ” ಕೃತಿಯಲ್ಲಿ ಆರಂಭದಲ್ಲೆ ಹೇಳುವ ಮಾತುಗಳು ಸಾರ್ವಕಾಲಿಕ ಸತ್ಯ. “ಪಿತೃಪ್ರಧಾನ ಸಮಾಜದಲ್ಲಿ ಎಲ್ಲ ಜ್ಞಾನವಲಯಗಳ ಚಿಂತನಾ ಕ್ರಮಗಳಲ್ಲಿಯೂ ʼಮಾನವ ಕೇಂದ್ರಿತʼ ಎಂಬ...
ಮೌನ ಮಾತಾಗುವ ಹೊತ್ತಿಗೆ..
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಜಬೀವುಲ್ಲಾ ಎಂ ಅಸದ್ ಅವರು ಬರೆದ ಬೆನ್ನುಡಿ ಇಲ್ಲಿದೆ. ಸಾಹಿತ್ಯಕ್ಕೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಯಾರದೋ ಕವಿತೆಯ ಸಾಲು, ಯಾರೋ ಕಟ್ಟಿ ಕೊಟ್ಟ ಕಾದಂಬರಿ ಪಾತ್ರ, ಓದಿದ ಕಥೆ ಆ ಹೊತ್ತಿಗೆ ಎದುರಲ್ಲಿರುವ ಕನ್ನಡಿಯೊಳಗಿನ...
ಒಂದು ವಿಚಿತ್ರ ದಿನ..
ಇಂದು ಅಂತರರಾಷ್ಟ್ರೀಯ ಅನುವಾದ ದಿನ. ಎಸ್ ಜಯಶ್ರೀನಿವಾಸ ರಾವ್ ಅವರ ವಿಶೇಷ ಅನುವಾದಿತ ಕವಿತೆಗಳು ಇಲ್ಲಿವೆ. ಮೂಲ : ಕುಂವರ್ ನಾರಾಯಣ್ (ಹಿಂದಿ ಕವಿ) ಸಮಕಾಲೀನ ಆಧುನಿಕ ಹಿಂದಿ ಕಾವ್ಯದ ಖ್ಯಾತ ಕವಿ ಕುಂವರ್ ನಾರಾಯಣ್ ಅವರು 1927 ಸೆಪ್ಟೆಂಬರ್ 19 ರಂದು ಅಯೋಧ್ಯೆಯಲ್ಲಿ ಜನಿಸಿದರು. 1951-ರಲ್ಲಿ, ಅವರು ಲಖ್‌ನೌ...
ಕ್ವೀರ್ ಚಲನಚಿತ್ರೋತ್ಸವ..
ವೀರಲೋಕದಲ್ಲಿ ಹಂಪನಾ @90
ನನ್ನಪ್ಪ ಇವತ್ತು ಇರಬೇಕಿತ್ತು..
-ಎನ್ ರವಿಕುಮಾರ್ ಟೆಲೆಕ್ಸ್ ಪೌರಕಾರ್ಮಿಕ ನಾಗಿದ್ದ ಅಪ್ಪ so ಕಾಲ್ಡ್ ಸಿವಿಲ್ ಸೊಸೈಟಿಯ ಆರೋಗ್ಯಕ್ಕಾಗಿ ಕಸವನ್ನೆಲ್ಲಾ ಬಾಚಿ ಬಳಿಯುತ್ತಲೇ ಸವೆದು ನವೆದು ಕೊನೆಗೆ ಗ್ವಾರೆ ಗುದ್ದಲಿಯನ್ನು ತಬ್ಬಿಕೊಂಡೆ ಜೀವ ಬಿಟ್ಟು ಕಾಲು ಶತಮಾನ ಕಳೆಯುತ್ತಾ ಬಂದಿದೆ. ಅಪ್ಪನಂತ ಲಕ್ಷಾಂತರ "ಜಲಗಾರರು" ಇಂದಿಗೂ ಊರ ಒಳಿತಿಗಾಗಿ ಜೀವ ತೇಯುತ್ತಲೇ...





















