ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಅವ್ವನ ತಾವಿಜ್..

ತಾವಿಜ್…

-ದೇವರಾಜ್ ಹುಣಸಿಕಟ್ಟಿ

ಮೂರು ದೃಷ್ಟಿ ಬೊಟ್ಟಿಟ್ಟು
ತುಸು ವೀಳ್ಯದೆಲೆ ಸುಟ್ಟು..
ಕಸಬರಿಗೆ ನಿವಾಳಿಸಿ…
ನಿವಾಳಿ ತೆಗೆಯುವ ಅವ್ವ…

ನಾನು
ತುಸು ಹಳದಿ
ತುಸು ಸಣ್ಣ
ತುಸು ಕಿರಿ ಕಿರಿ ಹೆಚ್ಚಾದರೆ
ಇಲ್ಲಾ
ತುಸುವೆ ತುಸು
ಬಿಳಿಚಿ ಕೊಂಡರೆ…
ಕೆಂಡ ತುಳಿದವಳಂತೆ…
ಚಡಪಡಿಸುತ್ತಾಳೆ…
ಇಡೀ ಈಶ್ವರನನ್ನೇ
ಒಂದು ಇಂಚಿನ ತಾವಿಜ್ ಅಲ್ಲಿ
ಹಿಡಿದಿಟ್ಟಿನೆಂದೆ ನಂಬುತ್ತಾಳೆ…
ಅವ್ವ…

ಗುಡಿ ಗುಂಡಾರ್ ಸುತ್ತಿ..
ಗೊರವಪ್ಪ ಭೂತಪ್ಪನ
ಕಟ್ಟೆ ಹತ್ತಿ ತರುತ್ತಾಳೆ ತಾವಿಜ್…

ಅವಳ ನಂಬುಗೆಯ
ಈ ಬುಗ್ಗೆ ಒಡೆದು ಆಳುವುದು..
ಸ್ವತಃ ಆ ಶಿವನಿಗೂ ಆಗಲ್ಲವೆನೋ…

ಎರಡು ಸಂಜೆ ಕಳೆದು
ಮಾರನೆಯ ದಿನಕ್ಕೆ

ಆ ಶಿವನು ವಿಲ ವಿಲನೇ ಒದ್ದಾಡಿ..
ಅವ್ವನ ನಂಬಿಕೆಯ ಜೊತೆಗೆ ಗುದ್ದಾಡಿ..
ಸೋತ ಶಿವ
ನಾನು ಚೇತರಿಸಿ ಕೊಂಡಂತೆಯೂ…
ಮಾಡಿಬಿಡುತ್ತಾನೆ…

ಎಂತದೋ ಗಾಳಿ ಶಕವಂತೆ..
ಬಾಲ ಗ್ರಹವಂತೆ…
ಇಂತಹ ಅಂತೆ ಕಂತೆಗಳ…
ಮೆದುಳ ಜೋಳಿಗೆ ತುಂಬಿ ಬಂದ…
ಸುರ್ ಸುರ್ ಬತ್ತಿಗೆಳಿಗೆಲ್ಲ ಮಂತ್ರದಂಡ ನನ್ನ ಅವ್ವನ ತಾವಿಜ್..
ಅದು ಏಕ ಅನೋಕಾ ಚೀಜ್….

‍ಲೇಖಕರು Admin

5 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading